ಜೀವನದಲ್ಲಿ ಯಶಸ್ಸು ತುಂಬಾನೇ ಮುಖ್ಯ. ಯಶಸ್ಸು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಈ ಮಹತ್ವದ ಘಟ್ಟವನ್ನು ಪಾರು ಮಾಡಬೇಕೆಂದರೆ ಜೀವನದಲ್ಲಿ ಕೆಲವೊಂದು ವಸ್ತುಗಳು ಅಥವಾ ವಿಚಾರಗಳನ್ನು ಕೈ ಬಿಡಲೇಬೇಕು. ಅಂದರೆ ಅವುಗಳನ್ನು ತ್ಯಾಗ ಮಾಡಲೇಬೇಕು. ಆಗ ಮಾತ್ರ ಮನುಷ್ಯ ತನ್ನ ಜೀವನದ ಮಹತ್ವವನ್ನು ಪಾರು ಮಾಡಬಲ್ಲ.
ಆಚಾರ್ಯ ಚಾಣಕ್ಯ ಹೇಳ್ತಾರೆ ಜೀವನದಲ್ಲಿ ಯಶಸ್ಸು ಲಭ್ಯವಾಗಬೇಕೆಂದರೆ 5 ವಸ್ತುಗಳನ್ನು ತ್ಯಜಿಸಲೇಬೇಕು. ಅವು ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಆಚಾರ್ಯರು ಒಬ್ಬ ರಾಜನೀತಿ ತಜ್ಞ, ಅರ್ಥಶಾಸ್ತ್ರಜ್ಞ. ಇವರು ನೀತಿಶಾಸ್ತ್ರದ ರಚನೆಯನ್ನು ಸಹ ಮಾಡಿದ್ದಾರೆ. ಇದರಲ್ಲಿ ಜೀವನಕ್ಕೆ ಸಂಬಂಧಪಟ್ಟ ಹಲವು ಗೊತ್ತಿರದ ಮಾಹಿತಿಯನ್ನು ತಿಳಿಸಿದ್ದಾರೆ. ಅಂದು ಬರೆದ ನೀತಿಶಾಸ್ತ್ರ ಇವತ್ತಿಗೂ ಯುವಕರಿಗೆ ಮಾರ್ಗದರ್ಶನವಾಗಿದೆ.
- ಅಹಂಕಾರವನ್ನು ಬಿಟ್ಟುಬಿಡಿ.
ನೀತಿಶಾಸ್ತ್ರದ ಪ್ರಕಾರ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ ವ್ಯಕ್ತಿ ಅಹಂಕಾರದಿಂದ ಮೆರೆಯಬಾರದು. ಆತನ ಅಹಂಕಾರವೇ ಆತನಿಗೆ ಮುಳ್ಳಾಗುತ್ತದೆ. ಯಾವ ವ್ಯಕ್ತಿ ಅಹಂಕಾರವನ್ನು ಹೊಂದಿರುತ್ತಾನೆ ಆತ ಯಾವಾಗ್ಲೂ ಒಳ್ಳೆಯ ಸ್ಥಾನಕ್ಕೆ ಹೋಗಲು ಸಾಧ್ಯವೇ ಇಲ್ಲ. ಅಹಂಕಾರ ಆತನ ಯಶಸ್ಸು ಮತ್ತು ಇಡೀ ಜೀವನವನ್ನು ಸುಟ್ಟು ಹಾಕುತ್ತದೆ. ವ್ಯಕ್ತಿಯ ಜೀವನದಲ್ಲಿ ಕೇವಲ ನಾನೊಬ್ಬನೇ ಎಂಬ ಭಾವನೆ ಇರಬಾರದು. - ಆಲಸ್ಯವನ್ನು ದೂರಮಾಡಿ.
ಆಚಾರ್ಯ ಹೇಳ್ತಾರೆ ಮನುಷ್ಯನ ಅತ್ಯಂತ ದೊಡ್ಡ ಶತ್ರು ಆತನ ಆಲಸ್ಯ. ಇದರ ಕಾರಣದಿಂದಾಗಿ ಆತ ತನ್ನ ಜೀವನದ ಮಹತ್ವದ ಕಾರ್ಯಗಳಲ್ಲಿ ನಷ್ಟವನ್ನು ಅನುಭವಿಸುತ್ತಾನೆ.
ನಕಾರಾತ್ಮಕ ವಿಚಾರ ಬೇಡ.
ಜೀವನದಲ್ಲಿ ಯಶಸ್ಸು ನಮ್ಮದಾಗಬೇಕೆಂದರೆ ಮೊದಲು ನಾವು ನಕಾರಾತ್ಮಕ ವಿಚಾರ ಮಾಡುವುದನ್ನು ನಿಲ್ಲಿಸಬೇಕು. ನಕಾರಾತ್ಮಕ ಶಕ್ತಿಯೂ ನಮ್ಮ ಮಾನಸಿಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಅದ್ದರಿಂದ ಮನುಷ್ಯ ಯಾವತ್ತಿಗೂ ಒಳ್ಳೆಯದನ್ನು ಬಯಸಬೇಕು. ಉತ್ತಮವಾಗಿರುವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
-ಭಯ ಬೇಡ
ಮನುಷ್ಯನ ಜೀವನದಲ್ಲಿ ಭಯ ಎನ್ನುವ ಪದ ಇರಬಾರದು. ಚಾಣಕ್ಯನ ನೀತಿಶಾಸ್ತ್ರದಲ್ಲಿ ಹೀಗೆ ಹೇಳಲಾಗಿದೆ ‘ಒಬ್ಬ ಮನುಷ್ಯ ಯಾವುದೇ ತರಹದ ಭಯದಿಂದ ಕುಗ್ಗಬಾರದು.’ ಆತನ ಭಯ ಸಾಧನೆಯ ಮಾರ್ಗಕ್ಕೆ ಅಡ್ಡಿಯಾಗುತ್ತದೆ. ಭಯವನ್ನು ದೂರಮಾಡಿದ್ದಲ್ಲಿ ಮಾತ್ರ ಮನುಷ್ಯ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
ಜನ ಏನು ಅಂತಾರೆ?
ಆಚಾರ್ಯ ಹೇಳ್ತಾರೆ ಮನುಷ್ಯ ಯಾವತ್ತಿಗೂ ತನಗೆ ಏನು ಸರಿ ಎನಿಸುತ್ತದೆಯೋ ಅದನ್ನೇ ಮಾಡಬೇಕು. ಯಾವ ವಿಷಯದಲ್ಲಿ ಆತನಿಗೆ ರುಚಿ ಇದೆಯೋ ಆ ಕಾರ್ಯವನ್ನೇ ಆತ ಮಾಡಬೇಕು. ಆಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ನಾಲ್ಕು ಜನರ ಭಯದಲ್ಲಿ ನೀವು ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಂಡರೆ ಸಾಧನೆ, ಯಶಸ್ಸು ಎನ್ನುವುದು ನಿಮಗೆ ಕನಸಾಗಿಯೇ ಉಳಿದುಬಿಡುತ್ತದೆ.
ಚಾಣಕ್ಯರ ಈ ವಿಚಾರಗಳನ್ನು ಪಾಲಿಸಿ… ಯಶಸ್ಸು ನಿಮ್ಮದಾಗಿಸಿಕೊಳ್ಳಿ.