ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ. ಅತ್ತ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲಾಗಿದೆ. ಇದರ ಬೆನ್ನಲ್ಲೇ ಸಿ.ಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮತದಾರರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ದೇವೇಗೌಡರ ಕುಟುಂಬ ವರ್ಚಸ್ಸು ಕಳೆದುಕೊಳ್ಳುತ್ತಿದೆ. ಅವರದ್ದು ಕೇವಲ ಸ್ವಾರ್ಥದ ರಾಜಕಾರಣ. ಜನಪರ ಕಾಳಜಿ ಇದ್ದಿದ್ದರೆ ಜನ ಬೆಂಬಲಿಸುತ್ತಿದ್ದರು. ಆದರೆ, ಅವರದ್ದು ಕೇವಲ ಸ್ವಾರ್ಥದ ರಾಜಕಾರಣ. ಹಾಗಾಗಿ ಜನರು ಅವರನ್ನು ತಿರಸ್ಕರಿಸಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.
ನನ್ನ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ನಿರೀಕ್ಷೆ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಗಳಿಗೆ 30 ಸಾವಿರ ಮತಗಳ ಅಂತರದಿಂದ ಗೆಲ್ತೆನೆ ಅಂತಾ ಮಾಹಿತಿ ಕೊಟ್ಟಿದ್ದೆ. ದೇವೇಗೌಡರ ಹೋರಾಟದಲ್ಲಿ ಸಾಮಾಜಿಕ ಕಳಕಳಿ ಇರಲಿಲ್ಲ ಸ್ವಾರ್ಥ ಇತ್ತು, ಕುಟುಂಬದವರನ್ನ ಬೆಳೆಸೋ ಹೋರಾಟ ಅದು ಎಂದು ಟೀಕಿಸಿದರು.
ವಿಜಯೇಂದ್ರ ಅವರು ನನ್ನ ಬ್ಯಾಟರಿ ವೀಕ್ ಆಗಿದೆ ಅಂತಾ ಇದ್ರು ಅವರಿಗೆ ಹೇಳ್ತೆನೆ, ನಿಮ್ಮ ಬ್ಯಾಟರಿ ವೀಕ್ ಆದಾಗ ನಾನು ಚಾರ್ಜ್ ಮಾಡಿದ್ದು , ವಿಜಯೇಂದ್ರ, ಯಡಿಯೂರಪ್ಪ ಷಡ್ಯಂತ್ರದಿಂದ ನಾನು ಎನ್ಡಿಎ ಬಿಟ್ಟೆ. ಇವತ್ತು ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ನಾಯಕತ್ವವನ್ನ ನಮ್ಮ ಜನ ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಅಂತಿಮ ದಿನಗಳನ್ನ ಏಣಿಸುತ್ತಿದೆ ಅಂತಾ ಹೇಳೋಕೆ ಬಯಸುತ್ತೆನೆ. ನಿಖಿಲ್ ಇನ್ನೂ ಯುವಕ ಒಳ್ಳೆದು ಆಗಲಿ, 36 ವರ್ಷದ ಯುವಕ 63 ವರ್ಷದವರ ಥರ ಮಾತಾಡ್ತಾನೆ ಎಂದು ನಿಖಿಲ್ ಅವರಗೆ ಟಾಂಗ್ ಕೊಟ್ಟರು.
ಒಕ್ಕಲಿಗರ ನಾಯಕತ್ವವನ್ನ ದೇವಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ. ದೇವೇಗೌಡರ ಹಠ, ಛಲ ನೋಡಿ ನಾನು ಆಲೋಚನೆ ಮಾಡಿದ್ದೆ ಆದರೆ ಅದಕ್ಕೆ ಜನ ಸೊಪ್ಪು ಹಾಕಲಿಲ್ಲ. ತನ್ನ ಮಗ, ಮೊಮ್ಮಗನ ಬೆಳೆಸೋಕೆ ಹೋದ್ರು. ದೇವಗೌಡರು ತಮ್ಮ ಸಂಧ್ಯಕಾಲದಲ್ಲಿ ಮೊಮ್ಮಗನ ಪರ ಪ್ರಚಾರ ಮಾಡಿದ್ರು ಏನು ಆಗಲಿಲ್ಲ. ಇನ್ನು ಮುಂದೆ ಆದರೂ ಆರಾಮಾಗಿ ಇರಲ್ಲ. ಜಮೀರ್ ಹೇಳಿಕೆ ಏನು ಪರಿಣಾಮ ಬೀರಲಿಲ್ಲ. ಗೆಲುವಿನ ಕ್ರೆಡಿಟ್ ಕಾಂಗ್ರೆಸ್ ಗೆ , ಮುಖ್ಯಮಂತ್ರಿ ಗೆ, ಉಪಮುಖ್ಯಮಂತ್ರಿ ಗೆ ಮತ್ತು ನನ್ನ ಜೊತೆ ಇದ್ದ ಸುರೇಶ್ ಗೆ ಅರ್ಪಿಸುತ್ತೆನೆ.
100 ಕ್ಕೆ 100 ಭಾಗ ಒಕ್ಕಲಿಗರ ಒಲವನ್ನ ದೇವೇಗೌಡರ ಕುಟುಂಬ ಕಳೆದಕೊಳ್ಳುತ್ತಾ ಇದೆ. ಬರೀ ಸ್ವಾರ್ಥ, ಕುಟುಂಬ ಬೆಳೆಸೋಕೆ ಅಷ್ಟೇ. ಈಗೀಗ ಒಕ್ಕಲಿಗರ ಒಲವನ್ನ ದೇವೇಗೌಡ ಕುಟುಂಬ ಕಳೆದುಕೊಳ್ಳುತ್ತಾ ಇದೆ. ಅವತ್ತು ದೇವೇಗೌಡರು ದೈತ್ಯ ಶಕ್ತಿ ಅಂತಾ ಹೇಳಿದ್ದೆ ಇವತ್ತು ಅ ದೈತ್ಯ ಶಕ್ತಿ ಕಡಿಮೆ ಆಗ್ತಿದೆ. ಕುಮಾರಸ್ವಾಮಿ ಗೆ ಅಧಿಕಾರ ದಾಹ ಯಾರನ್ನು ಸಹಿಸಲ್ಲ,ಅಪ್ಪನ್ನು ಸಹಿಸಲ್ಲ, ಮಗನನ್ನು ಸಹಿಸಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ನಿಖಿಲ್ ನ ನಿಲ್ಲಿಸಿದ್ರೆ ಈ ಬಾರಿ ಗೆಲ್ಲುತ್ತಾ ಇದ್ದನೇನೋ. ಆದರೆ ರಾಜೀನಾಮೆ ಕೊಟ್ಟು ಮಂಡ್ಯಗೆ ಹೋಗೋ ಅವಶ್ಯಕತೆ ಏನಿತ್ತು ಎಂದು ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟಿದ್ದಾರೆ ಸಿಪಿ ಯೋಗೇಶ್ವರ್.