ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ನಟ ದರ್ಶನ್ ಪರ ವಕೀಲರ ವಾದವನ್ನು ಆಲಿಸಿದಂತ ಹೈಕೋರ್ಟ್ನ ನ್ಯಾ.ವಿಶ್ವಜಿತ್ ಶೆಟ್ಟಿ ಏಕಸದಸ್ಯ ಪೀಠವು, ಅರ್ಜಿ ವಿಚಾರಣೆಯನ್ನು ಡಿಸೆಂಬರ್ 3 ( ಮಂಗಳವಾರ) ಕ್ಕೆ ಮುಂದೂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ದರ್ಶನ್ಗೆ ವೈದ್ಯರು ತುರ್ತು ಸರ್ಜರಿ ಮಾಡಬೇಕು ಅಂತ ಹೇಳಿದ್ರು ಅಲ್ವಾ.. ಎಂದು ಸಿವಿ ನಾಗೇಶ್ಗೆ ನ್ಯಾಯಮೂರ್ತಿಗಳು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಿವಿ ನಾಗೇಶ್ ಬಿಪಿ ವೇರಿಯೇಷನ್ ದರ್ಶನ್ಗೆ ಸಮಸ್ಯೆ ಆಗ್ತಿದೆ. ಬಿಪಿ ತಹಬದಿಗೆ ಬಂದಾಗ ಸರ್ಜರಿ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಈ ಕೇಸ್ನಲ್ಲಿ 11ನೇ ಆರೋಪಿ ನಾಗರಾಜ್ ವಿಚಾರಣೆ ನಡೆದಿದ್ದು, ಸಾಕ್ಷಿಧಾರ ಮಧುಸೂದನ್ ಹೇಳಿಕೆ ಪ್ರಸ್ತಾಪಿಸಿ ನಾಗರಾಜ್ ಪರ ಸಂದೇಶ್ ಚೌಟ್ ವಾದ ಮಂಡಿಸಿದ್ದಾರೆ. ಪಟ್ಟಣಗೆರೆ ಶೆಡ್ನ ಸೆಕ್ಯೂರಿಟಿ ಮಧುಸೂದನ್ ಸಹಿ ಚೆಕ್ ಲಿಸ್ಟ್ನಲ್ಲಿ ಅನುಮಾನ ಮೂಡಿದೆ. ಆರೋಪಿ ನಾಗರಾಜ್ ಬಂಧಿಸಿದಾಗ ಮಧುಸೂದನ್ ಠಾಣೆಯಲ್ಲಿ ಏನು ಮಾಡ್ತಿದ್ರು..? ಪೊಲೀಸರ ಪ್ರತ್ಯಕ್ಷ ಸಾಕ್ಷಿ ಬಗ್ಗೆ ಸಂದೇಶ್ ಚೌಟಗೆ ಅನುಮಾನ ಮೂಡಿದ್ದು, ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲೇಖಿಸಿ ಹಾಗೂ ಪಂಕಜ್ ಬಂಸಲ್ ಪ್ರಕರಣ ಉಲ್ಲೇಖಸಿ ಸಂದೇಶ್ ಚೌಟ ವಾದ ಮಂಡಿಸಿದ್ದಾರೆ. ಪೊಲೀಸರ ತನಿಖೆ ಸಾಕಷ್ಟು ಅನುಮಾನ ಮೂಡಿಸ್ತಿದ್ದು, ಅವರಿಗೆ ಹೇಗೆ ಬೇಕೋ ಹಾಗೆ ಹೇಳಿಕೆ ಪಡೆದಿದ್ದಾರೆ ಎಂದು ಸಂದೇಶ್ ಚೌಟ ವಾದಿಸಿದ್ದಾರೆ.
ರೇಣುಕಾಸ್ವಾಮಿ ಆರೋಪಿಗಳ ಬಂಧನ ಪ್ರಕ್ರಿಯೆಯಲ್ಲೇ ಪೊಲೀಸರು ಎಡವಿದ್ದಾರೆ ಎಂದು ವಕೀಲ ಸಂದೇಶ್ ಚೌಟ ವಾದಿಸಿದ್ದಾರೆ. ಆರೋಪಿಗಳ ಬಂಧನ ಮಾಡುವಾಗ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಿಲ್ಲ. ರಿಮ್ಯಾಂಡ್ ಅರ್ಜಿ & ಆರ್ಡರ್ ಶೀಟ್ನಲ್ಲಿ ಉಲ್ಲೇಖ ಮಾಡಿಲ್ಲ ಯಾಕೆ..? ಬಂಧನದ ಬಗ್ಗೆ ಉಲ್ಲೇಖ ಮಾಡುವುದು ಕಡ್ಡಾಯ ಅಂತ ಸುಪ್ರೀಂ ಹೇಳಿದೆ ಎಂದು ವಕೀಲ ಸಂದೇಶ ಚೌಟ ಪ್ರಬಲ ವಾದ ಮಂಡಿಸಿದ್ದಾರೆ. ಸುಪ್ರೀಂ ಆದೇಶದಂತೆ ಬಂಧನಕ್ಕೆ ಆಧಾರ ನೀಡಬೇಕು, ಆರೋಪಿಗಳ ಬಂಧನಕ್ಕೆ ಸೂಕ್ತ ಆಧಾರ ಕಡ್ಡಾಯ. ನಾನು ತಾಂತ್ರಿಕ ವಿಚಾರಗಳ ಬಗ್ಗೆ ಮಾತ್ರ ವಾದಿಸುತ್ತಿದ್ದೇನೆ, ನಾನು ಇನ್ನು ಪ್ರಕರಣದ ಮೆರಿಟ್ ಗೆ ಹೋಗುತ್ತಿಲ್ಲ ಎಂದು ಹೈಕೋರ್ಟ್ ನಲ್ಲಿ ವಕೀಲ ಸಂದೇಶ್ ಚೌಟ ವಾದಿಸಿದ್ದಾರೆ.