ರಾಜಮೌಳಿ ಜೊತೆ ಸಿನಿಮಾ ಮಾಡಿದರೆ ಆ ಹೀರೋನ ಮುಂದಿನ ಸಿನಿಮಾ ಸೋಲು ಕಾಣುತ್ತದೆ ಎಂಬುದು ಅನೇಕರ ನಂಬಿಕೆ. ಕಾಕತಾಳಿಯ ಎಂಬಂತೆ ಇದು ಅನೇಕ ಬಾರಿ ನಿಜ ಕೂಡ ಆಗಿದೆ.
ರಾಜಮೌಳಿ ಜೊತೆ ಸಿನಿಮಾ ಮಾಡಿರೋ ಎಲ್ಲರೂ ಕೂಡ ಲತ್ತೆ ಹೊಡೆದಿದ್ದಾರೆ. ಉದಾಹರಣೆಗೆ ಸ್ಟಾರ್ ಸಿನಿಮಾ ಬಾಹುಬಲಿ ಆದಮೇಲೆ ಪ್ರಭಾಸ್ ಮಾಡಿದ ಯಾವ ಸಿನಿಮಾನು ಹಿಟ್ ಆಗಲಿಲ್ಲ. ಹಾಗೇಯೇ ಬಾಹುಬಲಿ ನಂತರ ಅನುಷ್ಕಾಗೆ ಹಿಟ್ ಸಿನಿಮಾ ಕೂಡ ಸಿಗಲಿಲ್ಲ, ಇತ್ತ ನೋಡುವುದಾದರೆ ಅವರಿಗೆ ಮದುವೆಯೂ ಕೂಡ ಆಗಲಿಲ್ಲ. ರಾನಾ ದಗ್ಗುಬಾಟಿ ಅವರಿಗೂ ಬಾಹುಬಲಿ ನಂತರ ಯಾವ ಸಿನಿಮಾನು ಹಿಟ್ ಕೊಡಲಿಲ್ಲ. ಈಗ ಡೇವಿಡ್ ವಾರ್ನರ್ ಅವರಿಗೂ ರಾಜಮೌಳಿ ಜೊತೆ ಕೆಲಸ ಮಾಡಿದ ಶಾಪ ತಟ್ಟಿದೆ ಎಂದು ಅನೇಕರು ಅನೇಕರು ಮಾತನಾಡಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಹಿಂದೆ ರಾಜಮೌಳಿ ಹಾಗೂ ವಾರ್ನರ್ ಕ್ರೆಡ್ ಜಾಹೀರಾತಿನಲ್ಲಿ ಒಟ್ಟಾಗಿ ನಟಿಸಿದ್ದರು. ರಾಜಮೌಳಿ ಅವರು ವಾರ್ನರ್ ಜೊತೆ ಸಿನಿಮಾ ಮಾಡುವ ರೀತಿಯಲ್ಲಿ ಜಾಹೀರಾತು ಮೂಡಿ ಬಂದಿತ್ತು. ಈ ಜಾಹೀರಾತು ಈಗ ಮತ್ತೆ ವೈರಲ್ ಆಗಿದೆ.
ರಾಜಮೌಳಿ ಅವರ ಜೊತೆ ವಾರ್ನರ್ ಕೆಲಸ ಮಾಡಿದ ಕಾರಣಕ್ಕೆ ಅವರು ಅನ್ಸೋಲ್ಡ್ ಆಗಿ ಉಳಿದರು ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ‘ರಾಜಮೌಳಿ ಶಾಪ ನಿಜ’ ಎಂದು ಕೆಲವರು ಹೇಳಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮೀಮ್ಗಳು ಹರಿದಾಡುತ್ತಿವೆ.