ಮುಂಗಾರುಮಳೆ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಮೈಲಿಗಲ್ಲು ಚಿತ್ರ. ಅದು ತೆರೆಕಂಡು 18 ವರ್ಷಗಳೇ ಕಳೆದಿದೆ. ಇದೀಗ ಅದೇ ತಂಡ, ಅಂದ್ರೆ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಿರ್ಮಾಪಕರಾದ ಇ. ಕೃಷ್ಣಪ್ಪ ಮತ್ತೆ ಒಂದಾಗಿದ್ದಾರೆ. ಹೊಸ ಪ್ರತಿಭೆಗಳನ್ನ ಇಟ್ಕೊಂಡು “ಮನದ ಕಡಲು” ಅನ್ನೋ ಸಿನಿಮಾ ತೆರೆಗೆ ತರುತ್ತಿದ್ದಾರೆ. ಮ ಅಕ್ಷರ ಭಟ್ರಿಗೆ ಲಕ್ಕಿ ಇರಬಹುದು, ಹಾಗಾಗಿ ಈ ಹೆಸರನ್ನ ಇಟ್ಕೊಂಡು ಸಿನಿಮಾನ ತೆರೆಗೆ ತರಲು ಸಜ್ಜಾಗಿದ್ದಾರೆ ಭಟ್ರು ಟೀಂ. ಇದೊಂದು ತ್ರಿಕೋನ ಪ್ರೇಮಕಥೆಯ ಸಿನಿಮಾ ಎಂಬುದು ವಿಶೇಷ.
ಅಂದು ಮುಂಗಾರುಮಳೆ.. ಇಂದು ಮನದ ಕಡಲು. ಟೈಟಲ್ನಲ್ಲೇ ಮೋಡಿ ಮಾಡುತ್ತಿರೋ ಈ ಸಿನಿಮಾ ಹೊಸ ಅಧ್ಯಾಯ ಬರೆಯಲು ಸಜ್ಜಾಗುತ್ತಿದೆ. ಹೊಚ್ಚ ಹೊಸ ಪ್ರತಿಭೆಗಳ ಜೊತೆ ಯೋಗರಾಜ್ ಭಟ್ ಪಯಣಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಹೊಸ ಪ್ರತಿಭೆ ಸುಮುಖ್ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಇವರ ಜೊತೆ ರಾಶಿಕಾ & ಅಂಜಲಿ ಇಬ್ಬರೂ ಹೆಜ್ಜೆ ಹಾಕುತ್ತಿದ್ದಾರೆ.
ಭಟ್ರಿಗೆ ದತ್ತಣ್ಣ ಮತ್ತು ರಂಗಾಯಣ ರಘು ಸಾಥ್ ಕೊಡುತ್ತಿದ್ದಾರೆ. ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ಇದ್ರೆ, ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.