ಆಮೀರ್ ಖಾನ್.. ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್. ಸಿನಿಮಾಗಳ ಸಂಖ್ಯೆಗಿಂತ ಅವುಗಳ ಕ್ವಾಲಿಟಿಗೆ ಜಾಸ್ತಿ ಒತ್ತು ಕೊಡೋ ಈತನ ಒಂದೊಂದು ಸಿನಿಮಾ ಕೂಡ ಒಂದೊಂದು ದಂತಕಥೆ. ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ ಹೀಗೆ ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ಪಳಗಿರೋ ಇವರು, ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರೋ ಆಮೀರ್ ಖಾನ್, ನಮ್ಮ ಬೆಂಗಳೂರು ಅಳಿಯ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.
ಯೆಸ್.. ಆಮೀರ್ 2002ರಲ್ಲಿ ತಮ್ಮ ಮೊದಲ ಪತ್ನಿ ರೀನಾ ದತ್ತಾಗೆ ವಿಚ್ಚೇದನ ನೀಡಿದ ಬಳಿಕ 2005ರಲ್ಲಿ ಕಿರಣ್ ರಾವ್ ಎಂಬುವವರ ಕೈ ಹಿಡಿದರು. ಅವರ ಈ ಎರಡನೇ ಮದುವೆಗೆ ಇಡೀ ಬಾಲಿವುಡ್ ದಂಗಾಗಿತ್ತು. ಆದ್ರೀಗ 2021ರಲ್ಲಿ ಎರಡನೇ ಪತ್ನಿಗೂ ಡಿವೋರ್ಸ್ ನೀಡಿದ್ರು ಆಮೀರ್ ಖಾನ್. ಅರೇ.. ಸಿನಿಮಾಗಳಲ್ಲಿ ಹೀರೋಯಿನ್ಸ್ ನ ಬದಲಿಸಿದಂತೆ ಪತ್ನಿಯರನ್ನ ಬದಲಿಸ್ತಾರಲ್ರಪ್ಪಾ ಈ ಆಮೀರ್ ಅಂತ ಹುಬ್ಬೇರಿಸೋರಿಗೆ ಮತ್ತೊಮ್ಮೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಆಮೀರ್ ಖಾನ್. ಈಗ ತಮ್ಮ 60ನೇ ಬರ್ತ್ ಡೇ ವಿಶೇಷ ಹೊಸ ರಿಲೇಷನ್ ಶಿಪ್ ಬಗ್ಗೆ ಅಫಿಶಿಯಲಿ ಅನೌನ್ಸ್ ಮಾಡಿದ್ದಾರೆ. ಹೌದು.. ದುರಂತ ಅಂದ್ರೆ ಆಮೀರ್ ಮೂರನೇ ಪಾರ್ಟ್ನರ್ ಗೌರಿ ಸ್ಟ್ರಾಟ್ ದು ಕೂಡ ನಮ್ಮ ಬೆಂಗಳೂರೇ.
ಗೌರಿ ಸ್ಟ್ರಾಟ್ ಬಗ್ಗೆ ಆಮೇಲೆ ಹೇಳ್ತೀವಿ.. ಅದಕ್ಕೂ ಮುನ್ನ ಆಮೀರ್ ಎರಡನೇ ಪತ್ನಿ ಕಿರಣ್ ರಾವ್ ಬಗ್ಗೆ ಹೇಳಿ ಬಿಡ್ತೀವಿ ಕೇಳಿ. ಈ ಕಿರಣ್ ರಾವ್ ಅಪ್ಪಟ ಕನ್ನಡತಿ. ಇಲ್ಲೇ ನಮ್ಮ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹುಟ್ಟಿ ಬೆಳೆದ ಅಚ್ಚ ಕನ್ನಡತಿ. ಇಂದಿಗೂ ಅವರ ತಂದೆ- ತಾಯಂದಿರು ಇದೇ ಮಲ್ಲೇಶ್ವರಂನಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಪೋಷಕರನ್ನ ನೋಡಲು ಬಂದಿದ್ದ ಕಿರಣ್ ರಾವ್, ಮಲ್ಲೇಶ್ವರಂನ ಫೇಮಸ್ ಫುಡ್ ಸ್ಪಾಟ್ ಗಳಲ್ಲಿ ಮಸಾಲ ದೋಸೆ ಸವಿದಿದ್ದರು. ಇನ್ನು ನಿರ್ದೇಶಕಿ, ನಿರ್ಮಾಪಕಿಯಾಗಿ ಈಕೆಯ ಚಿತ್ರಗಳು ಆಸ್ಕರ್ ಅಂಗಳಕ್ಕೆಲ್ಲಾ ಕಾಲಿಡುತ್ತವೆ ಅಂದ್ರೆ, ಅದಕ್ಕೆಲ್ಲಾ ಕಾರಣ ಒನ್ ಅಂಡ್ ಓನ್ಲಿ ಆಮೀರ್.
ಹೌದು.. ಕಿರಣ್ ರಾವ್ ಅಕ್ಷರಶಃ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಗರಡಿಯಲ್ಲಿ ಪಳಗಿದ ಪ್ರತಿಭೆ. ಲಗಾನ್ ಸಿನಿಮಾದ ಸೆಟ್ ನಲ್ಲಿ ಆಮೀರ್ ಜೊತೆ ಪರಿಚಯಗೊಂಡ ಕಿರಣ್ ರಾವ್, ಆಮೀರ್ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದ್ರು. ನಂತ್ರ ಅವರ ಮಧ್ಯೆ ಸ್ನೇಹ, ಪ್ರೇಮಾಂಕುರಿಸಿ ಅದಕ್ಕೆ ಒಬ್ಬ ಮಗ ಕೂಡ ಸಾಕ್ಷಿ ಆದನು. ಕಿರಣ್ ರಾವ್ ಜೊತೆ ಸಹ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಆಮೀರ್, ಪರಸ್ಪರ ವಿಚ್ಚೇದನ ಪಡೆದರು. ಈಗಲೂ ಕನ್ನಡತಿ ಕಿರಣ್ ರಾವ್ ಗೆ ಆಮೀರ್ ಮೇಲೆ ಕೋಪ ಇಲ್ಲ. ಆಮೀರ್ 60ನೇ ಬರ್ತ್ ಡೇ ಗೆ ಆಕೆ ಶುಭ ಕೋರಿದ ಪರಿ ನೋಡಿದ್ರೆ ಅವರಿಬ್ಬರ ಮಧ್ಯೆ ಎಂಥಾ ಸಂಬಂಭವಿದೆ ಅನ್ನೋದು ಕಾತರಿ ಆಗಲಿದೆ.
ಈಗ ಗೌರಿ ವಿಷಯಕ್ಕೆ ಬರೋಣ. ಒನ್ಸ್ ಅಗೈನ್ ಆಮೀರ್ ಹೊಚ್ಚ ಹೊಸ ಗರ್ಲ್ ಫ್ರೆಂಡ್ ಈ ಗೌರಿ ಕೂಡ ನಮ್ಮ ಬೆಂಗಳೂರಿನವರೇ. ಲಂಡನ್ ನಲ್ಲಿ ವ್ಯಾಸಂಗ ಮುಗಿಸಿರೋ ಗೌರಿ, ಆಮೀರ್ ಜೊತೆ 25 ವರ್ಷಗಳಿಂದ ಟಚ್ ನಲ್ಲಿ ಇದ್ರಂತೆ. ಆದ್ರೆ ಕೊಂಚ ಗ್ಯಾಪ್ ನ ಬಳಿಕ ಮತ್ತೆ ಇವರ ಮಧ್ಯೆ ಒಂದು ಸುಂದರ ಸಂಬಂಧ ಏರ್ಪಟ್ಟಿದೆ. ಕಳೆದ 18 ತಿಂಗಳಿಂದ ಆಮೀರ್ ಗೌರಿ ಜೊತೆ ಲೈಫ್ ಲೀಡ್ ಮಾಡ್ತಿದ್ದಾರಂತೆ.
ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಸಲೂನ್ ಗಳನ್ನ ಹೊಂದಿರೋ ಗೌರಿ, ಉದ್ಯಮಿಯೂ ಹೌದು. ಸದ್ಯ ಆಮೀರ್ ಖಾನ್ ಪ್ರೊಡಕ್ಷನ್ ನಲ್ಲಿ ಕೆಲಸ ಕೂಡ ಮಾಡ್ತಿದ್ದಾರಂತೆ. ಅಂದಹಾಗೆ ಗೌರಿ ಏನೂ ಸಣ್ಣ ಹುಡ್ಗಿ ಅಲ್ಲ, ಆಕೆಗೂ ಮದ್ವೆ ಆಗಿ ಆರು ವರ್ಷದ ಮಗನಿದ್ದಾನಂತೆ. ಗೌರಿಯನ್ನ ತನ್ನ ಫ್ಯಾಮಿಲಿಗೆ ಪರಿಚಯಿಸಿರೋ ಆಮೀರ್, ಶಾರೂಖ್ ಖಾನ್, ಸಲ್ಮಾನ್ ಖಾನ್ ಗೂ ಪರಿಚಯಿಸಿದ್ದಾರಂತೆ. ಲಗಾನ್ ಚಿತ್ರದಲ್ಲಿ ಆಮೀರ್ ಪಾತ್ರದ ಹೆಸರು ಭುವನ್. ಅದರ ನಾಯಕಿಯ ಹೆಸರು ಗೌರಿ. ಮಾಧ್ಯಮದವರ ಬಳಿ ಸ್ವತಃ ಆಮೀರವ ಖಾನ್ ಅವರೇ ಭುವನ್ ಕೊನೆಗೂ ಗೌರಿಯನ್ನು ಪಡೆದನು ಅಂತ ಹೇಳಿಕೊಂಡಿದ್ದಾರೆ.
ಪದ್ಮ ಶ್ರೀ, ಪದ್ಮ ಭೂಷಣ ಪುರಸ್ಕೃತ ಆಮೀರ್ ಖಾನ್ ಸಿನಿಮಾಗಳಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆದಂತೆ ಲೈಫ್ ನಲ್ಲೂ ಮಿಸ್ಟರ್ ಪರ್ಫೆಕ್ಟ್ ಆಗಿದ್ದಿದ್ರೆ ಚೆನ್ನಾಗಿರ್ತಿತ್ತು. ಸಾಲು ಸಾಲು ಮದುವೆಗಳು, ಸಂಬಂಧಗಳಿಂದ ಸಮಾಜಕ್ಕೆ ಏನು ಸಾರೋಕೆ ಹೊರಟವ್ರೆ ಅನ್ನೋದೇ ಯಕ್ಷ ಪ್ರಶ್ನೆ. ಅದರಲ್ಲೂ ಬೆಂಗಳೂರು ಹುಡ್ಗಿಯರ ಹಿಂದೆ ಬೀಳ್ತಿರೋದ್ಯಾಕೆ ಅನ್ನೋದು ಕೂಡ ಬಿಲಿಯನ್ ಡಾಲರ್ ಪ್ರಶ್ನೆ.