60ನೇ ವರ್ಷಕ್ಕೆ 3ನೇ ಬಾರಿ ಪ್ರೀತಿಯಲ್ಲಿ ಬಿದ್ದ ಆಮಿರ್ ಖಾನ್‌​!

14 (13)

ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಇಂದು 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬ ಮತ್ತು ಹೋಳಿ ಹಬ್ಬವನ್ನು ಒಂದೇ ದಿನದಲ್ಲಿ ಸಂಭ್ರಮಿಸುತ್ತಿರುವ ಅವರು, ತಮ್ಮ ವೈಯಕ್ತಿಕ ಜೀವನದ ಕುರಿತು ಮತ್ತೆ ಸುದ್ದಿಯಲ್ಲಿದ್ದಾರೆ. ಮೊದಲಿಗೆ ರೀನಾ ದತ್ತ ನಂತರ ಕಿರಣ್ ರಾವ್ ಅವರೊಂದಿಗೆ ದಾಂಪತ್ಯ ಜೀವನ ನಡೆಸಿದ ಆಮಿರ್, ಇದೀಗ ಮೂರನೇ ಬಾರಿಗೆ ಮದುವೆಯಾಗುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಅವರ ಜೀವನದಲ್ಲಿ ಹೊಸ ಪ್ರೀತಿ ಪ್ರವೇಶಿಸಿರುವುದು ಗೌರಿ ಸ್ಪ್ರಾಟ್.

60ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್​​ ನಟ ಗ್ರ್ಯಾಂಡ್ ಬರ್ತ್​ಡೇ ಪಾರ್ಟಿಯನ್ನು ಆಯೋಜಿಸಿದ್ದರು. ಈ ಬರ್ತ್​ಡೇ ಪಾರ್ಟಿಗೆ ಶಾರುಖ್​ ಖಾನ್​ರನ್ನು ಕೂಡ ಆಹ್ವಾನಿಸಿದ್ದರು. ಬರ್ತ್​ಡೇ ಪಾರ್ಟಿಯಲ್ಲಿ ಗೌರಿಯನ್ನು ಪರಿಚಯಿಸಿದ ಅಮೀರ್​. ಗೌರಿ ಜೊತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ADVERTISEMENT
ADVERTISEMENT

ಆಮಿರ್ ಖಾನ್ ತಮ್ಮ ಹೊಸ ಸಂಬಂಧದ ಬಗ್ಗೆ ಮಾತನಾಡುತ್ತ, ಗೌರಿ ಸ್ಪ್ರಾಟ್ ಮೂಲತಃ ಬೆಂಗಳೂರಿನವರಾಗಿದ್ದು, ಬಾಲಿವುಡ್ ಮತ್ತು ಉದ್ಯಮ ಪ್ರಪಂಚದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ಆಮಿರ್ ಮತ್ತು ಗೌರಿ ಕಳೆದ 25 ವರ್ಷಗಳಿಂದ ಒಬ್ಬರನ್ನೊಬ್ಬರಿಗೂ ಪರಿಚಯವಿದೆ. ತಂದೆ ತಾಯಿ ತಮಿಳು ಹಾಗೂ ಐರಿಷ್​ ಮೂಲದವರು. ಬೆಂಗಳೂರಿನ ಗೌರಿ ಸಪ್ರೋಟ್​ಗೆ ಈಗಾಗಲೇ 6 ವರ್ಷದ ಮಗನಿದ್ದಾನೆ.

ಆಮಿರ್ ಖಾನ್ ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2007ರ ‘ತಾರೇ ಜಮೀನ್ ಪರ್’ ಸಿನಿಮಾದ ಮುಂದುವರಿದ ಭಾಗವಾಗಿ ಈ ಚಿತ್ರ ಜೂನ್ 2025ರಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ, ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ‘ಲಾಹೋರ್ 1947’ ಎಂಬ ಐತಿಹಾಸಿಕ ಸಿನಿಮಾವನ್ನು ಸಹ ಅವರು ನಿರ್ಮಿಸುತ್ತಿದ್ದಾರೆ.

Exit mobile version