ನಟಿ ಶ್ರೀಲೀಲಾ ತಮ್ಮ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದರು. ‘ಕಿಸ್’, ‘ಭರಾಟೆ’ ಸಿನಿಮಾಗಳಿಂದ ಬೆಳೆದ ಅವರ ಖ್ಯಾತಿ, ತೆಲುಗಿನ ‘ಪೆಳ್ಳಿ ಸಂದಡಿ’ ಸಿನಿಮಾದೊಂದಿಗೆ ಟಾಲಿವುಡ್‌ನಲ್ಲಿ ಮಿಂಚಿದ್ದರು. ಇದೀಗ ಬಾಲಿವುಡ್ ಕಡೆಗೆ ತಮ್ಮ ಹೆಜ್ಜೆ ಹಾಕುತ್ತಿರುವ ಅವರು, ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಎಲ್ಲರ ಮನ ಗೆದ್ದಿದ್ದಾರೆ.
ಶ್ರೀಲೀಲಾ ತಮ್ಮ 21ನೇ ವಯಸ್ಸಿನಲ್ಲೇ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಅರಿತು, ಮಾತೃಶ್ರೀ ಮನೋವಿಕಾಸ ಕೇಂದ್ರದಿಂದ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಅಂದಿನಿಂದ ಆ ಮಕ್ಕಳಿಗೆ ತಾಯಿಯಂತೆ ಪಾಲನೆಯಲ್ಲಿದ್ದಾರೆ. ಇದೀಗ ಅವರು ಮೂರನೇ ಮಗು ಎನ್ನಬಹುದಾದ ಪುಟ್ಟ ಕಂದಮ್ಮನನ್ನು ದತ್ತು ಪಡೆದಿರುವುದು ಭಾರಿ ಶ್ಲಾಘನೀಯ ಸಂಗತಿಯಾಗಿದೆ. “ಮನೆಗೆ ಮತ್ತೊಂದು ಪುಟ್ಟ ಸದಸ್ಯೆ ಆಗಮಿಸಿದೆ” ಎಂದು ಅವರು ಸಂತಸಭರಿತವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಆ ಪುಟ್ಟ ಮಗುವಿನ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಬಾಲಿವುಡ್ ನಟನ ಜೊತೆ ಕಿಸ್ ಬೆಡಗಿ ಶ್ರೀಲೀಲಾ ಡೇಟಿಂಗ್
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಡೇಟಿಂಗ್ ಮಾಡೋದು ಬ್ರೇಕಪ್ ಮಾಡಿಕೊಳ್ಳೊದು ಸಾಮಾನ್ಯವಾಗಿದೆ. ಸೆಲೆಬ್ರಿಟಿಗಳ ಡೇಟಿಂಗ್ ವಂದತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಇದೀಗ ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಮತ್ತು ದಕ್ಷಿಣ ಭಾರತದ ಸುಂದರಿ ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗ ಭಾರಿ ಸದ್ದು ಮಾಡುತ್ತಿದೆ.
ಇತ್ತೀಚೆಗೆ 2025ರ IIFA ಪ್ರಶಸ್ತಿ ಸಮಾರಂಭದಲ್ಲಿ ಕಾರ್ತಿಕ್ ಅವರ ತಾಯಿ ಮಾಲಾ ತಿವಾರಿ ತಮ್ಮ ಮಗನ ಜೊತೆ ಕಾಣಿಸಿಕೊಂಡಿದ್ದರು. ಈ ವೇಳೆ ಮಾಲಾ ತಿವಾರಿ ಅವರ ಮಗನ ಡೇಟಿಂಗ್ ವದಂತಿ ಬಗ್ಗೆ ಮಾತನಾಡಿದ ಅವರು ನಟಿ ಶ್ರೀಲೀಲಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ.
2025ರ IIFA ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಾರ್ತಿಕ್ ತಾಯಿ ಭಾಗಿಯಾಗಿದ್ದು, ಅವರಿಗೆ ಭಾವಿ ಸೊಸೆಯ ನಿರೀಕ್ಷೆಗಳ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರ್ತಿಕ್ ತಾಯಿ, ತಮ್ಮ ಮಗನ ಪತ್ನಿ ಉತ್ತಮ ವೈದ್ಯೆಯಾಗಿರಬೇಕು ಎಂದು ಬಹಿರಂಗಪಡಿಸಿದ್ದಾರೆ.
ಕಾರ್ತಿಕ್ ಅವರ ಕುಟುಂಬದ ಬೇಡಿಕೆ ಏನೆಂದರೆ ಆಕೆ ತುಂಬಾ ಒಳ್ಳೆಯ ವೈದ್ಯೆಯಾಗಿರಬೇಕು ಎಂದು ಅವರು ಹೇಳಿದ್ದರು. ಆಶ್ಚರ್ಯ ಸಂಗತಿಯೆಂದರೆ, ಶ್ರೀಲೀಲಾ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದು, ಈ ಹೇಳಿಕೆ ಅವರ ಮೇಲೆಯೇ ಇರಬಹುದು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಕಾರ್ತಿಕ್ ಮತ್ತು ಶ್ರೀಲೀಲಾ ಡೇಟಿಂಗ್ ಮಾಡುತ್ತಿರುವ ಸಾಧ್ಯತೆಗಳು ಮತ್ತಷ್ಟು ಬಲಗೊಂಡಿವೆ.
ಕನ್ನಡದ ನಟಿ ಶ್ರೀಲೀಲಾ ಕೂಡ ವೈದ್ಯೆ ಆಗಲು ಮೆಡಿಕಲ್ ಓದುತ್ತಿದ್ದಾರೆ. ಆದರೆ ಬಾಲಿವುಡ್ ನಟ ಕಾರ್ತಿಕ್ ಅಥವಾ ಶ್ರೀಲೀಲಾ ತಮ್ಮ ಸಂಬಂಧದ ಬಗ್ಗೆ ಇಲ್ಲಿಯವರೆಗೆ ದೃಢಿಕರಿಸಿಲ್ಲ. ಇದಕ್ಕೂ ಮುನ್ನ, ಕಾರ್ತಿಕ್ ಅವರ ಕುಟುಂಬ ಆಯೋಜಿಸಿದ್ದ ಫ್ಯಾಮಿಲಿ ಫಂಕ್ಷನ್‌ನಲ್ಲಿ ಶ್ರೀಲೀಲಾ ಪಾಲ್ಗೊಂಡಿದ್ದರು. ಕಾರ್ತಿಕ್ ಆರ್ಯನ್ ಮತ್ತು ಅವರ ಕುಟುಂಬವು ತಮ್ಮ ವೈದ್ಯಕೀಯ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ತಮ್ಮ ಸಹೋದರಿ ಡಾ. ಕೃತಿಕಾ ತಿವಾರಿಗಾಗಿ ಕಾರ್ಯಕ್ರಮ ಆಯೋಜಿಸಿದ್ದರು.
ಬಾಲಿವುಡ್ ನಟ ಕಾರ್ತಿಕ್ ಅವರ ಫ್ಯಾಮಿಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಶ್ರೀಲೀಲಾ ಕೂಡ ಭಾಗವಹಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ಕಾರ್ತಿಕ್ ಮತ್ತು ಶ್ರೀಲೀಲಾ ಫ್ಯಾಮಿಲಿ ಪಾರ್ಟಿಯಲ್ಲಿ ಜೊತೆಯಾಗಿ ಸಮಯ ಕಳೆಯುತ್ತಿರುವುದು ಕಂಡುಬಂದಿದೆ.
ಅಲ್ಲದೆ, ಈ ಜೋಡಿ ಅನುರಾಗ್ ಬಸು ನಿರ್ದೇಶನದ ಹೊಸ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಸಿಕ್ಕಾಪಟ್ಟೆ ಹಿಟ್ ಆಗಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋಗಳ ಪ್ರಕಾರ, ಕಾರ್ತಿಕ್ ಮತ್ತು ಶ್ರೀಲೀಲಾ ಹಲವಾರು ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರು ಡೇಟಿಂಗ್ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಈ ಜೋಡಿ ಹೀಗೆಯೇ ಮುಂದುವರಿಯಬಹುದು ಎಂಬ ಊಹಾಪೋಹಗಳು ಹರಡುತ್ತಿವೆ. ಕಾರ್ತಿಕ್ ಮತ್ತು ಶ್ರೀಲೀಲಾ ಅವರ ಪ್ರೀತಿಯ ಕುರಿತು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇತ್ತೀಚೆಗೆ, ಪುಷ್ಪ 2 ಚಿತ್ರದ ‘ಕಿಸ್ಸಿಕ್’ ಹಾಡಿನಲ್ಲಿ ಶ್ರೀಲೀಲಾ ತಮ್ಮ ಸ್ಟೆಪ್ಸ್ ಮೂಲಕ ಟ್ರೆಂಡ್ ಆದರು. ಈ ಸಿನಿಮಾದಲ್ಲಿ ಅವರು ಸ್ಪೆಷಲ್ ಸಾಂಗ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಅವರ ಅಭಿಮಾನಿಗಳು ಅವರ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ.