ಸ್ಯಾಂಡಲ್ವುಡ್ನ ಜನಪ್ರಿಯ ಆ್ಯಂಕರ್ ಅನುಶ್ರೀ ಲಂಡನ್ ಪ್ರವಾಸ ಮಾಡಿದ್ದು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತಿದೆ. ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಲಂಡನ್ನ ಸುಂದರ ಸ್ಥಳಗಳ ಫೋಟೋಗಳನ್ನು ಹಂಚಿಕೊಂಡಿರುವ ಅವರು, ತಮ್ಮ ಅನುಭವವನ್ನು ಕನ್ನಡದಲ್ಲಿ ಮನದಾಳದ ಮಾತುಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಅನುಶ್ರೀ ಲಂಡನ್ ಪ್ರವಾಸ
ಕನ್ನಡದ ಆ್ಯಂಕರ್ ಅನುಶ್ರೀ ಲಂಡನ್ಗೆ ತೆರಳಿದ್ದರು. ಅಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಶಿಷ್ಟ ಫೋಟೋಶೂಟ್ ಮಾಡಿರುವ ಅವರು, ಲಂಡನ್ ಬ್ರಿಡ್ಜ್ ಸೇರಿದಂತೆ ಹಲವು ಐಕಾನಿಕ್ ಸ್ಥಳಗಳಲ್ಲಿ ನಿಂತು ಫೋಸ್ ಕೊಟ್ಟ ಸುಂದರ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಅಲ್ಲದೆ, ಒಂದು ಫೋಟೋದಲ್ಲಿ ರಸ್ತೆ ಪಕ್ಕದ ಫುಟ್ಪಾತ್ ಮೇಲೆ ನಿಂತು ಪೋಸ್ ಕೊಟ್ಟಿರುವ ಅನುಶ್ರೀ, ಮತ್ತೊಂದು ಫೋಟೋದಲ್ಲಿ ಕಂಬಕ್ಕೆ ಒರಗಿ ಸ್ಟೈಲಿಷ್ ಆಗಿ ಪೋಸ್ ನೀಡಿದ್ದಾರೆ. ಅಲ್ಲದೇ ಲಂಡನ್ನಲ್ಲಿ ಅನಿಶ್ರೀ ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾರೆ.
ಲಂಡನ್ ಪ್ರವಾಸದ ವೇಳೆ ಅನುಶ್ರೀ ಒಬ್ಬರೇ ಇರಲಿಲ್ಲ. ಅವರು ಮಾಡಿರುವ ರೀಲ್ಸ್ಗಳಲ್ಲಿ ಗಾಯಕಿ ಐಶ್ವರ್ಯಾ ರಂಗರಾಜ್ ಕೂಡ ಕಾಣಿಸಿಕೊಂಡಿದ್ದಾರೆ. ಲಂಡನ್ ಬ್ರಿಡ್ಜ್ ಮೇಲೆ ಅವರು ಹಾಡಿರುವ “ಮೋಹಕ ಚುಂಬಕ ನಾಡಿಗೆ ಮನಸು ಜಿಗಿದು ಹಾರಿದೆ” ಗೀತೆಯ ರೀಲ್ಸ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಅಭಿಮಾನಿಗಳ ಕಾಮೆಂಟ್ಸ್!
ಅನುಶ್ರೀ ತಮ್ಮ ಲಂಡನ್ ಪ್ರವಾಸದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಂತೆ, ಅಭಿಮಾನಿಗಳು ಮತ್ತು ಸ್ನೇಹಿತರು ಕಾಮೆಂಟ್ ಮಾಡುತ್ತಿದ್ದಾರೆ. ಅನುಶ್ರೀ ಅವರ ಫೋಟೋಗೆ ಅಭಿಮಾನಿಯೊಬ್ಬ “ನಿಮ್ಮ ನಗು ಸೂಪರ್..! ಆದರೆ ನಿಮಗೆ ಲಂಡನ್ನಲ್ಲಿ ಜಾಸ್ತಿ ಟೈಮ್ ಸಿಗಲಿಲ್ಲ ಅನ್ನೋದೇ ಬೇಜಾರು. ಮತ್ತೆ ಬನ್ನಿ!” ಎಂದು ಬರೆದಿದ್ದಾರೆ.
ಆದರೆ, ಇನ್ನೊಬ್ಬರು ಮತ್ತಷ್ಟು ಕುತೂಹಲ ಮೂಡಿಸುವ ರೀತಿಯಲ್ಲಿ, “ಅನುಶ್ರೀ ಮದುವೆ ಆಗ್ಬೇಡಿ, ಈಗಲೇ ಸೂಪರ್ ಆಗಿದ್ದೀರಾ. ಸುಮ್ನೆ ಕಮಿಟ್ಮೆಂಟ್ಸ್” ಎಂಬ ಕಾಮೆಂಟ್ ಹಾಕಿದ್ದಾರೆ. ಈ ರೀತಿಯ ಪ್ರತಿಕ್ರಿಯೆಗಳು ಅನುಶ್ರೀ ಮದುವೆ ಕುರಿತಾದ ಚರ್ಚೆಗೆ ಮತ್ತಷ್ಟು ಆಸಕ್ತಿ ಹೆಚ್ಚಿಸುತ್ತವೆ.
ಅನುಶ್ರೀ ಸ್ಪಂದನೆ ಏನು?
ಅನುಶ್ರೀ ಲಂಡನ್ ಬಗ್ಗೆ “ಸುಂದರ ತಾಣ… ಅಲ್ಲೊಂದು ಸುಂದರ ಕ್ಷಣ” ಎಂದು ಕನ್ನಡದಲ್ಲಿಯೇ ಬರೆದಿದ್ದು ಅಭಿಮಾನಿಗಳನ್ನು ಹೆಚ್ಚು ಖುಷಿಪಡಿಸಿದೆ. ಇದನ್ನು ನೋಡಿದ ಬಹುತೇಕ ಜನರು ಅವರ ಶೈಲಿಗೆ ಫಿದಾ ಆಗಿದ್ದಾರೆ.
ಒಟ್ಟಾರೆ, ಆ್ಯಂಕರ್ ಅನುಶ್ರೀ ಲಂಡನ್ ಪ್ರವಾಸದ ಫೋಟೋಸ್ ಮತ್ತು ವಿಡಿಯೋಸ್ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳಿಗೆ ಹೊಸ ಸಂಭ್ರಮವನ್ನು ತಂದಿದೆ.