ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಜನ್ಮದಿನದ ಶುಭಾಶಯಗಳ ಅಂಗವಾಗಿ ಅಪ್ಪು ಅಭಿಮಾನಿಗಳಿಗೆ ಸಂಭ್ರಮದ ಸುದ್ದಿಯೊಂದು ಕನ್ನಡ ಚಿತ್ರರಂಗದಿಂದ, ದಿಲೀಪ್ ಕುಮಾರ್.ಎಚ್.ಆರ್ ರವರು ಸಿನಿಮಾ ಮಾಧ್ಯಮ ವಿಭಾಗದಲ್ಲಿ ಪತ್ರಕರ್ತರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಭಾರತೀಯ ಹಲವು ಭಾಷೆಯಲ್ಲಿಯ ಸಿನಿಮಾ ಮೇಲ್ವಿಚಾರಕರಾಗಿ ಕೆಲಸ ಮಾಡಿ, ನಿರ್ಮಾಪಕರಾಗಿ, ಸಿನಿಮಾ ಹಂಚಿಕೆದಾರರಾಗಿ, ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ದಂತಕಥೆ ಸ್ಕೈಲೈನ್ ಸ್ಟುಡಿಯೋವನ್ನು ಮರು ನಿರ್ಮಾಣ ಮಾಡಿ, ಇಂಡಿಯನ್ ಫಿಲಂ ಮೇಕರ್ ಅಸೋಸಿಯೇಷನ್ ಸ್ಥಾಪಿಸಿ 14 ರಾಜ್ಯಗಳಲ್ಲಿ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು ಈ ಸಂಸ್ಥೆಯ ನ್ಯಾಷನಲ್ ಪ್ರೆಸಿಡೆಂಟ್ ಆಗಿರುವ ಇವರು, ಚಿತ್ರರಂಗದಲ್ಲಿ 20 ವರ್ಷಗಳ ಸುದೀರ್ಘ ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ.
ಇವರು ಸ್ಕೈಲೈನ್ ಮ್ಯೂಸಿಕ್ ಸಂಸ್ಥೆಯ ಸಹಯೋಗತ್ವದಲ್ಲಿ ‘ಅಪ್ಪು ಟ್ಯಾಕ್ಸಿ’ ಸಿನಿಮಾ ಶೀರ್ಷಿಕೆಯನ್ನು ಇಂದು ಅನಾವರಣಗೊಳಿಸಿದ್ದಾರೆ.
ಈ ಸಿನಿಮಾವನ್ನು ಕನ್ನಡ ಚಿತ್ರರಂಗದಲ್ಲಿ 20 ವರ್ಷಗಳಿಂದ ಬರಹಗಾರರಾಗಿ ಹಾಗೂ ಭಾರತೀಯ ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಜಗ್ಗು ಶಿರಸಿ ಯವರು ನಿರ್ದೇಶನ ಮಾಡುತ್ತಿದ್ದಾರೆ, ತಾಂತ್ರಿಕತೆಯ ತಂತ್ರಜ್ಞರಾಗಿ ಶಾಮ್ ರೇ ಕಾರ್ಯನಿರ್ವಹಿಸುತ್ತಿದ್ದಾರೆ ಇವರು ಹಾಲಿವುಡ್ ಅನಿಮೇಟೆಡ್ ಗ್ರಾಫಿಕ್ಸ್ ಕ್ರಿಯೇಟರ್ ಆಗಿ ಕೆಲಸ ಮಾಡಿದ್ದಾರೆ, ಕಥಾ ಬರಹದಲ್ಲಿ ವೇದ್ ಭಾಗಿಯಾಗಿದ್ದಾರೆ.
ಜೀವನ ಸಂಚಾರ ಎನ್ನುವ ಕಥಾ ತಿರುಳನ್ನು ಇಟ್ಟುಕೊಂಡು ಪುನೀತ್ ರಾಜಕುಮಾರ್ ರವರ ಆದರ್ಶ ಜೀವನ ಮೌಲ್ಯದ ಸಾಂಕೇತಿಕವಾಗಿ ಒಬ್ಬ ಟ್ಯಾಕ್ಸಿ ಡ್ರೈವರ್ ಅಪ್ಪುರವರು ಮಾಡಿದ ಸಹಾಯದಿಂದ ತನ್ನ ಜೀವನ ರೂಪಿಸಿಕೊಂಡ ಸತ್ಯ ಘಟನೆಯನ್ನು ಆಧರಿಸಿ ಚಿತ್ರಕಥೆ ಸಾಗುವಂತಹ ಸಿನಿಮಾ ಇದಾಗಿದೆ, ಸಮಾಜದ ಎಷ್ಟೋ ಜನಗಳ ಜೀವನದ ಭಾಗವಾಗಿ ಅಪ್ಪು ರವರು ಪರೋಕ್ಷವಾಗಿ ಹೇಗೆ ಪ್ರಭಾವಿತರಾಗಿದ್ದಾರೆ ಎನ್ನುವ ವಿಷಯ ಜನಗಳಿಗೆ ತಿಳಿಯದ ಹಲವು ವಿಚಾರಗಳು ಅನಾವರಣಗೊಳ್ಳಲಿದೆ.
ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣ ಆಗಲಿದೆ, ಈ ಸಿನಿಮಾ ತಾಂತ್ರಿಕತೆಯಲ್ಲಿ ಇಂಡಿಯಾದ ಹಾಲಿವುಡ್ ಸಿನಿಮಾ ಆಗಲಿದೆ, ಚಿತ್ರ ಪ್ರೇಮಿಗಳಿಗೆ ಮತ್ತು ಅಪ್ಪು ಅಭಿಮಾನಿಗಳಿಗೆ ಸಂಭ್ರಮದಿ ಸಂಭ್ರಮಿಸುವುದರ ಜೊತೆಗೆ ತಮ್ಮ ತಮ್ಮ ಜೀವನವನ್ನು ಅವಲೋಕನ ಮಾಡಿಕೊಳ್ಳುವಂತೆ ಚಿಂತನೆಗೆ ಒಳಪಡಿಸುವುದು, ಇಂದು ಸಿನಿಮಾ ಶೀರ್ಷಿಕೆಯನ್ನು ಮಾತ್ರ ಅನಾವರಣಗೊಳಿಸಿದ್ದಾರೆ, ಭಾರತೀಯ ಚಿತ್ರರಂಗದ ಹಲವು ಕಲಾವಿದರು ಇದರಲ್ಲಿ ಅಭಿನಯಿಸುತ್ತಿದ್ದಾರೆ.
ಅತ್ಯುನ್ನತ ಶ್ರೇಷ್ಠ ಸಿನಿಮಾಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸಿನಿಮಾದ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ, ಎಂಬುವುದನ್ನು ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾದಂತ ದಿಲೀಪ್ ಕುಮಾರ್.ಎಚ್.ಆರ್ ರವರು ಮಾಧ್ಯಮಕ್ಕೆ ತಿಳಿಸಿದ್ದಾರೆ, ಈ ಸಿನಿಮಾವನ್ನು ಮುಂದಿನ ವರ್ಷ 2026 ಮಾರ್ಚ್ 17ರಂದು ಅಪ್ಪು ರವರ ಜನ್ಮದಿನದಂದು ಬಿಡುಗಡೆ ಮಾಡಲು ಅತಿ ಕ್ರಿಯಾಶೀಲವಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ, ಎಂಬುವ ವಿಷಯ ಚಿತ್ರತಂಡ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದೆ, ಜೊತೆಗೆ ಸಿನಿಮಾದ ಪ್ರತಿ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಿದ್ದಾರೆ.
ಈ ಸಿನಿಮಾ ಶೀರ್ಷಿಕೆ ವೈವಿಧ್ಯಮಯವಾಗಿದೆ, ಕಾರಣ ಅಪ್ಪು ರವರ ಭಾವಚಿತ್ರದಲ್ಲಿ ಸಿನಿಮಾ ಶೀರ್ಷಿಕೆ ರೂಪಿಸಿರುವುದು ಚಿತ್ರದ ನಿರ್ದೇಶಕ ಜಗ್ಗು ಸಿರ್ಸಿ ಅವರ ಕ್ರಿಯಾಶೀಲತೆಯ ಗುಣಮಟ್ಟದ ಮೌಲ್ಯವನ್ನು ತಿಳಿಸುತ್ತದೆ, ಈ ವರ್ಷದ ಸಿನಿಮಾ ನಿರ್ಮಾಣದಲ್ಲಿ ಭರವಸೆಯ ಸಿನಿಮಾ ಇದಾಗಲಿದೆ, ಅಪ್ಪು ರವರು ಸದಾ ಪ್ರತಿಯೊಬ್ಬರ ಹೃದಯದಲ್ಲಿ ಜೀವಂತವಾಗಿ ಸದಾ ವಿಜ್ರಂಬಿಸುತ್ತಿದ್ದಾರೆ ಎನ್ನಲು ಈ ಸಿನಿಮಾ ಸಾಕ್ಷಿಕರಿಸುತ್ತಲಿದೆ.