ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಪ್ರತೀ ವರ್ಷ ರಾಸುಗಳ ಜಾತ್ರೆ ನಡೆಯಲಿದೆ. ಈ ವರ್ಷವೂ ಬೇಸಗೆ ಶುರುವಾದ ಹಿನ್ನೆಲೆ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಅದೇ ಜಾತ್ರಾ ಮಹೋತ್ಸವದಲ್ಲಿ 24 ಮಂದಿ ನವ ವಧು-ವರರು ಸರಳ ಸಾಮೂಹಿಕ ವಿವಾಹವಾಗೋ ಮೂಲಕ ಗಮನ ಸೆಳೆದರು. ವಿಶೇಷ ಅಂದ್ರೆ ಅದರ ಉಸ್ತುವಾರಿ ಅಲ್ಲಿನ ಶಾಸಕ ದರ್ಶನ್ ಪುಟ್ಟಣ್ಣಯ್ಯರದ್ದು.
ಡಿಬಾಸ್ ದರ್ಶನ್ ಗೆ ನಿನ್ನೆಯಷ್ಟೇ ಕೋರ್ಟ್ ನಿಂದ ದೇಶಾದ್ಯಂತ ಪ್ರಯಾಣಿಸಲು ಅನುಮತಿ ಸಿಕ್ಕಿದೆ. ಅದೇ ಖುಷಿಯಲ್ಲಿರೋ ದರ್ಶನ್ ಪತ್ನಿ ಹಾಗೂ ಆಪ್ತ ವಲಯ, ಇದೀಗ ಈ ಸಾಮೂಹಿಕ ವಿವಾಹದ ಜವಾಬ್ದಾರಿ ಹೊತ್ತಿರೋದು ಇಂಟರೆಸ್ಟಿಂಗ್.
ಹೌದು.. ವಿಜಲಕ್ಷ್ಮೀ ದರ್ಶನ್ 24 ಮಂದಿ ವಧುಗಳಿಗೆ ಬಂಗಾರದ ಮಾಂಗಲ್ಯವನ್ನ ಉಚಿತವಾಗಿ ನೀಡಿದ್ರೆ, ಧನ್ವೀರ್ ವರರಿಗೆ ತಲಾ ಒಂದೊಂದು ಕೈ ಗಡಿಯಾರವನ್ನು ಉಚಿತವಾಗಿ ನೀಡಿದ್ದಾರೆ.
ಇನ್ನು ನಟ ಚಿಕ್ಕಣ್ಣ ನೂತನ ವಧು-ವರರಿಗೆ ಸೀರೆ ಹಾಗೂ ಪಂಚೆಗಳನ್ನ ವಿತರಿಸೋ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಲ್ಲೋ ಒಂದ್ಕಡೆ ಇದನ್ನೆಲ್ಲಾ ನೋಡ್ತಿದ್ರೆ, ನಟ ದರ್ಶನ್ ಅಥ್ವಾ ವಿಜಯಲಕ್ಷ್ಮೀ ದರ್ಶನ್, ಮುಂದಿನ ದಿನಗಳಲ್ಲಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಡೋ ಮುನ್ಸೂಚನೆ ಸಿಗ್ತಿದೆ.