ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರೇಮ ಜೋಡಿಗಳು ಈಗ ಮದುವೆಗೆ ಸಿದ್ಧರಾಗುತ್ತಿದ್ದಾರೆ. ಸೀಸನ್ 8 ರಿಂದ 18ರವರೆಗಿನ ಕನ್ನಡ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರೂಪುಗೊಂಡ ಈ ಸಂಬಂಧಗಳು ಈಗ ವಿವಾಹದ ದಾರಿಗೆ ಸಾಗಿವೆ.
ಬಿಗ್ ಬಾಸ್ʼ ಮನೆಗೂ ಪ್ರೀತಿಗೂ ಒಂದು ನಂಟಿದೆ. ಹೆಚ್ಚು ಗಮನಸೆಳೆಯಬಹುದು ಎಂದು ಕೆಲವರು ಪ್ರೀತಿ ನಾಟಕವಾಡಿದರೆ, ಇನ್ನೂ ಕೆಲವರಿಗೆ ನಿಜವಾಗಿ ಲವ್ ಆಗುತ್ತದೆ. ಈ ಲವ್ ಎಷ್ಟು ದಿನ ಬಾಳಿಕೆ ಬರುತ್ತದೆ ಅಂತ ಮಾತ್ರ ಹೇಳಲಾಗೋದಿಲ್ಲ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರೀತಿಯನ್ನು ಕಂಡುಕೊಂಡ ಈ ಜೋಡಿಗಳು ಮದುವೆ ಆಗಲು ರೆಡಿ ಆಗಿವೆ!
ದಿವ್ಯಾ ಉರುಡುಗ & ಕೆಪಿ ಅರವಿಂದ್
ಬಿಗ್ ಬಾಸ್ ಸೀಸನ್ 8ರ ಸ್ಟಾರ್ ದಿವ್ಯಾ ಮತ್ತು ಕೆಪಿ, ಇತ್ತೀಚೆಗೆ ನಟ ಡಾಲಿ ಧನಂಜಯ ಮದುವೆಯಲ್ಲಿ ಕಾಣಿಸಿಕೊಂಡು “ಶೀಘ್ರದಲ್ಲೇ ಮದುವೆ” ಎಂದು ಘೋಷಿಸಿದ್ದಾರೆ. ಇಬ್ಬರೂ ಚಿತ್ರರಂಗ ಮತ್ತು ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಸಕ್ರಿಯರಾಗಿದ್ದು, 7 ವರ್ಷಗಳ ಪ್ರೀತಿಯ ನಂತರ ಮದುವೆಗೆ ಮುಂದಾಗಿದ್ದಾರೆ.ಈ ಜೋಡಿ, 8ನೇ ಸೀಸನ್‌ನಿಂದ ಇಂದಿನವರೆಗೂ ತಮ್ಮ ಬಾಂಧವ್ಯವನ್ನು ಉಳಿಸಿಕೊಂಡಿದ್ದು ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದೆ.
ತೇಜಸ್ವಿ ಪ್ರಕಾಶ್ & ಕರಣ್ ಕುಂದ್ರಾ
ಬಿಗ್ ಬಾಸ್ ಹಿಂದಿ ಸೀಸನ್ 15ರಲ್ಲಿ ಪ್ರೇಮಿಸಿದ ಈ ಜೋಡಿ, ಈಗ ವಿವಾಹದ ಮುನ್ನುಡಿ ಬರೆಯಲು ತಯಾರಾಗಿದ್ದಾರೆ. ತೇಜಸ್ವಿ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದರೆ, ಕರಣ್ ಸಿನಿಮಾ ರಂಗದಲ್ಲಿ ತಮ್ಮದೇ ಸ್ಥಾನವನ್ನು ಹೊಂದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬ್ರೇಕಪ್ ಸುದ್ದಿಗಳನ್ನು ತಳ್ಳಿಹಾಕಿದ ಈ ಜೋಡಿ ,2025 ಅಥವಾ 2026 ರಲ್ಲಿ ಮದುವೆ ನಡೆಯಲಿದೆ ಎಂದು ಸೂತ್ರಗಳು ತಿಳಿಸಿವೆ.
ಜಾಸ್ಮಿನ್ ಭಾಸಿನ್ & ಅಲಿ ಗೋನಿ
ಬಿಗ್ ಬಾಸ್ ಮನೆಗೆ ಮುಂಚೆಯೇ ಸ್ನೇಹಿತರಾಗಿದ್ದ ಜಾಸ್ಮಿನ್ ಮತ್ತು ಅಲಿ, ನಂತರ ತಮ್ಮ ಪ್ರೀತಿಯನ್ನು ಸಾರಿದ್ದರು. ಈ ಜೋಡಿ, 2025 ವರ್ಷಾಂತ್ಯದಲ್ಲಿ ಮದುವೆ ಆಗಲು ನಿರ್ಧರಿಸಿದೆ. ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ಇವರು ಈ ಜೋಡಿ ,ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫ್ಯಾನ್‌ಗಳೊಂದಿಗೆ ಶೇರ್ ಮಾಡಿರುವ ಫೋಟೋಗಳು ವೈರಲ್ ಆಗಿವೆ.“ನಾವು ಒಬ್ಬರನ್ನೊಬ್ಬರು ಸಪೋರ್ಟ್ ಮಾಡ್ತೇವೆ, ಇದು ಲೈಫ್ ಪಾರ್ಟ್ನರ್‌ಶಿಪ್” ಎಂದು ಜಾಸ್ಮಿನ್ ಹೇಳಿದ್ದಳು.
ಕರಣ್ ವೀರ್ & ಚುಮ್ ದರಂಗ್
ಬಿಗ್ ಬಾಸ್ ಸೀಸನ್ 18ರಲ್ಲಿ ಒಟ್ಟಿಗೆ ಇದ್ದ ಕರಣ್ ಮತ್ತು ಚುಮ್, ಈಗ ರಿಯಲ್ ಲೈಫ್‌ನಲ್ಲಿ ತಮ್ಮ ಸಂಬಂಧವನ್ನು ಪರೀಕ್ಷಿಸುತ್ತಿದ್ದಾರೆ.ಅದಕ್ಕೆ ಚುಮ್ ಯೆಸ್ ಅಥವಾ ನೋ ಎಂದು ಹೇಳದೆ, ಕರಣ್ ಅವರ ಪ್ರಯತ್ನವನ್ನು ಶ್ಲಾಘಿಸಿದ್ದರು.ಇತ್ತೀಚಿನ ಹೋಳಿ ಇವೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರ ಸಂಬಂಧವು ಗಂಭೀರವಾಗಿದೆ ಎಂಬ ಸಂಕೇತಗಳಿವೆ.ಹೋಳಿ ಫೆಸ್ಟಿವಲ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಇವರು, ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್‌ಗಳಿಗೆ ರೋಮಾನ್ಸ್ ಸುಳಿವು ನೀಡಿದ್ದಾರೆ. ಮದುವೆಗೆ ಮುನ್ನವೇ ಸಾಮಾಜಿಕ ಒತ್ತಡಗಳನ್ನು ಎದುರಿಸುತ್ತಿರುವ ಈ ಜೋಡಿ, ತಮ್ಮ ಪ್ರೀತಿಯನ್ನು ಸಾಬೀತು ಮಾಡಲು ಸಿದ್ಧವಾಗಿದೆ.
ಬಿಗ್ ಬಾಸ್ ಮನೆಯ ಪ್ರೇಮ ಕಥೆಗಳು ಈಗ ಮದುವೆಯ ಸುತ್ತಿನಲ್ಲಿ ಮುಂದುವರಿಯುತ್ತಿದೆ. ಇವರ ವಿವಾಹದ ದಿನಾಂಕಗಳು ಅಧಿಕೃತವಾಗಿ ಘೋಷಿಸಲ್ಪಡುತ್ತವೆಯೇ ಎಂದು ನೋಡೋಣ!