ಬಾಲಿವುಡ್​ನ ಈ ಸ್ಟಾರ್‌ಗಳು ಭಾರತೀಯರೇ ಅಲ್ಲ! : ಇವರಿಗೆ ಭಾರತದ ಪೌರತ್ವವೇ ಇಲ್ಲ..!

111 (18)

ಭಾರತೀಯ ಪೌರತ್ವವನ್ನೇ ಹೊಂದಿರದ ಹೊಂದಿರದ ಅನೇಕ ನಟ-ನಟಿಯರು ಬಾಲಿವುಡ್‌ನಲ್ಲಿ ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಬಾಲಿವುಡ್‌ನ ಮೋಹಕ ತಾರೆಯರಾದ ಆಲಿಯಾ ಭಟ್, ಕತ್ರಿನಾ ಕೈಫ್, ನೋರಾ ಫತೇಹಿ,ಜಾಕ್ವೆಲಿನ್ ಫರ್ನಾಂಡಿಸ್, ಇಮ್ರಾನ್‌ ಖಾನ್‌, ಸನ್ನಿ ಲಿಯೋನ್‌, ನರ್ಗಿಸ್‌ ಫಕ್ರಿ ಸೇರಿದಂತೆ ಹಲವಾರು ಪ್ರಮುಖ ಸೆಲೆಬ್ರಿಟಿಗಳು ಭಾರತೀಯ ಪೌರತ್ವವನ್ನು ಹೊಂದಿಲ್ಲ. ಭಾರತದ ಯಾವುದೇ ಚುನಾವಣೆಗಳಲ್ಲಿ ಮತ ಚಲಾಯಿಸುವಂತಿಲ್ಲ.

ಆಲಿಯಾ ಭಟ್‌ ಭಾರತೀಯಳಲ್ಲ..!

ADVERTISEMENT
ADVERTISEMENT

ಆಲಿಯಾ ಭಟ್ ಭಾರತೀಯ ಪ್ರಜೆಯಲ್ಲ, ಬದಲಾಗಿ ಅವರು ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ್ದಾರೆ. ಈ ಬಗ್ಗೆ ಅಲಿಯಾ ಅವರೇ ಹೇಳಿದ್ದಾರೆ. ನನ್ನ ತಾಯಿ ತಾಯಿ ಸೋನಿ ರಜ್ದಾನ್ ಯುಕೆ ಮೂಲದವರು ಆದರೆ ನಾನು ಮೂರು ತಿಂಗಳ ಮಗುವಾಗಿದ್ದಾಗ ನಾನು ಮುಂಬೈಗೆ ಬಂದೆ. ನನ್ನ ತಾಯಿ ನನಗಾಗಿ ಬ್ರಿಟಿಷ್ ಪಾಸ್‌ಪೋರ್ಟ್ ಪಡೆದರು, ನನಗೆ ಯಾವ ಪಾಸ್‌ಪೋರ್ಟ್ ಬೇಕು ಎಂದು ನಿರ್ಧರಿಸುವುದು ವಿಶ್ವದ ಪ್ರಜೆಯಾಗಿ ನನ್ನ ಆಯ್ಕೆ ಮತ್ತು ಹಕ್ಕು ಎಂದಿದ್ದಾರೆ.

ವಿಕ್ಕಿ ಕೌಶಲ್‌ ವರಿಸಿರೋ ಕತ್ರಿನಾ ಮೂಲ ಇಂಗ್ಲೆಂಡ್‌..!

ಇನ್ನು ಬಾಲಿವುಡ್‌ ನಟ ವಿಕ್ಕಿ ಕೌಶಲ್‌ರನ್ನು ವಿವಾಹವಾಗಿರುವ ಕತ್ರಿನಾ ಕೈಫ್ ಕೂಡ ಭಾರತೀಯರಲ್ಲ. ಬದಲಾಗಿ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ. ಕತ್ರಿನಾ ತಂದೆ ಮೊಹಮ್ಮದ್ ಕೈಫ್ ಕಾಶ್ಮೀರಿ ಮೂಲದ ಬ್ರಿಟಿಷ್ ಉದ್ಯಮಿ ಮತ್ತು ಅವರ ತಾಯಿ ಸುಜೇನ್ ಟರ್ಕೋಟ್ ವಕೀಲೆ. ಈ ಬಗ್ಗೆ ಮಾತನಾಡಿರೋ ಕತ್ರಿನಾ, “ನಾನು ಭಾರತೀಯಳು ಮತ್ತು ನನ್ನ ತಂದೆ ಭಾರತೀಯ. ನನ್ನ ತಾಯಿ ಬ್ರಿಟಿಷ್ ಆಗಿದ್ದರೂ, ನಾನು 17 ನೇ ವಯಸ್ಸಿನಿಂದಲೂ ಭಾರತದ ನಂಟು ಹೊಂದಿದ್ದೇನೆ, ಭಾರತ ಯಾವಾಗಲೂ ನನ್ನ ಮನೆಯಾಗಿದೆ” ಎಂದು ಹೇಳಿದ್ದಾರೆ. ಬ್ರಿಟನ್‌ ಪೌರತ್ವದ ಹೊರತಾಗಿಯೂ ಭಾರತೀಯ ಸಂಸ್ಕೃತಿ, ಪರಂಪರೆ ನನ್ನ ಗುರುತಿನ ಅವಿಭಾಜ್ಯ ಅಂಗವಾಗಿದೆ ಎಂದು ಹೇಳುವ ಮೂಲಕ ಕತ್ರಿನಾ ದೇಶಪ್ರೇಮ ಮೆರೆದಿದ್ದಾರೆ

ನೋರಾ ಫತೇಹಿ ಇಂಡಿಯನ್‌ ಅಲ್ಲ ಕೆನಡಿಯನ್..!

ಕೆನಡಾದ ಪ್ರಜೆಯಾಗಿರುವ ನೋರಾ ಫತೇಹಿ, ಭಾರತದ ಪೌರತ್ವ ಹೊಂದಿರದ ಮತ್ತೊಬ್ಬ ಬಾಲಿವುಡ್ ತಾರೆ. ತಮ್ಮ ಮಾದಕ ಸೌಂದರ್ಯ, ನವಿಲಿನಂತಾ ನೃತ್ಯದ ಮೂಲಕ ಭಾರತದಾದ್ಯಂತ ಹುಚ್ಚು ಅಭಿಮಾನಿಗಳನ್ನು ಹೊಂದಿರೋ ನೋರಾ ಫತೇಹಿ ಹುಟ್ಟಿದ್ದು ಬೆಳೆದಿದ್ದೆಲ್ಲಾ ಕೆನಡಾದಲ್ಲೇ.

ಪಕ್ಕದ ಶ್ರೀಲಂಕಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್..!

ಜಾಕ್ವೆಲಿನ್‌ ಫರ್ನಾಂಡಿಸ್ ಶ್ರೀಲಂಕಾದ ನಟಿ ಕಮ್‌ ಮಾಡೆಲ್‌. ಈ ಬೇಬಿ ಡಾಲ್‌ ಹುಟ್ಟಿ ಬೆಳೆದದ್ದು ಬಹ್ರೇನ್‌ನಲ್ಲಿ. ಸಿಡ್ನಿ ವಿಶ್ವವಿದ್ಯಾನಿಲಯದಿಂದ ಮಾಸ್‌ ಕಮ್ಯುನಿಕೇಷನ್ ಪದವಿ ಪಡೆದ ನಂತರ ಮತ್ತು ಶ್ರೀಲಂಕಾದಲ್ಲಿ ಟಿವಿ ವರದಿಗಾರರಾಗಿ ಕೆಲಸ ಮಾಡಿದ್ದ ಜಾಕ್ವೆಲಿನ್‌ ಬಳಿಕ ಮಾಡೆಲಿಂಗ್ ಸೇರಿ ಬಾಲಿವುಡ್‌ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಶ್ರೀಲಂಕಾದಲ್ಲಿ ಜನಿಸಿದ ಜಾಕ್ವೆಲಿನ್ ಫರ್ನಾಂಡಿಸ್ ಇಂದಿಗೂ ದ್ವೀಪ ರಾಷ್ಟ್ರದ ಪೌರತ್ವವನ್ನು ಉಳಿಸಿಕೊಂಡಿದ್ದಾರೆ.

ಸೆಕ್ಸಿ ಕ್ವೀನ್‌ ಸನ್ನಿ ಲಿಯೋನ್‌ ಎರಡು ರಾಷ್ಟ್ರದ ಪ್ರಜೆ..!

ಬಾಲಿವುಡ್‌ನ ಸೆಕ್ಸಿ ಕ್ವೀನ್‌ ಸನ್ನಿ ಲಿಯೋನ್ ಯುಎಸ್ ಮತ್ತು ಕೆನಡಾ ದೇಶಗಳ ದ್ವಿಪೌರತ್ವವನ್ನು ಹೊಂದಿದ್ದಾರೆ. ಸನ್ನಿ ಲಿಯೋನ್ ಅವರ ನಿಜವಾದ ಹೆಸರು ಕರಣ್ ಜಿತ್ ಕೌರ್ ವೋಹ್ರಾ. ಅವರು ಕೆನಡಾದಲ್ಲಿ ಭಾರತೀಯ ಸಿಖ್ ಕುಟುಂಬದಲ್ಲಿ ಜನಿಸಿದರು. ಆದರೆ ಅವರು ಕಳೆದ ಹಲವಾರು ವರ್ಷಗಳಿಂದ ಭಾರತದಲ್ಲಿದ್ದಾರೆ. ಭಾರತೀಯ ಚಲನಚಿತ್ರಗಳು ಮತ್ತು ಶೋಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಮೆರಿಕನ್ ಮೂಲದ ನಟಿ ನರ್ಗಿಸ್ ಫಕ್ರಿ..!

ರಾಕ್‌ಸ್ಟಾರ್‌, ಮದ್ರಾಸ್‌ ಕೆಫೆ ಚಿತ್ರದ ಫೇಮಸ್‌ ನಟಿ ನರ್ಗೀಸ್ ಫಕ್ರಿ ಮೂಲ ಅಮೆರಿಕ. ಕಳೆದ ಹಲವಾರು ವರ್ಷಗಳಿಂದ ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರೋ ನರ್ಗಿಸ್‌ ಫಕ್ರಿ ಇಲ್ಲಿಯವರೆಗೆ ಭಾರತದ ಪೌರತ್ವವನ್ನು ಹೊಂದಿಲ್ಲ. ನರ್ಗಿಸ್ ಫಕ್ರಿ ಅವರ ತಂದೆ ಪಾಕಿಸ್ತಾನ ಮೂಲದವರು. ತಾಯಿ ಜೆಕ್ ಗಣರಾಜ್ಯದವರು. ತಂದೆ ಅಮೆರಿಕದಲ್ಲಿ ಪೊಲೀಸ್ ಅಧಿಕಾರಿ ಎನ್ನಲಾಗಿದೆ.

ಅಮೀರ್‌ ಖಾನ್‌ ಸೋದರಳಿಯನ ಮೂಲ ಅಮೆರಿಕ..!

ಬಾಲಿವುಡ್‌ ಸ್ಟಾರ್‌ ಅಮೀರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಕೂಡ ಯುಎಸ್ ಪೌರತ್ವವನ್ನು ಹೊಂದಿದ್ದಾರೆ. ಜಾನೆ ತು ಯಾ ಜಾನೆ ನಾ ಚಿತ್ರದ ನಟ ಇಮ್ರಾನ್‌ ಅಮೆರಿಕದ ವಿಸ್ಕಾನ್ಸಿನ್‌ನ ಮ್ಯಾಡಿಸನ್‌ನಲ್ಲಿ ಜನಿಸಿದ್ದಾರೆ. ಹೆತ್ತವರ ವಿಚ್ಚೇದನದ ನಂತರ, ಇಮ್ರಾನ್ ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

Exit mobile version