ಚಂದನ್ ಶೆಟ್ಟಿ.. ಕನ್ನಡದ ಸೆನ್ಸೇಷನಲ್ ರ‍್ಯಾಪರ್. ಸಂಗೀತ ಸಂಯೋಜಕನಾಗಿ, ಬರಹಗಾರ, ಗಾಯಕನಾಗಿಯೂ ಮಿಂಚುತ್ತಿದ್ದ ಚಂದನ್ ಇದೀಗ ನಟನಾಗಿಯೂ ಕಮಾಲ್ ಮಾಡ್ತಿದ್ದಾರೆ. ಹೌದು.. ಇತ್ತೀಚೆಗೆ ಚಂದನ್ ನಟನೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ತೆರೆಕಂಡಿತ್ತು. ಇದೀಗ ಸೂತ್ರಧಾರಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಇದೇ ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಈ ಮಧ್ಯೆ ಅವರು ಒಂದಷ್ಟು ಲೈವ್ ಕಾನ್ಸರ್ಟ್ಸ್ ಮಾಡ್ತಾ ತಮ್ಮನ್ನ ತಾವು ಬ್ಯುಸಿಯಾಗಿಸಿಕೊಂಡಿದ್ದಾರೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಚಂದನ್ ಶೆಟ್ಟಿಯ ಡಿವೋರ್ಸ್ ಸುದ್ದಿ ಸಖತ್ ಟ್ರೆಂಡಿಂಗ್ ನಲ್ಲಿದೆ. ಹೊಂದಾಣಿಕೆಯ ಸಮಸ್ಯೆಯಿಂದಾಗಿ ಪರಸ್ಪರ ಮಾತನಾಡಿಕೊಂಡೇ ಪತ್ನಿ ನಿವೇದಿತಾ ಗೌಡಗೆ ಱಪರ್ ಚಂದನ್ ಶೆಟ್ಟಿ ವಿಚ್ಚೇತನ ನೀಡಿದ್ದರು. ಅದಾದ ಬಳಿಕವೂ ಮುದ್ದು ರಾಕ್ಷಸಿ ಅನ್ನೋ ಚಿತ್ರದಲ್ಲಿ ಮಾಜಿ ಸತಿಪತಿಗಳಾದ ಚಂದನ್- ನಿವೇದಿತಾ ಒಟ್ಟೊಟ್ಟಿಗೆ ತೆರೆ ಹಂಚಿಕೊಂಡಿದ್ದರು. ಯಾವಾಗ ನಿವಿ ಜೊತೆ ಚಂದು ಬ್ರೇಕಪ್ ಕನ್ಫರ್ಮ್ ಆಯ್ತೋ, ಆಗಲೇ ಸೂತ್ರಧಾರಿ ನಟೀಮಣಿ ಸಲಗ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಮದ್ವೆ ಅಂತೆ ಅನ್ನೋ ಅಂತೆ ಕಂತೆಗಳು ಜೋರಾಗಿ ಹರಿದಾಡಿದ್ದವು.
ಆದ್ರೀಗ ಸೂತ್ರಧಾರಿ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡೋ ನಿಟ್ಟಿನಲ್ಲಿ ನಿರ್ಮಾಪಕ ನವರಸನ್ ಒಂದು ಸುದ್ದಿಗೋಷ್ಠಿ ಅಯೋಜಿಸಿದ್ದರು. ಅದರ ಸುದ್ದಿಗೋಷ್ಠಿಗಾಗಿ ಆಗಮಿಸಿದ್ದ ನಾಯಕನಟ ಚಂದನ್ ಶೆಟ್ಟಿ ಹಾಗೂ ಸಂಜನಾ ಇಬ್ಬರೂ ಕೂಡ ತಮ್ಮ ಮದುವೆ ವದಂತಿ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಇಬ್ಬರ ನಡುವೆ ಎಂತಹ ಸ್ನೇಹ, ಬಾಂಧವ್ಯವಿದೆ ಅನ್ನೋದನ್ನ ಸಹ ಮುಕ್ತವಾಗಿ ಮಾತನಾಡಿದ್ದಾರೆ.
ಡ್ಯಾಶ್ ಸಾಂಗ್ ಹಿಟ್ ಆದ್ಮೇಲೆ ನನ್ ಲೈಫ್ ನಲ್ಲಿ ಏನೇನೋ ಆಗೋಯ್ತು ಎಂದ ಚಂದನ್ ಶೆಟ್ಟಿ, ನನಗೆ ಫ್ರೆಂಡ್ಸ್ ಎಲ್ಲಾ ಕಾಲ್ ಮಾಡಿ ನಿನ್ನ-ಸಂಜನಾ ಮದ್ವೆ ಯಾವಾಗ ಅಂತ ಕೇಳ್ತಿದ್ರು. ನನ್ನ ಮದುವೆ ಬಗ್ಗೆ ನನಗೇ ಗೊತ್ತಿಲ್ಲ. ಯಾರಾರೋ ಏನೇನೋ ಮಾತಾಡ್ಕೊಳ್ತಿದ್ರು. ಆದ್ರೆ ನನ್ನ ಸಂಜನಾ ನಡುವೆ ಆ ತರಹದ ವಿಷಯವೇ ಇಲ್ಲ ಅಂತ ಸೂತ್ರಧಾರಿ ಸಿನಿಮಾ ವೇದಿಕೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಚಂದನ್ ಕ್ಲ್ಯಾರಿಟಿ ಕೊಡ್ತಿದ್ದಂತೆ, ನನ್ನ ಕಡೆಯಿಂದಲೂ ಒಂದು ಸ್ಪಷ್ಟನೆ ಕೊಟ್ಟುಬಿಟ್ರೆ ಈ ವದಂತಿಗಳು ಪದೇ ಪದೆ ಹರಡಲ್ಲ ಅಂತ ಸಂಜನಾ ಸಹ ಚಂದನ್ ಶೆಟ್ಟಿ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಹಾಗೂ ಚಂದನ್ ನಡುವೆ ಆ ರೀತಿ ಏನೂ ಇಲ್ಲ. ನಾವು ಒಳ್ಳೆಯ ಫ್ರೆಂಡ್ಸ್ ಅಷ್ಟೇ. ಅದಕ್ಕೂ ಮೀರಿ ಚಂದನ್ ನನಗೆ ಬ್ರದರ್ ಇದ್ದ ಹಾಗೆ ಎಂದಿದ್ದಾರೆ ಸಂಜನಾ.
ಒಟ್ಟಾರೆ ಇವರಿಬ್ಬರೂ ನೀಡಿದ ಸ್ಪಷ್ಟನೆಯಿಂದ ಸಾಕಷ್ಟು ಮಂದಿಗೆ ಒಂದು ಕ್ಲ್ಯಾರಿಟಿ ಸಿಕ್ಕಂತಾಗಿದೆ. ಅದ್ರಲ್ಲೂ ಸಂಜನಾ ಚಂದನ್ ರನ್ನ ಬ್ರದರ್ ಅಂದುಬಿಟ್ರಲ್ಲಾ ಅಂತ ಒಂದಷ್ಟು ಮಂದಿ ಮೂಗು ಮುರಿದಿದ್ದಾರೆ.