ʼಭುವನಂ ಗಗನಂʼ 25 ದಿನದ ಸಂಭ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭಾಗಿ

Befunky collage 2025 03 18t192602.111

ರತ್ನನ್‌ ಪ್ರಪಂಚ ಸಿನಿಮಾ ಖ್ಯಾತಿಯ ಪ್ರಮೋದ್‌ ಹಾಗೂ ದಿಯಾ ಖ್ಯಾತಿ ಪೃಥ್ವಿ ಅಂಬರ್‌ ನಟನೆಯ ಭುವನಂ ಗಗನಂ ಚಿತ್ರ 25 ದಿನ ಪೂರೈಸಿದೆ. ಪ್ರೇಮಿಗಳ ದಿನದಂದು ತೆರೆಕಂಡ ಈ ಸಿನಿಮಾಗೆ ಆಫ್‌ ಸೆಂಚೂರಿಯತ್ತ ಸಾಗುತ್ತಿದೆ. ಕನ್ನಡ ಚಿತ್ರರಂಗ ಸದ್ಯದ ಪರಿಸ್ಥಿತಿ ನಡುವೆಯೂ ಭುವನಂ ಗಗನಂ ಚಿತ್ರ ಇಪ್ಪತ್ತೈದು ದಿನ ಪೂರೈಸಿದೆ.

ADVERTISEMENT
ADVERTISEMENT

ಈ ಸಂತಸದ ಕ್ಷಣಗಳನ್ನು ಚಿತ್ರತಂಡ ಸೆಲೆಬ್ರೆಟ್‌ ಮಾಡಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಭುವನಂ ಗಗನಂ ಚಿತ್ರದ 25 ದಿನದ ಸಂಭ್ರಮಾಚರಣೆಗೆ ಹಮ್ಮಿಕೊಳ್ಳಲಾಗಿತ್ತು.. ಕ್ರೇಜಿಸ್ಟಾರ್‌ ರವಿಚಂದ್ರನ್‌ ಈ ಕಾರ್ಯಕ್ರಮಕ್ಕೆ ಸಾಕ್ಷಿದರು. ನಿರ್ದೇಶಕರಾದ ಸಿಂಪಲ್‌ ಸುನಿ, ಚೇತನ್‌ ಕುಮಾರ್‌, ನೆನಪಿರಲಿ ಪ್ರೇಮ್ ಹಾಗೂ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಮಾತನಾಡಿ, ಸಿನಿಮಾ ಇಂಡಸ್ಟ್ರೀಯಲ್ಲಿ ಸದ್ಯಕ್ಕೆ ನಗುನೇ ಇಲ್ಲ. ಆದರೆ ಇಲ್ಲಿ ನಗುತ್ತಿದ್ದೇವೆ. ಆ ನಗು ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಜನ ಥಿಯೇಟರ್‌ ಗೆ ಬರ್ತಿಲ್ಲ ಅಂತಿದ್ದಾರೆ. ಸಿನಿಮಾ ಚೆನ್ನಾಗಿದೆ ಎಂದರೆ ಜನ ಥಿಯೇಟರ್‌ ಒಳಗೆ ಬರುತ್ತಾರೆ. ಆ ಮುಖ ಬೇಕು, ಈ ಬೇಕು ಅನ್ನೋದು ಏನೂ ಬೇಡ. ಚೆನ್ನಾಗಿದ್ದರೆ ನುಗುತ್ತಾರೆ ಎನ್ನುವುದಕ್ಕೆ ಪ್ರೇಮಲೋಕನೇ ಸಾಕ್ಷಿ. ವಾರಕ್ಕೆ ೪೦ ಸಿನಿಮಾ ಬಂದರೆ ಟ್ರಾಫಿಕ್‌ ಜಾಮ್‌ ಆಗುತ್ತಿದೆ.

ಚಿತ್ರರಂಗದಲ್ಲಿ ನಗುವಿನ ವಾತಾವರಣ ಬೇಕು. ನಾವು ಶಿಲ್ಡ್‌ ನೋಡುವುದನ್ನೇ ಮರೆತುಬಿಟ್ಟಿದ್ದೇವೆ. ಈಗ 25 ದಿನಕ್ಕೆ ಶೀಲ್ಡ್‌ ಶುರುವಾಗಿದೆ. ಆಗ ೨೪ ವಾರಕ್ಕೆ ಶಿಲ್ಡ್‌ ಇತ್ತು. ನಿಮ್ಮ ಪಯಣ ಹೀಗೆ ಸಾಗಲಿ ಎಂದು ಚಿತ್ರತಂಡ ಶುಭ ಹಾರೈಸಿದರು.

ಈ ಚಿತ್ರದಲ್ಲಿ ರೆಚೆಲ್ ಡೇವಿಡ್ ಮತ್ತು ಅಶ್ವಥಿ ನಾಯಕಿಯರಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗಿರೀಶ್ ಮೂಲಿಮನಿ ಈ ಸಿನಿಮಾ ನಿರ್ದೇಶನ ಮಾಡಿದ್ದು ಎಂ. ಮುನೇಗೌಡ ನಿರ್ಮಾಣ ಮಾಡಿದ್ದಾರೆ.

Exit mobile version