ಮುಗೀತು ದಾಸನ ವನವಾಸ.. ‘ಡೆವಿಲ್’ ಆರ್ಭಟ

ಪತ್ನಿ, ಮಗನೊಂದಿಗೆ ರಾಜಸ್ಥಾನದಿಂದ ದಚ್ಚು ಬ್ಯಾಕ್

Film 2025 04 04t205957.962

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್, ಬೇಲ್ ಪಡೆದು ಹೊರ ಬಂದಿದ್ದಾರೆ. ಇತ್ತೀಚೆಗೆ ವೈಯಕ್ತಿಕ ಹಾಗೂ ಸಿನಿಮಾ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿರೋ ಡಿಬಾಸ್, ತಾನಾಯ್ತು, ತನ್ನ ಸಿನಿಮಾಗಳಾಯ್ತು ಅಂತಿದ್ದಾರೆ. ಸದ್ಯ ಕರ್ನಾಟಕದ ಗಡಿ ದಾಟಿ ರಾಜಸ್ಥಾನಕ್ಕೂ ಹಾರಿದ್ದ ಡೆವಿಲ್, ಶೂಟಿಂಗ್ ಮುಗಿಸಿ ವಾಪಸ್ ಆಗಿದ್ದಾರೆ.

ADVERTISEMENT
ADVERTISEMENT

ಕಳೆದೊಂದು ವಾರದಿಂದ ಡೆವಿಲ್ ಗಾಗಿ ರಾಜಸ್ಥಾನದಲ್ಲಿ ಬೀಡುಬಿಟ್ಟಿದ್ದ ದಾಸ ದರ್ಶನ್, ಇಂದು ಪತ್ನಿ, ಮಗನೊಂದಿಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ಗೆ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಜೊತೆ ದರ್ಶನ್ ಸ್ಟೈಲಿಶ್ ಎಂಟ್ರಿ ಕೊಟ್ಟಿದ್ದಾರೆ.

ಬೆನ್ನು ನೋವಿನಿಂದ ಚೇತರಿಸಿಕೊಂಡಿದ್ದು, ಇದೇ ತಿಂಗಳಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ನಲ್ಲಿ ಭಾಗಿಯಾಗಲಿದ್ದಾರೆ. ಕಳೆದೊಂದು ವಾರದಿಂದ ಡೆವಿಲ್ ಸಿನಿಮಾದ ಮೂರನೇ ಹಂತದ ಚಿತ್ರೀಕರಣ ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿತ್ತು. ನಿನ್ನೆ ಚಿತ್ರೀಕರಣ ಮುಕ್ತಾಯಗೊಂಡಿದ್ದು, ದರ್ಶನ್ ಫ್ಯಾಮಿಲಿ ಸಮೇತ ಬೆಂಗಳೂರಿಗೆ ಆಗಮಿಸಿದ್ದಾರೆ. ಅತ್ತ ದರ್ಶನ್ ಜೈಪುರದಲ್ಲಿ ಶೂಟಿಂಗ್ ಕಣದಲ್ಲಿ ಬ್ಯುಸಿಯಾಗಿದ್ರೆ, ಇತ್ತ ವಿಜಯಲಕ್ಷ್ಮೀ ರಾಜಸ್ಥಾನ್ ರೌಂಡ್ಸ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಡೆವಿಲ್ ಸಿನಿಮಾಗೆ ಪ್ರಕಾಶ್ ವೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ದರ್ಶನ್ ಗೆ ಜೋಡಿಯಾಗಿ ರಚನಾ ರೈ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಕೂಡ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಇನ್ನೂ ಡೆವಿಲ್ ಚಿತ್ರದ ಮುಂದಿನ ಹಂತದ ಚಿತ್ರೀಕರಣ ಹೈದ್ರಾಬಾದ್ ನಲ್ಲಿ ನಡೆಯಲಿದ್ದು, ಡಿಬಾಸ್ ಏಪ್ರಿಲ್ 13ರಿಂದ ಮತ್ತೆ ಡೆವಿಲ್ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಒಟ್ಟಾರೆ ಸಿಕ್ಕಾಪಟ್ಟೆ ಬದಲಾಗಿರೋ ದರ್ಶನ್ ರ ತಾನಾಯ್ತು, ತನ್ನ ಸಿನಿಮಾ ಆಯ್ತು ಅಂತ ಓಡಾಡ್ತಿರೋದು ಇಂಟರೆಸ್ಟಿಂಗ್ ಅನಿಸಿದೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version