ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್‌ಗೆ ಪ್ರಕರಣದ ಆರೋಪಿಗಳು ಹಾಜರಿದ್ದರು. ನಟ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳಲ್ಲಿ 15 ಜನ ಹಾಜರಿದ್ದರು. ಇಂದು ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್, ಪವಿತ್ರಗೌಡ ಅವರನ್ನು ತಿರುಗಿ ನೋಡದೇ ಕುಳಿತಿದ್ದರು. ವಕೀಲ ಸುನೀಲ್ ಕುಮಾರ್ ಜೊತೆಗೆ ಮಾತುಕತೆ ನಡೆಸುತ್ತಿದ್ದ ದರ್ಶನ್, ನ್ಯಾಯಾಧೀಶರ ಎದುರು 15 ಆರೋಪಿಗಳು ಹಾಜರಾಗಿದ್ದರೂ, ತಮ್ಮ ಸಹ-ಆರೋಪಿ ಪವಿತ್ರಗೌಡ ಅವರೊಂದಿಗೆ ಮಾತನಾಡದೆ ನಿಂತಿದ್ದರು. ನ್ಯಾಯಾಧೀಶರು ಆರೋಪಿಗಳ ಹೆಸರುಗಳನ್ನು ಕರೆಯುತ್ತಿದ್ದ ಸಂದರ್ಭದಲ್ಲಿ ಪವಿತ್ರಗೌಡ ಪಕ್ಕದಲ್ಲೇ ನಿಂತಿದ್ದರೂ ದರ್ಶನ್ ಅವರು ಮೌನವಾಗಿದ್ದರು.
ಪ್ರಕರಣದಲ್ಲಿ, ಆರೋಪಿ ನಿಖಿಲ್ ಮತ್ತು ಕೇಶವ್ ಕೋರ್ಟ್‌ಗೆ ಗೈರಾಗಿದ್ದರೂ ಇತರ ಆರೋಪಿಗಳು ಹಾಜರಾಗಿದ್ದರು. ದರ್ಶನ್ ಅವರು ಪವಿತ್ರಗೌಡರನ್ನು ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳೊಂದಿಗೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಇದೇ ನಡುವೆ, ಆರೋಪಿಗಳು ಸಾಕ್ಷ್ಯ ಮಾಫಿ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆರೋಪಗಳು ಹೊರಹೊಮ್ಮಿವೆ. ನ್ಯಾಯಾಧೀಶರಿಗೆ ಏನೇ ಹೇಳಿದರು ಅರ್ಜಿ ಸಲ್ಲಿಸಿ ಎಂದು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ, ವಕೀಲ ಸುನೀಲ್ ಕುಮಾರ್ ಹೈಕೋರ್ಟ್‌ನಲ್ಲಿ ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ವಾದಿಸಿದ್ದಾರೆ. ಜಾಮೀನು ರದ್ದತಿಗೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಆದರೆ, ಇತ್ತೀಚೆಗೆ ಇತರ ಆರೋಪಿಗಳು ದರ್ಶನ್ ವಿರುದ್ಧ ಮಾಫಿ ಸಾಕ್ಷ್ಯ ನೀಡುವಂತೆ ಪೊಲೀಸರು ಮತ್ತು ವಕೀಲರ ಹೆಸರಿನಲ್ಲಿ ಒತ್ತಡ ಹೇರಲಾಗುತ್ತಿದೆ ಎಂದು ಆರೋಪ. 3-4 ಆರೋಪಿಗಳ ಮೇಲೆ ಈ ಒತ್ತಡ ತೀವ್ರವಾಗಿದೆ .
ವಿಚಾರಣೆ ಮುಗಿಸಿ ಪವಿತ್ರಾ ಗೌಡ ಕಣ್ಣೀರು ಹಾಕುತ್ತಾ ಕೋರ್ಟ್ನನಿಂದ ಹೊರಬಂದಿದ್ದಾರೆ. ಬಳಿಕ ಕೋರ್ಟ್‌ನಿಂದ ನೇರವಾಗಿ ಆರ್‌ಆರ್ ನಗರದ ಮನೆಯತ್ತ ಪವಿತ್ರಾ ಗೌಡ ಹೊರಟಿದ್ದಾರೆ. ಜನವರಿ 10ರಂದು ನಡೆದಿದ್ದ ಕೋರ್ಟ್ ವಿಚಾರಣೆ ವೇಳೆಯೂ ದರ್ಶನ್-ಪವಿತ್ರಾ ಮುಖಾಮುಖಿ ಆಗಿದ್ದರು. ಈ ವೇಳೆ ಇಬ್ಬರೂ ಮಾತನಾಡಿದ್ದರು. ಆದರೆ ಈ ಬಾರಿ ಮಾತನಾಡಿಲ್ಲ.
ಪ್ರಕರಣದಲ್ಲಿ ಸಿಕ್ಕಿಬಿದ್ದ ವಿನಯ್ ಮತ್ತು ಪ್ರದೂಷ್ ಅವರೊಂದಿಗೆ ದರ್ಶನ್ ಆತ್ಮೀಯ ಸಂವಾದ ನಡೆಸಿದ್ದಾರೆ. ಪೊಲೀಸರ ವಿರುದ್ಧ ದರ್ಶನ್ ವಕೀಲರು ಆರೋಪಗಳನ್ನು ಮಾಡಿದ್ದಾರೆ. ಕೋರ್ಟ್ ಹಾಲ್‌ನಿಂದ ಹೊರಟ ದರ್ಶನ್.ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.ವಿಚಾರಣೆ ನಡೆಸಿದ ಬಳಿಕ ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಕೋರ್ಟ್ ಮುಂದೂಡಿದೆ.