ಬೆಂಗಳೂರು: ನಟ ದರ್ಶನ್ ಸಂಬಂಧಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ, ನಗರ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ದರ್ಶನ್ ಅವರ ಕಾನೂನು ತಂಡ ಸಂಪರ್ಕಿಸಿದೆ.
ದರ್ಶನ್ ಪರ ವಾದಕ್ಕೆ ಒಪ್ಪಿಗೆ ನೀಡಿದರೆ ಮಾ.18 ರಂದು ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದರು.
ಕಪಿಲ್ ಸಿಬಲ್ ವಾದಿಸಲು ಸಿದ್ಧತೆ:
- ದರ್ಶನ್ ಪರ ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದರು.
- ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ಕಪಿಲ್ ಸಿಬಲ್ ಅವರನ್ನ ಸಂಪರ್ಕಿಸಲಾಗಿದ್ದು, ಕೇಸ್ ಹಿಸ್ಟರಿ ಮತ್ತು ಹೈಕೋರ್ಟ್ ವಾದ-ಪ್ರತಿವಾದ ನೀಡಲಾಗಿದೆ.
- ಅವರು ಒಪ್ಪಿಗೆ ನೀಡಿದರೆ, ಮಾರ್ಚ್ 18 ರಂದು ನ್ಯಾಯಾಲಯದಲ್ಲಿ ಹಾಜರಾಗುವ ಸಾಧ್ಯತೆಯಿದೆ.
ಬೆಂಗಳೂರಿನ ಪೊಲೀಸರ ಮೇಲ್ಮನವಿ
- ಡಿಸೆಂಬರ್ ಅಂತ್ಯದಲ್ಲಿ, ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು.
- ವಕೀಲ ಅನಿಲ್ ನಿಶಾನಿ ಮುಖಾಂತರ 1492 ಪುಟಗಳ ಕಡತವನ್ನು ರಾಜ್ಯ ಸರ್ಕಾರ ಸಲ್ಲಿಸಿದೆ.
ಕಡತದ ಪ್ರಮುಖ ಅಂಶಗಳು
- ಹೈಕೋರ್ಟ್ ಜಾಮೀನು ಆದೇಶದ ಪ್ರತಿಗಳು
- ಎಫ್‌ಐಆರ್, ಮರಣೋತ್ತರ ಪರೀಕ್ಷೆ ವರದಿ
- ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳ ತರ್ಜುಮೆ
- ಸಿಡಿಆರ್, ಪಂಚನಾಮೆ, ಡಿಜಿಟಲ್ ವಸ್ತುಗಳ ವಿಶ್ಲೇಷಣೆ
- ಸೆಷನ್ಸ್ ಕೋರ್ಟ್‌ನ ಜಾಮೀನು ವಜಾ ಆದೇಶ, ವೈದ್ಯಕೀಯ ವರದಿ, ಬಿಜಿಎಸ್ ಆಸ್ಪತ್ರೆಯ ಡಾಕ್ಟರ್ ವರದಿ
ಈ ಎಲ್ಲಾ ದಾಖಲೆಗಳನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಮಾರ್ಚ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆಯಿದೆ.