ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಕ್ಕ ಬೇವಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಧ್ರುವ ಆಸರೆ ಫೌಂಡೇಶನ್ ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ಎಂ.ಜಿ. ಕನಕ ಅವರ ನೇತೃತ್ವದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯಾದ ವಿ.ಶೇಷಮ್ಮ ಮತ್ತು ಶಿಕ್ಷಕರುಗಳ ಸಮ್ಮುಖದಲ್ಲಿ ಕಕ್ಕ ಬೇವಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯಿಂದ 7ನೇ ತರಗತಿಯ 250 ಶಾಲಾ ಮಕ್ಕಳಿಗೆ ಉಚಿತವಾಗಿ ಪರೀಕ್ಷಾ ಪ್ಯಾಡ್ (Exam Pad) ಮತ್ತು ಪೆನ್ನುಗಳನ್ನು ವಿಚಾರಣೆ ಮಾಡಲಾಯಿತು.
ಇದೇ ವೇಳೆಯಲ್ಲಿ ಕನ್ನಡ ಚಲನಚಿತ್ರದ ನಾಯಕ ನಟರಾದ ಧ್ರುವ ಸರ್ಜಾ ಅವರು ವೀಡಿಯೋ ಕಾಲ್ ಮೂಲಕ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಎಂ.ಜಿ ಕನಕ ಅವರು ಮಾತನಾಡಿ ಸುಮಾರು 15 ವರ್ಷದಿಂದ ಇಲ್ಲಿಯವರೆಗೆ ಸಮಾಜ ಸೇವೆ ಮಾಡುತ್ತಾ ಮತ್ತು ಹಲವಾರು ಕೆಲಸಗಳನ್ನು ಮಾಡಿರುವೆ, ಈಗ ನಾನು ಚಲನಚಿತ್ರ ನಟ ಧ್ರುವ ಸರ್ಜಾ ಅವರ ಅಭಿಮಾನಿಯಾಗಿ ಅವರ ಹೆಸರಿನಲ್ಲಿ ಅದು ಬಳ್ಳಾರಿಯಲ್ಲಿ ಧ್ರುವ ಆಸರೆ ಫೌಂಡೇಶನ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಸಮಾಜ ಸೇವೆಯಲ್ಲಿ ಮುಂದಾಗಿದ್ದೇನೆ, ಇನ್ನಷ್ಟು ಸಮಾಜ ಸೇವೆ ಮತ್ತು ಕೆಲಸ ಕಾರ್ಯಗಳನ್ನು ಮಾಡಲು ಆ ದೇವರು ನನಗೆ ಶಕ್ತಿ ಕೊಡಲಿ ಹಾಗೂ ಮಕ್ಕಳ ಭವಿಷ್ಯವು ಶಿಕ್ಷಣದಿಂದ ರೂಪಿತವಾದರೆ, ಸಮಾಜದಲ್ಲಿ ಸುಸ್ಥಿತಿ ಮೂಡುತ್ತದೆ.
ಶಿಕ್ಷಣದಿಂದ ಕೇವಲ ಮನುಷ್ಯ ಬದಲಾಗುವುದಿಲ್ಲ ಇಡೀ ಸಮುದಾಯ ಹಾಗೂ ಸಮಾಜ ಬದಲಾಗುತ್ತದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಉನ್ನತ ಉದ್ದೆ ಪಡೆದರೆ ಸಮಾಜಕ್ಕೆ ಒಳ್ಳೆಯ ಸೇವೆ ನೀಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗೂ ಧ್ರುವ ಆಸರೆ ಫೌಂಡೇಶನ್ ಮಕ್ಕಳ ಭವಿಷ್ಯ ರೂಪಿಸಲು ನಿರಂತರವಾಗಿ ಕೆಲಸ ಮಾಡಲಿದೆ ಎಂದು ಎಂ.ಜಿ ಕನಕ ಅವರ ಹೇಳಿದರು.
ಈ ಸಂದರ್ಭದಲ್ಲಿ ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಎಂಜಿ.ಕನಕ, ಶಾಲೆಯ ಮುಖ್ಯ ಶಿಕ್ಷಕಿಯಾದ ವಿ.ಶೇಷಮ್ಮ, ಕೆ.ಎಸ್.ಜೆ ಯೂನಿಯನ್ ಜಿಲ್ಲಾಧ್ಯಕ್ಷರು ಹಾಗೂ ವರದಿಗಾರರಾದ ರಮೇಶ ಎನ್ ಎರುಗುಡಿ, ಅಮರಾಪುರ ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಿ ರೆಡ್ಡಿ, ರುದ್ರಪ್ಪ, ಲಕ್ಷ್ಮಮ್ಮ, ಕಿರೀಟಪ್ಪ, ಅಹಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾರ್ ಫಾರೂಕ್, ಅಹಿಂದ ಆಟೋ ಚಾಲಕ ಘಟಕದ ಅಧ್ಯಕ್ಷ ಆಪ್ತಮಿತ್ರ ಭಾಷಾ, ರಾಮಕೃಷ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗುರು ಶಾಂತಪ್ಪ, ಶಾಲೆಯ ಶಿಕ್ಷಕರಾದ ಹೇಮಲತಾ, ಸುಧಾ, ಪರಿಮಳ, ಮೌನೇಶ್ವರಿ, ಚಂದ್ರಶೇಖರ, ಗ್ರಾಮದ ಮುಖಂಡರಾದ ಬೆಳ್ಳಿ ಸೋಮಲಿಂಗ, ಬಿಕೆ ಲಕ್ಷ್ಮಣ, ಹನುಮಂತರೆಡ್ಡಿ ಸೇರಿದಂತೆ ಶಾಲೆಯ ಮಕ್ಕಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.