ಪ್ರಾಡಕ್ಟ್‌ಗಳು ಸೇಲ್ ಆಗ್ಬೇಕಂದ್ರೆ, ಕ್ವಾಲಿಟಿ ಅಷ್ಟೇ ಅಲ್ಲ, ಜಾಹೀರಾತು ಕೂಡಾ ಅಷ್ಟೇ ಮುಖ್ಯ. ಮಾರ್ಕೆಟಿಂಗ್ ಕೂಡಾ ಅಷ್ಟೇ ಮುಖ್ಯ. ಕೋಟಿ ಕೋಟಿ ಖರ್ಚು ಮಾಡಿ ಜಾಹೀರಾತು ಮಾಡೋ ಕಂಪೆನಿಗಳಿವೆ. ಒಂದು ಜಾಹೀರಾತಿಗೆ ಯಾರು ಬ್ರಾಂಡ್ ಅನ್ನೋದು ಕೂಡಾ ಅಷ್ಟೇ ಇಂಪಾರ್ಟೆಂಟ್. ಯಾರು ಜಾಹೀರಾತಿನಲ್ಲಿ ನಟಿಸ್ತಾರೋ.. ಅವರ ಫೇಸ್ ವ್ಯಾಲ್ಯೂ ಕೂಡಾ ಅಷ್ಟೇ ಮುಖ್ಯ. ಅಂತಾದ್ದರಲ್ಲಿ ಒಂದು ಜಾಹೀರಾತಿಗೆ ಸುಮಾರು 50 ಕೋಟಿ ಖರ್ಚು ಮಾಡ್ತಾರೆ ಅಂದ್ರೆ.. ಯೆಸ್.. ಅಂತಾದ್ದೊಂದು ಜಾಹೀರಾತಿಗಿಂತ ಹೆಚ್ಚಾಗಿ ಆ ಜಾಹೀರಾತಿಗೆ ಖರ್ಚಾಗಿರುವ ಹಣವೇ ಈಗ ದೊಡ್ಡ ಸಂಚಲನ ಸೃಷ್ಟಿಸಿದೆ. ಅದು ಡ್ರೀಮ್ 11 ಜಾಹೀರಾತು.
ಈ ಜಾಹೀರಾತಿನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್, ವಿಕೆಟ್ ಕೀಪರ್ ರಿಷಬ್ ಪಂತ್, ನಟ ರಣಬೀರ್ ಕಪೂರ್, ಹಾರ್ದಿಕ್ ಪಾಂಡ್ಯ, ಜಸ್ ಪ್ರೀತ್ ಬೂಮ್ರಾ, ಅಲಿಯಾ ಭಟ್, ಅರ್ಬಾಜ್ ಖಾನ್.. ಹೀಗೆ ದೊಡ್ಡ ದೊಡ್ಡ ಸ್ಟಾರ್ ನಟರೇ ತುಂಬಿಕೊಂಡಿದ್ದಾರೆ. ಒಬ್ಬೊಬ್ಬರ ಸಂಭಾವನೆಯೂ ಕೋಟಿ ಕೋಟಿ. ಖರ್ಚೂ ಕೋಟಿ.. ಕೋಟಿ … ಲಾಭವೂ ಕೋಟಿ ಕೋಟಿ..
ಇವರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋದು ಅಮೀರ್ ಖಾನ್. ಒಂದು ಜಾಹೀರಾತಿಗೆ 10 ಕೋಟಿ ಪಡೆದುಕೊಳ್ತಾರಂತೆ. ನಂಬರ್ 2, ರಣಬೀರ್ ಕಪೂರ್. ಅವರದ್ದು 6 ಕೋಟಿ ಆದ್ರೆ, ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ಒಂದು ಜಾಹೀರಾತಿಗೆ 5 ಕೋಟಿ ತಗೊಳ್ತಾರೆ. ಹಾರ್ದಿಕ್ ಪಾಂಡ್ಯ ಮತ್ತು ಅಲಿಯಾ ಭಟ್ ತಲಾ 4 ಕೋಟಿ ತಗೊಂಡ್ರೆ, ಬೂಮ್ರಾ ಮೂರೂವರೆ ಕೋಟಿ ತಗೊಳ್ತಾರಂತೆ. ಇನ್ನು ರಿಷಬ್ ಪಂಡ್ 2 ಕೋಟಿ ತಗೊಂಡ್ರೆ, ಜಾಕಿ ಶ್ರಾಫ್ 50 ಲಕ್ಷ, ಅರ್ಬಾಜ್ ಖಾನ್ 35 ಲಕ್ಷ ತಗೊಳ್ತಾರಂತೆ.
ಅಲ್ಲಿಗೆ ಇವರ ಜಾಹೀರಾತು ಸಂಭಾವನೆಗೆಂದೇ ಸುಮಾರು 40 ಕೋಟಿ ಖರ್ಚಾಗಿದೆ. ಇನ್ನೂ ಜಾಹೀರಾತು ಮೇಕಿಂಗ್ ಸಪರೇಟ್. ಆಮೇಲೆ ಆ ಜಾಹೀರಾತನ್ನ ಟಿವಿ, ಒಟಿಟಿ, ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡೋದಕ್ಕೂ ದುಡ್ಡು ಕೊಡ್ಬೇಕು. ಅದು 10 ಸೆಕೆಂಡಿಗೆ 10 ಸಾವಿರವೂ ಆಗಬಹುದು, 10 ಲಕ್ಷವೂ ಆಗಬಹುದು. ಅಲ್ಲಿಗೆ ಒಂದು ಜಾಹೀರಾತು ಮಾಡಿ, ಅದನ್ನ ಜನರಿಗೆ ಮುಟ್ಟಿಸಬೇಕು ಅಂದ್ರೆ, ಏನಿಲ್ಲ ಅಂದ್ರೂ ಸುಮಾರು 100 ಕೋಟಿ ಖರ್ಚಾಗುತ್ತೆ.
ಎಲ್ಲ ಓಕೆ.. 100 ಕೋಟಿ ಖರ್ಚು ಮಾಡಿ, ಡ್ರೀಮ್ 11 ಮಾಡ್ತಾರೆ. ಆ ಡ್ರೀಮ್ 11 ಕಂಪೆನಿಗೆ ಅಷ್ಟು ಲಾಭ ಸಿಗುತ್ತಾ..?
ಡೌಟೇ ಬೇಡ. ಈ ಡ್ರೀಮ್ 11 ಕಂಪೆನಿ ವರ್ಷಕ್ಕೆ ಸುಮಾರು 200 ಕೋಟಿ ಲಾಭ ಮಾಡುತ್ತೆ. 200 ಕೋಟಿ ಲಾಭ ಮಾಡೋಕೆ, 100 ಕೋಟಿ ಖರ್ಚು ಮಾಡೋದ್ರಲ್ಲಿ ಅರ್ಥ ಇದ್ಯಾ.. ಅಂದ್ರೆ.. ಇದೆ. ಡ್ರೀಮ್ 11 ತನ್ನ ಖರ್ಚಿನಲ್ಲಿ ಈ ಜಾಹೀರಾತಿನ ಲೆಕ್ಕವನ್ನೂ ಸೇರಿಸುತ್ತೆ.
ಒಟ್ಟಾರೆ ಈ ಕಂಪೆನಿಯ ಮೌಲ್ಯ ಎಷ್ಟ ಗೊತ್ತಾ.. 6,384 ಕೋಟಿ. ಈ ಕಂಪೆನಿಯಲ್ಲಿ ಕೆಲಸ ಮಾಡೋವ್ರ ಸಂಖ್ಯೆ ಒಂದು ಸಾವಿರ ಕೂಡಾ ಕ್ರಾಸ್ ಆಗಲ್ಲ. ಇಷ್ಟಕ್ಕೂ ಲಕ್ಷಾಂತರ ಮಂದಿಯಿಂದ ದುಡ್ಡು ತಗೊಂಡು, ಸಾವಿರಾರು ಮಂದಿಗೆ ಬಹುಮಾನ ಕೊಡೋ ಡ್ರೀಂ 11 ಕಂಪೆನಿ ಒಂದು ಜೂಜು. ಈ ಜೂಜಿನಲ್ಲಿ ದುಡ್ಡು ಕೊಟ್ಟು ಕಳ್ಕೊಂಡವರು ಇದ್ದಾರೆ. ಲಾಭ ಮಾಡಿದವರೂ ಇದ್ಧಾರೆ. ಆದರೆ.. ಲಾಭ ಮಾಡಿದವರ ಸಂಖ್ಯೆ ಕಡಿಮೆ ಅಷ್ಟೇ. ಆದರೆ.. ಕಂಪೆನಿ ಮಾತ್ರ ಜಗತ್ತಿನಲ್ಲಿ ಯಾವುದೇ ಕಡೆ ಕ್ರೀಡೆ ನಡೀಲಿ.. ಐಪಿಎಲ್, ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಬಿಬಿಎಲ್, ಬಿಗ್ ಬ್ಯಾಷ್, ಫುಟ್ ಬಾಲ್, ವಾಲಿಬಾಲ್.. ಎಲ್ಲ ಕಡೆ ದುಡ್ಡು ಮಾಡ್ತಾನೇ ಇದೆ.