ಚೇತನ್ ನಾಯ್ಕ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಸಿನಿಮಾಗಳ ಯಶಸ್ಸಿನ ಅಲೆಯಲ್ಲಿದ್ದಾರೆ. ಸಲಗ, ಭೀಮ ಮೂವಿ ಯಶಸ್ವಿಯಾದ ಮೇಲೆ ದುನಿಯಾ ವಿಜಯ್ ಅವರನ್ನು ಪರಬಾಷೆ ಸಿನಿಮಾಗಳು ಮನೆಗೇ ಹುಡುಕಿಕೊಂಡು ಬರ್ತಾಯಿವೆ. ಅದೇ ರೀತಿ ದುನಿಯಾ ವಿಜಯ್ ಅವರು ಸ್ಯಾಂಡಲ್ ವುಡ್ ನಿಂದ ಕಾಲಿವುಡ್ ಪದಾರ್ಪಣೆ ಮಾಡುತ್ತಿದ್ದು, ಸಿನಿಮಾವೊಂದರ ಮುಹೂರ್ತದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತಳಮಟ್ಟದಿಂದ ದುಡಿಮೆ ಮಾಡಿದ ದುನಿಯಾ ವಿಜಯ್, ಇಂದು ಪರಭಾಷೆಯ ಸಿಮಾಗಳಲ್ಲೂ ಅಭಿನಯ ಮಾಡುವ ಹಂತಕ್ಕೆ ಬೆಳೆದಿದ್ದಾರೆ ಅನ್ನೋದು ನಿಜಕ್ಕೂ ಹೆಮ್ಮೆಯ ವಿಷಯ. ಇತ್ತೀಚೆಗಷ್ಟೇ ತೆಲುಗು ಸಿನಿಮಾಗೆ ಡೆಬ್ಯೂ ಮಾಡಿದ್ದರು. ಹೌದು.. ತೆಲುಗಿನ ಹಿರಿಯ ನಟರಾಗಿರುವ ಬಾಲಕೃಷ್ಣ ಜೊತೆಗೆ ನಟನೆ ಮಾಡಿದ್ದ ದುನಿಯಾ ವಿಜಯ್, ವಿಲನ್ ರೋಲ್ ನಲ್ಲಿ ಜೋರಾಗಿ ಅಬ್ಬರಿಸಿದ್ದರು. ವೀರಸಿಂಹಾರೆಡ್ಡಿ ಚಿತ್ರದಲ್ಲಿ ಬಾಲಯ್ಯ ಎದುರು ತೊಡೆ ತಟ್ಟಿ ಕಮಾಲ್ ಮಾಡಿದ್ರು.
ಅದರ ಬೆನ್ನಲ್ಲಿ ಈಗ ದುನಿಯಾ ವಿಜಯ್ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ನಿರ್ದೇಶನ, ನಟನೆಯಲ್ಲಿ ಬ್ಯುಸಿ ಇರೋ ದುನಿಯಾ ವಿಜಯ್, ತಮಿಳಿನ ದೊಡ್ಡ ಸಿನಿಮಾದಲ್ಲಿ ಅಭಿನಯಿಸಲು ಸಿದ್ದರಾಗಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ನಟಿಸುತ್ತಿರುವ ಮೂಕುತಿ ಅಮ್ಮನ್-2 ಸಿನಿಮಾದಲ್ಲಿ ವಿಲನ್ ಆಗಿ ಕಾಣಲಿದ್ದಾರಂತೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಅದ್ದೂರಿ ಮುಹೂರ್ತ ಸಮಾರಂಭ ನಡೆದಿದ್ದು, ಅಲ್ಲಿ ದುನಿಯಾ ವಿಜಯ್ ಕೂಡ ಭಾಗಿಯಾಗಿದ್ದಾರೆ. ಸುಂದರ್ ಸಿ ಮೂಕುತಿ ಅಮ್ಮನ್- 2 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಮೊದಲ ಭಾಗ ಸೂಪರ್ ಹಿಟ್ ಆಗಿದ್ದರಿಂದ ಸೀಕ್ವೆಲ್ ತಯಾರಾಗ್ತಿದೆ.
ಚೇತನ್ ನಾಯ್ಕ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್