ವಿಶ್ವದಲ್ಲೇ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ಪ್ರಕಟ

ವಿಶ್ವದಲ್ಲೇ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ಪ್ರಕಟ

ಹಗಹಗಹ (5)

ನವದೆಹಲಿ: ಫೋರ್ಬ್ಸ್ 2024ರಲ್ಲಿ ಅತ್ಯಧಿಕ ಸಂಭಾವನೆ ಪಡೆದ ನಟರ ಪಟ್ಟಿ ಪ್ರಕಟಿಸಿದೆ. WWE ಮಾಜಿ ಕುಸ್ತಿಪಟು ಮತ್ತು ಹಾಲಿವುಡ್ ಸೂಪರ್ಸ್ಟಾರ್ ಡ್ವೇನ್ ಜಾನ್ಸನ್ (ದಿ ರಾಕ್) ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಅವರು ಈ ವರ್ಷ ₹769 ಕೋಟಿ ($88 ಮಿಲಿಯನ್) ಸಂಪಾದಿಸಿದ್ದಾರೆ. ಇದು ಭಾರತದ ಸ್ಟಾರ್ ಅಲ್ಲು ಅರ್ಜುನ್ನ ಪುಷ್ಪ 2 ಚಿತ್ರದ ಸಂಭಾವನೆ (₹300 ಕೋಟಿ) ಗಿಂತ ದುಪ್ಪಟ್ಟಿಗೂ ಹೆಚ್ಚು. ಡ್ವೇನ್ ಜಾನ್ಸನ್ ಇದೇ 5ನೇ ಬಾರಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ರೆಡ್ ಒನ್ ಮತ್ತು ಮೋನಾ 2 ಚಿತ್ರಗಳು ಅವರ ಆದಾಯಕ್ಕೆ ಪ್ರಮುಖ ಕಾರಣಗಳಾಗಿದೆ. 

2024ರ ಹೆಚ್ಚು ಸಂಭಾವನೆ ಪಡೆದ ಟಾಪ್ 10 ಹಾಲಿವುಡ್ ನಟರು
  1. ಡ್ವೇನ್ ಜಾನ್ಸನ್ – $88 ಮಿಲಿಯನ್ (₹769 ಕೋಟಿ)
  2. ರ್ಯಾನ್ ರೇನೋಲ್ಡ್ಸ್ – $88 ಮಿಲಿಯನ್
  3. ಕೆವಿನ್ ಹಾರ್ಟ್ – $81 ಮಿಲಿಯನ್
  4. ಜೆರಿ ಸೈನ್ಫೀಲ್ಡ್ – $60 ಮಿಲಿಯನ್
  5. ಹ್ಯೂ ಜ್ಯಾಕ್ಮನ್ – $50 ಮಿಲಿಯನ್
  6. ಬ್ರಾಡ್ ಪಿಟ್ – $32 ಮಿಲಿಯನ್
  7. ಜಾರ್ಜ್ ಕ್ಲೂನಿ – $31 ಮಿಲಿಯನ್
  8. ಆಡಮ್ ಸ್ಯಾಂಡ್ಲರ್ – $26 ಮಿಲಿಯನ್
  9. ವಿಲ್ ಸ್ಮಿತ್ – $26 ಮಿಲಿಯನ್
  10. ನಿಕೋಲ್ ಕಿಡ್ಮನ್ – $21 ಮಿಲಿಯನ್
ಭಾರತದಲ್ಲಿ ಗರಿಷ್ಠ ಸಂಭಾವನೆ ಪಡೆದ ನಟರು (2024)
  1. ಅಲ್ಲು ಅರ್ಜುನ್ – ₹300 ಕೋಟಿ (ಪುಷ್ಪ 2)
  2. ಜೋಸೆಫ್ ವಿಜಯ್ – ₹130-275 ಕೋಟಿ
  3. ಶಾರುಕ್ ಖಾನ್ – ₹150-250 ಕೋಟಿ
  4. ರಜನಿಕಾಂತ್ – ₹125-270 ಕೋಟಿ
  5. ಅಮೀರ್ ಖಾನ್ – ₹100-275 ಕೋಟಿ
  6. ಪ್ರಭಾಸ್ – ₹100-200 ಕೋಟಿ
  7. ಅಜಿತ್ ಕುಮಾರ್ – ₹100-165 ಕೋಟಿ
  8. ಸಲ್ಮಾನ್ ಖಾನ್ – ₹100-150 ಕೋಟಿ
  9. ಕಮಲ್ ಹಾಸನ್ – ₹100-150 ಕೋಟಿ
  10. ಅಕ್ಷಯ್ ಕುಮಾರ್ – ₹60-145 ಕೋಟಿ
ADVERTISEMENT
ADVERTISEMENT
Exit mobile version