ಕೇಂದ್ರ ಸರ್ಕಾರ 2019ರಲ್ಲಿ ಜಮ್ಮು ಕಾಶ್ಮೀರದಲ್ಲಿದ್ದ ಆರ್ಟಿಕಲ್ 370ಯನ್ನು ರದ್ದುಗೊಳಿಸಿತು. ಅದಾದ ಬಳಿಕ ಆದಂತಹ ಬದಲಾವಣೆ ಹಾಗೂ ಬೆಳವಣಿಗೆಗಳು ಖುಷಿ ಕೊಟ್ಟಿತ್ತು. ಆದ್ರೀಗ ಮತ್ತೆ ಆ ಖುಷಿಯನ್ನ ಕಸಿದುಕೊಂಡಿದ್ದಾರೆ ಕಸಾಯಿಗಾರರು. ಹಾಗಾದ್ರೆ ಆರ್ಟಿಕಲ್ 370 ರದ್ದು ಆಗೋಕೆ ಮುನ್ನ ಹೇಗಿತ್ತು ಕಾಶ್ಮೀರ..? ಐದಾರು ವರ್ಷಗಳಲ್ಲಿ ಆದ ಡೆವಲಪ್ಮೆಂಟ್ಸ್ ಏನು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರ.. ನಮ್ಮ ಅಖಂಡ ಭಾರತದ ಅವಿಭಾಜ್ಯ ಅಂಗ. ಆದ್ರೆ 2019ರ ಆಗಸ್ಟ್ 5ರ ವರೆಗೆ ಅದು ಪ್ರತ್ಯೇಕ ಪರಮಾವಧಿಯನ್ನು ಹೊಂದಿತ್ತು. ಅರ್ಥಾತ್ ಅಲ್ಲಿ ಆರ್ಟಿಕಲ್ 370 ಜಾರಿಯಲ್ಲಿತ್ತು. ದೇಶಕ್ಕೆಲ್ಲಾ ಒಂದು ರೂಲ್ಸ್ ಆದ್ರೆ, ಅಲ್ಲಿನ ಜಮ್ಮು ಕಾಶ್ಮೀರ್‌ಗೆ ಅದರದ್ದೇ ಪ್ರತ್ಯೇಕ ರೂಲ್ಸ್ ಆ್ಯಂಡ್ ರೆಗ್ಯೂಲೇಷನ್ಸ್. ಅದೇ ಕಾರಣದಿಂದ ಜಮ್ಮು ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನ ಪಿಓಕೆ ಆಗಿ ಆಕ್ರಮಿಸಿಕೊಂಡಿದೆ. ಇಂದಿಗೂ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಗಳ ಸುಪರ್ದಿಯಲ್ಲೇ ಇದೆ.
ಅಂದಹಾಗೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಆದ ಮಹತ್ವದ ಬೆಳವಣಿಗೆ ಅಂದ್ರೆ ಆರ್ಟಿಕಲ್ 370 ರದ್ದುಗೊಳಿಸಿದ್ದು. ಹೌದು.. ಸಂಸತ್ತಿನಲ್ಲಿ ಮೋದಿ ಸರ್ಕಾರ ರಾಷ್ಟ್ರಪತಿಗಳ ಅನುಮೋದನೆ ಮೇರೆಗೆ ಆರ್ಟಿಕಲ್ 370ಯನ್ನು ರದ್ದುಗೊಳಿಸಿತ್ತು. ಅದಾದ ಬಳಿಕ ಜಮ್ಮು ಕಾಶ್ಮೀರ ಭಾರತದ ಕಾನುನು ವ್ಯವಸ್ಥೆಗೆ ಒಳಪಟ್ಟಿತು. ನಂತ್ರ ಅಲ್ಲಿ ಸ್ಪೆಷಲ್ ಆರ್ಮಿ ಫೋರ್ಸ್ ಹಾಕಲಾಯಿತು. ಟೂರಿಸಂನ ಬೆಳೆಸಲು ಯೋಜನೆಗಳನ್ನ ರೂಪಿಸಿತು. ಉಗ್ರರ ಹುಟ್ಟಡಗಿಸೋ ಕಾರ್ಯಗಳು ನಡೆದವು.
ಯಾವಾಗ ಜಮ್ಮು ಕಾಶ್ಮೀರಕ್ಕೆ ಹೈ ಸೆಕ್ಯೂರಿಟಿ ನೀಡಲಾಯಿತೋ ಆಗ ಪ್ರವಾಸೋದ್ಯಮವನ್ನು ಬೆಳೆಸುವುದರ ಜೊತೆಗೆ ಕ್ರಿಕೆಟ್ ದಂತಕಥೆ ಸಚಿನ್‌ರಂತಹ ದಿಗ್ಗಜರನ್ನ ಕರೆಸಿ, ಜಮ್ಮು-ಕಾಶ್ಮೀರದಲ್ಲಿ ಕ್ರಿಕೆಟ್ ಆಡಿಸಲಾಯಿತು. ತೆಂಡೂಲ್ಕರ್ ಅಂತಹ ಲೆಜೆಂಡ್ ಅಲ್ಲಿ ಕ್ರಿಕೆಟ್ ಆಡಿದ ಬಳಿಕ ರಣಜಿ ಟೀಂ ಹುಟ್ಟಿಕೊಳ್ತು. ಇಂದಿಗೂ ಜಮ್ಮು-ಕಾಶ್ಮೀರದಿಂದ ಪ್ರತ್ಯೇಕ ರಣಜಿ ಕ್ರಿಕೆಟ್ ಟೀಂ ಆ್ಯಕ್ಟೀವ್ ಆಗಿದೆ. ಎಲ್ಲಾ ಟೂರ್ನಮೆಂಟ್ಸ್‌ನಲ್ಲಿ ಭಾಗಿಯಾಗ್ತಿದೆ.
ವಿದೇಶಿ ತಾಣಗಳನ್ನು ಮೀರಿಸುವಂತಹ ಅದ್ಭುತ ಲೊಕೇಷನ್ಸ್ ನಮ್ಮ ಜಮ್ಮು-ಕಾಶ್ಮೀರದಲ್ಲೇ ಇದ್ದವು. ಆದಾಗ್ಯೂ ಫಾರಿನ್ ಲೊಕೇಷನ್ಸ್‌ಗೆ ತೆರಳಿ ಸಿನಿಮಾಗಳನ್ನ ಚಿತ್ರೀಕರಿಸುತ್ತಿತ್ತು ಬಾಲಿವುಡ್. ಅದ್ರಲ್ಲೂ ಆರ್ಟಿಕಲ್ 370 ರದ್ದಾದ ಬಳಿಕ, ಕೇಂದ್ರ ಸರ್ಕಾರ ಭದ್ರತೆ ಕೊಟ್ಟ ನಂತ್ರ ಜಮ್ಮು- ಕಾಶ್ಮೀರದಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಮಾಡಿ, ಇದು ಸುರಕ್ಷಿತವಾಗಿದೆ ಅನ್ನೋದನ್ನ ಸಾರಿದ್ದು ಅಜಯ್ ದೇವಗನ್.
ಹೌದು.. ಸಿಂಗಂ ಅಗೈನ್ ಸಿನಿಮಾದ ಪ್ರಮುಖ ದೃಶ್ಯಗಳನ್ನು ಅಲ್ಲಿ ಶೂಟಿಂಗ್ ಮಾಡಿದ್ರು ದೇವಗನ್. ಅದರಲ್ಲೂ ಜಾಕಿಶ್ರಾಫ್‌ರನ್ನ ಶೂಟ್ ಮಾಡುವ ದೃಶ್ಯವನ್ನು ಅಲ್ಲೇ ಚಿತ್ರಿಸಿದ್ದರು. ಅದಾದ ಬಳಿಕ ಬಾಲಿವುಡ್‌ನಿಂದ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಶಾರೂಖ್ ಖಾನ್, ಆಮೀರ್ ಖಾನ್ ಅಂತಹ ದೊಡ್ಡ ದೊಡ್ಡ ಸೂಪರ್ ಸ್ಟಾರ್ಸ್, ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ಮುಂದಾದ್ರು.
ಬಾಲಿವುಡ್ ಮಂದಿಯೇ ಅಲ್ಲಿ ಶೂಟಿಂಗ್ ಆರಂಭಿಸಿರೋದನ್ನ ಕಂಡು, ಸೌತ್‌ನಿಂದ ತೆಲುಗು, ತಮಿಳು ಫಿಲ್ಮ್ ಮೇಕರ್ಸ್ ಕೂಡ ಅಲ್ಲಿನ ಲೊಕೇಷನ್ಸ್‌ನ ಬಳಸಿ ಶೂಟಿಂಗ್ ಮಾಡಲಾರಂಭಿಸಿದರು. ನಮ್ಮ ಕನ್ನಡದ ಸಾಲು ಸಾಲು ಸಿನಿಮಾಗಳು ಜಮ್ಮು- ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿವೆ. ಅದ್ರಲ್ಲೂ ಅಪ್ಪು ಅವರ ಕೊನೆಯ ಸಿನಿಮಾ ಜೇಮ್ಸ್, ಧ್ರುವ ಸರ್ಜಾರ ಮಾರ್ಟಿನ್ ಸಿನಿಮಾ ಸೇರಿದಂತೆ ಸಾಕಷ್ಟು ಚಿತ್ರಗಳು ಜಮ್ಮು-ಕಾಶ್ಮೀರದ ಸುಂದರ ತಾಣಗಳಲ್ಲಿ ಸೆರೆಯಾಗಿವೆ.
ಇದೇ ಮೇ-1ಕ್ಕೆ ರಿಲೀಸ್ ಆಗ್ತಿರೋ ನಾನಿಯ ಹಿಟ್-3 ಸಿನಿಮಾ ಕೂಡ ಪಹಲ್ಗಾಮ್‌ನಲ್ಲೇ ಇತ್ತೀಚೆಗೆ ಚಿತ್ರೀಕರಣಗೊಂಡಿದೆ. ಅದನ್ನ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟಪಡಿಸಿದ್ದಾರೆ ನ್ಯಾಚುರಲ್ ಸ್ಟಾರ್ ನಾನಿ.
ಭಯೋತ್ಪಾದಕ ಕೃತ್ಯಗಳು ಪದೇ ಪದೆ ಮರುಕಳಿಸುತ್ತಿದ್ದ ಹಿನ್ನೆಲೆ ಜಮ್ಮು-ಕಾಶ್ಮೀರದಲ್ಲಿ ಕಳೆದ 20 ವರ್ಷಗಳಿಂದ ಥಿಯೇಟರ್‌ಗಳಿಗೆ ಬೀಗ ಜಡಿಯಲಾಗಿತ್ತು. ಅಲ್ಲಿನ ಜನಕ್ಕೆ ಮನರಂಜನೆ ದೂರದ ಮಾತು. ಪ್ರಾಣವನ್ನು ಅಂಗೈಯಲ್ಲಿ ಇಟ್ಕೊಂಡು ಓಡಾಡುವಂತಹ ಸಂದಿಗ್ಧ ಪರಿಸ್ಥಿತಿ ಏರ್ಪಟ್ಟಿತ್ತು. ಆದ್ರೆ ಆರ್ಟಿಕಲ್ 370 ರದ್ದಾದ ಬಳಿಕ ಬರೋಬ್ಬರಿ 20 ವರ್ಷಗಳ ನಂತ್ರ ಅಲ್ಲಿನ ಥಿಯೇಟರ್ಸ್ ಬಾಗಿಲುಗಳು ಓಪನ್ ಆದವು. ಸಿನಿಮಾಗಳ ಪ್ರದರ್ಶನಕ್ಕೆ ಚಾಲನೆ ಸಿಕ್ಕಿತು.
ಅಲ್ಲದೆ 40 ವರ್ಷಗಳ ಹಿಂದೆಯೇ ನಿಂತು ಹೋಗಿದ್ದ ಫ್ಯಾಷನ್ ಶೋಗಳು ಕೂಡ ಶುಭಾರಂಭಗೊಂಡವು. ಬಾಲಿವುಡ್‌ನಿಂದ ಸ್ಟಾರ್‌ಗಳನ್ನ ಅತಿಥಿಗಳನ್ನಾಗಿ ಕರೆಸಿ, ಫ್ಯಾಷನ್ ಶೋಗಳನ್ನ ನಡೆಸಲಾಯಿತು. ಪಹಲ್ಗಾಮ್‌ನಲ್ಲೂ ಮ್ಯೂಸಿಕ್ ಶೋಗಳು ನಡೆದವು. ಅದಕ್ಕೆ ಬಾಲಿವುಡ್ ಅಂಗಳದ ಸಾಲು ಸಾಲು ಕಲಾವಿದರು ಬಂದು ಕಾರ್ಯಕ್ರಮಗಳನ್ನು ಸಕ್ಸಸ್ ಗೊಳಿಸಿದ್ದಾರೆ.
ಹೀಗೆಲ್ಲಾ ಇರುವಾಗಲೇ ಮತ್ತೆ ಉಗ್ರ ಕ್ರಿಮಿಗಳು ತಮ್ಮ ಕಪಟತನವನ್ನು ಮರೆದಿದ್ದಾರೆ. ಒಂದು ತಿಂಗಳಿಂದ ನಮ್ಮವರೊಂದಿಗೆ ಬೀಡು ಬಿಟ್ಟಿಕೊಂಡು, ಉಂಡ ಮನೆಗೆ ದ್ರೋಹ ಬಗೆಯೋ ಕೆಲಸ ಮಾಡಿದ್ದಾರೆ. ಆ ಜಂತುಗಳನ್ನ ಸುಮ್ಮನೆ ಬಿಡೋ ಮಾತೇ ಇಲ್ಲ ಅನ್ನೋ ಶಪಥ ಕೂಡ ಮಾಡಿದ್ದಾರೆ ಮೋದಿ & ಶಾ. ಸೋ ಸದ್ಯದಲ್ಲೇ ಅವ್ರಿಗೆ ತಕ್ಕ ಪಾಠ ಕಲಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ಚಿತ್ರರಂಗದ ಸಾಕಷ್ಟು ಮಂದಿ ಸ್ಟಾರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾಗಳ ಮೂಲಕ ಕಿಡಿಕಾರಿದ್ದಾರೆ. ಹಾಗಾದ್ರೆ ಯಾರೆಲ್ಲಾ ಏನೆಲ್ಲಾ ಹೇಳಿದ್ದಾರೆ ಅನ್ನೋದನ್ನ ಕ್ವಿಕ್ ಆಗಿ ನೋಡೋಣ ಬನ್ನಿ.
ಯಾವ ಸ್ಟಾರ್ ಏನಂದ್ರು ಗೊತ್ತಾ..?
‘ಭಾರತಾಂಬೆಯ ಕಳಶದಂತಿರೋ ಜಮ್ಮು ಕಾಶ್ಮೀರ ಎಂದಿಗೂ ನಮ್ಮದೇ. ಉಗ್ರರು ಅಮಾಯಕರ ಮೇಲೆ ನಡೆಸಿದಂತ ಕೃತ್ಯ ಎಂದಿಗೂ ಕ್ಷಮಿಸಲಾಗದು’ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ.
‘26 ಮಂದಿಯನ್ನು ಬಲಿ ಪಡೆದದ್ದು ಹೃದಯ ವಿದ್ರಾವಕ ಘಟನೆ. ಇದೊಂದು ಕ್ಷಮಿಸಲಾಗದ ಕೃತ್ಯ’ ಎಂದಿದ್ದಾರೆ ಮೆಗಾಸ್ಟಾರ್ ಚಿರಂಜೀವಿ.
‘ಇದೊಂದು ಶಾಕಿಂಗ್ ಹಾಗೂ ಭಯಾನಕ ಘಟನೆ. ದೇವರು ಆ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ ನೀಡಲಿ. ಒಗ್ಗಟ್ಟಿನಿಂದ ಅಸಲಿ ಶತ್ರುವನ್ನು ಅರಿಯಬೇಕಿದೆ’ ಎಂದು ರವೀನಾ ಟಂಡನ್ ಹೇಳಿದ್ದಾರೆ.
‘ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಮಾಡಿದ ದಾಳಿ ಭಯಾನಕವಾಗಿದೆ. ದುಷ್ಟರು ಮಾತ್ರ ಹೀಗೆ ಮಾಡಲು ಸಾಧ್ಯ. ಕುಟುಂಬಸ್ಥರಿಗಾಗಿ ಪ್ರಾರ್ಥಿಸುವೆ’ ಎಂದರು ಅಕ್ಷಯ್ ಕುಮಾರ್.
‘ಜೀವ ಕಳೆದುಕೊಂಡವರ ಕುಟುಂಬದ ನೋವು ಊಹಿಸಲು ಅಸಾಧ್ಯ. ಇದೊಂದು ಅಮಾನವೀಯ ಘಟನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಿ, ನ್ಯಾಯ ಸಿಗುವ ನಿರೀಕ್ಷೆಯಿದೆ’ ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ.
‘ನಾಗರೀಕ ಸಮಾಜದಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ’ ಎಂದರು ಸೋನು ಸೂದ್.
‘ನನ್ನ ದುಃಖ ಹಾಗೂ ಸಿಟ್ಟನ್ನು ವ್ಯಕ್ತಪಡಿಸಲು ಪದಗಳೇ ಇಲ್ಲ. ಆ ಕುಟುಂಬಗಳಿಗೆ ದೇವರು ಶಕ್ತಿ ನೀಡಲಿ ಅಂತ ದೇವರಲ್ಲಿ ಪ್ರಾರ್ಥಿಸುವೆ. ಈ ಸಂದರ್ಭದಲ್ಲಿ ದೇಶದ ಜೊತೆ ನಾವೆಲ್ಲಾ ನ್ಯಾಯಕ್ಕಾಗಿ ಹೋರಾಡೋಣ’ ಎಂದು ಶಾರೂಖ್ ಖಾನ್ ಹೇಳಿದ್ದಾರೆ.
‘ಅಮಾಯಕರ ಮೇಲೆ ಅಮಾನುಷ ದಾಳಿಯನ್ನು ಖಂಡಿಸುತ್ತೇನೆ. ಅವರಿಗೆ ಈ ರೀತಿ ಆಗಿರೋದು ಖಂಡನೀಯ. ಆ ಕುಟುಂಬದ ಜೊತೆ ನಾವು ಹಾಗೂ ದೇಶ ಒಗ್ಗಟ್ಟಿನಿಂತ ನಿಲ್ಲಬೇಕಿದೆ’ ಎಂದಿದ್ದಾರೆ ಯಶ್.
‘ಈ ಘಟನೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆ ಉಗ್ರರಿಗೆ 7 ಜನ್ಮಕ್ಕೆ ಆಗುವಷ್ಟು ಶಿಕ್ಷೆ ವಿಧಿಸಬೇಕಿದೆ’ ಎಂದು ಅನುಪಮ್ ಖೇರ್ ಹೇಳಿದ್ದಾರೆ.
‘ಈ ಘಟನೆಯಿಂದ ನನ್ನ ಮನಸ್ಸು ಆತಂಕದಲ್ಲಿದೆ. ಮಾನವೀಯತೆ ಇಲ್ಲದೆ ಈ ಕೃತ್ಯ ಎಸಗಿದ್ದಾರೆ. ಈ ರೀತಿ ಅಮಾಯಕರ ಬಲಿ ಪಡೆಯಲು ಹೇಗೆ ಮನಸ್ಸು ಬಂತು..? ಕುಟುಂಬಗಳು ಒಂಟಿಯಲ್ಲ, ಇಡೀ ದೇಶ ಅವರೊಂದಿಗಿದೆ. ಆದಷ್ಟು ಬೇಗ ಆ ಕರಾಳ ಮುಖಗಳು ಬಯಲಾಗಬೇಕು’ ಎಂದರು ಮೋಹನ್‌ಲಾಲ್.
‘ಇದು ಕ್ಷಮಿಸಲಾರದ ಅಪರಾಧ. ನಾವು ಸುಮ್ಮನೆ ಕೂರುವವರಲ್ಲ ಅನ್ನೋದನ್ನ ಉಗ್ರರಿಗೆ ತಿಳಿಸಬೇಕಿದೆ. ಈ ಮೂಲಕ ನಾನು ಮೋದಿ, ಅಮಿತ್ ಶಾ ಹಾಗೂ ರಾಜನಾಥ್ ಸಿಂಗ್ ಬಳಿ ಕೇಳಿಕೊಳ್ಳುವುದೇನೆಂದರೆ ಅವರಿಗೆ ತಕ್ಕ ಪಾಠ ಕಲಿಸಿ’ ಎಂದು ಸಂಜಯ್ ದತ್ ಹೇಳಿದ್ದಾರೆ.
ಈ ಘಟನೆ ಅತೀವ ನೋವು ತಂದಿದೆ. ಜನಸೇನಾ ಪಕ್ಷ ಮೂರು ದಿನ ಮೌನಾಚರಣೆ ಪಾಠಿಸಲಿದೆ. ಈ ರೀತಿಯ ಘಟನೆಯಿಂದ ಉಗ್ರರು ನಮ್ಮ ಭಾರತವನ್ನು ವಿಭಜಿಸಲು ಸಾಧ್ಯವಿಲ್ಲ. ನಮ್ಮ ನಾಯಕರು ಆದಷ್ಟು ಬೇಗ ಕ್ರಮ ಕೈಗೊಳ್ಳುವ ಭರವಸೆ ಇದೆ- ಪವನ್ ಕಲ್ಯಾಣ್
ಒಟ್ಟಾರೆ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್ ಸ್ಟಾರ್‌ಗಳು, ಸ್ಟಾರ್ ಡೈರೆಕ್ಟರ್‌ಗಳು ಈ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ. ವರ್ಷಕ್ಕೆ 2 ಕೋಟಿ ಮಂದಿ ಪ್ರವಾಸಕ್ಕೆಂದು ಜಮ್ಮು- ಕಾಶ್ಮೀರಕ್ಕೆ ತೆರಳುತ್ತಿದ್ದರು. ಇದರಿಂದ ಟೂರಿಸಂ ಡಿಪಾರ್ಟ್‌ಮೆಂಟ್‌ಗೆ ದೊಡ್ಡ ಮೊತ್ತದ ಲಾಭ ಆಗ್ತಿತ್ತು. ಆದ್ರೀಗ ಮತ್ತೆ ಆರ್ಟಿಕಲ್ 370 ಇದ್ದ ದಿನಗಳಂತಾಗಲಿದೆ. ಕನಿಷ್ಟ ಎರಡು ಮೂರು ವರ್ಷಗಳ ಕಾಲ ಆ ಕಡೆ ಜನ ತಲೆ ಹಾಕೋದು ಕಷ್ಟವಿದೆ. ಇದಕ್ಕೆ ನಮ್ಮ ಭಾರತ ಸರ್ಕಾರ ಆ ಪಾಪಿಗಳಿಗೆ ತಕ್ಕ ಪಾಠ ಕಲಿಸಿ, ಮೃತರ ಆತ್ಮಕ್ಕೆ ಶಾಂತಿ ದೊರಕಿಸಬೇಕಿದೆ. ಇಲ್ಲವಾದಲ್ಲಿ ಅಲ್ಲಿರುವ ಜನರೇ ಅಂತಹ ಕೃತ್ಯಗಳಲ್ಲಿ ಭಾಗಿಯಾಗುವ ಉಗ್ರರನ್ನ ಮಟ್ಟ ಹಾಕುವ ತುರ್ತು ಅನಿವಾರ್ಯತೆ ಇದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್