ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ನಟಿ ರನ್ಯಾ ರಾವ್, ಅದಾದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಪಟಾಕಿ ಚಿತ್ರದಲ್ಲೂ ಬಣ್ಣ ಹಚ್ಚಿದ್ರು. ವಾಘಾ ಅನ್ನೋ ಪರಭಾಷಾ ಚಿತ್ರವೊಂದರಲ್ಲೂ ನಟಿಸಿದ್ದ ರನ್ಯಾ ರಾವ್, ಇದೀಗ ಗೋಲ್ಡ್ ಸ್ಮಗ್ಲಿಂಗ್ ಮಾಡಲು ಹೋಗಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಸಿಲುಕಿದ್ದಾಳೆ.
ಹೌದು.. ದುಬೈನಿಂದ ಈಕೆ ಅಕ್ರಮವಾಗಿ ಚಿನ್ನವನ್ನು ಸಾಗಾಣೆ ಮಾಡ್ತಿದ್ದಾಗ ಬೆಂಗಳೂರಿನ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಆಫೀಸರ್ ಗೆ ತಗಲಾಕ್ಕೊಂಡಿದ್ದಾರೆ.
ಅಂದಹಾಗೆ ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಮಾಡ್ತಿದಿದ್ದು ಒಂದೋ ಎರಡೋ ಕೆಜಿ ಚಿನ್ನವಲ್ಲ. ಬರೋಬ್ಬರಿ 14.8 ಕೆಜಿ ಬೃಹತ್ ಮೊತ್ತದ ಚಿನ್ನ ಅನ್ನೋದು ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದೆ. ದೊಡ್ಡ ತಿಮಿಂಗಲವೊಂದು ಬಲೆಗೆ ಬಿದ್ದಂತೆ ಈಕೆ ಏರ್ ಪೋರ್ಟ್ ಕಸ್ಟಮ್ಸ್ DRI ತಂಡಕ್ಕೆ ಸಿಕ್ಕಿಬಿದ್ದಿದ್ದಾಳೆ.
ದುಬೈನಿಂದ ದೆಹಲಿಗೆ ಆಗಮಿಸಿ, ಅಲ್ಲಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಈಕೆ ಮೀನು ಬಲೆಗೆ ಬಿದ್ದಂತೆ ಸಲೀಸಾಗೇ ಅಧಿಕಾರಿಗಳ ಕೈಗೆ ಸಿಲುಕಿಕೊಂಡಿದ್ದಾಳೆ.
ವಿಶೇಷ ಅಂದ್ರೆ ಈಕೆ ಐಪಿಎಸ್ ಆಫೀಸರ್ ಒಬ್ಬರ ಮಗಳು ಎನ್ನಲಾಗ್ತಿದೆ. ಉನ್ನತ ಹುದ್ದೆಯಲ್ಲಿರೋ ಆಫೀಸರ್ ಮಗಳೇ ಈ ರೀತಿ ಕೃತ್ಯ ಎಸಗಿರೋದು ನಿಜಕ್ಕೂ ನಾಚಿಕೆಗೇಡುತನ ಅನಿಸಿದೆ. ಬಹುಶಃ ಅಪ್ಪ ಇದಾರೆ ಅನ್ನೋ ಧೈರ್ಯದ ಮೇಲೆಯೇ ಹೀಗೆ ಮಾಡಿದ್ರಾ ಅಥ್ವಾ ಅಪ್ಪನೇ ಇದಕ್ಕೆ ಸಾಥ್ ಕೊಟ್ರಾ ಅನ್ನೋದನ್ನ ಸದ್ಯ DRI ಕಸ್ಟಮ್ಸ್ ಟೀಂ ವಿಚಾರಣೆ ತ್ವರಿತಗೊಳಿಸಿದೆ.
ಆ್ಯಕ್ಟಿಂಗ್, ಡಬ್ಬಿಂಗ್ ಮಾಡ್ಕೊಂಡು, ಸುತ್ತಾಡ್ಕೊಂಡ್ ಇರೋದು ಬಿಟ್ಟು ಇದೆಲ್ಲಾ ಬೇಕಿತ್ತಾ ರನ್ಯಾ ಮೇಡಂ ನಿಮಗೆ ಅಂತಿದ್ದಾರೆ ನೆಟ್ಟಿಗರು.