ಕನ್ನಡದಲ್ಲಿ ಸದ್ಯ 40 ಕ್ಕೂ ಹೆಚ್ಚು ಸೀರಿಯಲ್ಗಳು ಟೆಲೆಕಾಸ್ಟ್ ಆಗ್ತಾ ಇವೆ. ಈ ಸೀರಿಯಲ್ಗಳಲ್ಲಿ ನಂಬರ್ 1 ಸೀರಿಯಲ್ ಯಾವುದು. ಯಾವ ಸೀರಿಯಲ್ ಲೀಡಿಂಗ್ನಲ್ಲಿದೆ, ಯಾವ ಸೀರಿಯಲ್2ನೇ ಸ್ಥಾನಕ್ಕೆ ಕುಸಿದಿದೆ, ಯಾವ ಧಾರಾವಾಹಿ ರೇಟಿಂಗ್ ರೇಸ್ನಲ್ಲಿ ಕಳೆದೇ ಹೋಗಿದೆ.. ಹೇಗಿದೆ ಗೊತ್ತಾ ಸೀರಿಯಲ್ಗಳ ನಡುವಿನ ಪೈಪೋಟಿ? ಇಲ್ಲಿದೆ ನೋಡಿ ಡಿಟೈಲ್ಸ್..!
ಕನ್ನಡ ಸೀರಿಯಲ್ ಲೋಕದಲ್ಲಿ ಈ ನಡುವೆ ಹೊಸ ಸೀರಿಯಲ್ಗಳ ಎಂಟ್ರಿ ತುಂಬಾನೇ ಆಗ್ತಿದೆ, ಹೊಸ ಹೊಸ ಸೀರಿಯಲ್ ಗಳು, ಹೊಸ ಹೊಸ ಮುಖಗಳು, ಹೊಸ ಕಾನ್ಸೆಪ್ಟ್ ಗಳು.. ಈ ಸೀರಿಯಲ್ಗಳಲ್ಲಿ ಕೆಲವು ಸೀರಿಯಲ್ಗಳು ಜನರ ಮನ ಗೆದ್ದು ರೇಸ್ನಲ್ಲಿ ಅಬ್ಬರಿಸಿದ್ರೆ, ಕೆಲವು ಸೀರಿಯಲ್ಗಳು ರೇಸ್ ನಲ್ಲೂ ಭಾಗಿಯಾಗದೇ ಮೂಲೆ ಗುಂಪಾಗಿವೆ. ಹಾಗಾದ್ರೆ ಈ ವಾರ ಟಾಪ್ ನಲ್ಲಿರೋ ಸೀರಿಯಲ್ ಯಾವುದು ಯಾವ ಚಾನೆಲ್ನಲ್ಲಿ ಯಾವ ಸೀರಿಯಲ್ ಟಾಪ್ ನಲ್ಲಿದೆ ನೋಡಿ..
ಜೀ ಕನ್ನಡದಲ್ಲಿ ಅದ್ಧೂರಿಯಾಗಿ ಲಾಂಚ್ ಆದ ನಾ ನಿನ್ನ ಬಿಡಲಾರೆ ಸೀರಿಯಲ್, ಈ ವಾರ ಕನ್ನಡದಲ್ಲಿ ನಂಬರ್ ಒನ್ ಸೀರಿಯಲ್ ಆಗಿದೆ. ಎಲ್ಲಾ ಚಾನೆಲ್ ಗಳ, ಎಲ್ಲಾ ಸೀರಿಯಲ್ಗಳ ಪಟ್ಟಿಯಲ್ಲಿ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರವಾಗ್ತಿರೋ, ನಾ ನಿನ್ನ ಬಿಡಲಾರೆ ಸೀರಿಯಲ್ ನಂಬರ್ 1ನೇ ಸ್ಥಾನದಲ್ಲಿದೆ, ಈ ಹಿಂದೆ ಈ ಜಾಗದಲ್ಲಿದ್ದ ಅಣ್ಣಯ್ಯ ಸೀರಿಯಲ್ ಈ ವಾರ 2ನೇ ಜಾಗಕ್ಕೆ ಕುಸಿದಿದೆ. ನಿತ್ಯ ಸಂಜೆ 7.30ಕ್ಕೆ ಪ್ರಸಾರವಾಗೋ ಅಣ್ಣಯ್ಯ ಸೀರಿಯಲ್ ಜೊತೆಗೆ, ಜೀ ಕನ್ನಡ ವಾಹಿನಿಯ ಮತ್ತೊಂದು ಸೀರಿಯಲ್ ರಾತ್ರಿ 9 ಗಂಟೆಗೆ ಟೆಲಿಕಾಸ್ಟ್ ಆಗೋ ಶ್ರಾವಣಿ ಸುಬ್ರಮಣ್ಯ 2ನೇ ಸ್ಥಾನದಲ್ಲಿ ಪಟ್ಟು ಹಿಡಿದು ಕೂತಿದೆ.
ಕಳೆದ ವಾರ ನಾ ನಿನ್ನ ಬಿಡಲಾರೆ ಧಾರವಾಹಿ 8.4 ಜಿಆರ್ಪಿ ಗಳಿಸೋ ಮೂಲಕ ಮೊದಲ ಸ್ಥಾನದಲ್ಲಿದ್ರೆ, ಶ್ರಾವಣಿ ಸುಬ್ರಮಣ್ಯ ಹಾಗು ಅಣ್ಣಯ್ಯ ಸೀರಿಯಲ್ 8.3 GRP ಜೊತೆಗೆ 2ನೇ ಸ್ಥಾನದಲ್ಲಿದೆ. ಅಲ್ಲಿಗೆ ಕನ್ನಡದ ಟಾಪ್ ಸೀರಿಯಲ್ಗಳ ಪಟ್ಟಿಯಲ್ಲಿ ಜೀ ಕನ್ನಡದ್ದೇ 3 ಸೀರಿಯಲ್ಗಳಿವೆ.
ಜೀ ಕನ್ನಡ ಸೀರಿಯಲ್ಗಳೇ ಟಾಪ್ನಲ್ಲಿದ್ರೆ, ಹೊಸ ಹೊಸ ಸೀರಿಯಲ್ಗಳ ಮೂಲಕ ಬಿಗ್ ಬಾಸ್ ನಂತ್ರ ರೇಟಿಂಗ್ ಕಾಯ್ದುಕೊಂಡಿರೋ ಕಲರ್ಸ್ ಕನ್ನಡ ಸೀರಿಯಲ್ಗಳ ಕಥೆ ಏನು..? ಕಲರ್ಸ್ ಕನ್ನಡ ಚಾನೆಲ್ಗಳ ನಂಬರ್ 1 ಸೀರಿಯಲ್ ಅಂದ್ರೆ ಅದು ಭಾಗ್ಯಲಕ್ಷ್ಮಿ.. ಹೌದು ಭಾಗ್ಯಲಕ್ಷ್ಮಿ ಧಾರಾವಾಹಿ ಕಲರ್ಸ್ ಕನ್ನಡ ಸೀರಿಯಲ್ಗಳಲ್ಲಿ ನಂಬರ್ 1. ಎಷ್ಟೇ ಹೊಸ ಸೀರಿಯಲ್ಗಳು ಬಂದ್ರೂ ಭಾಗ್ಯಲಕ್ಷ್ಮಿ ಸೀರಿಯಲ್ನ ಸೈಡ್ ಹೊಡೆಯೋಕೆ ಆಗಿಲ್ಲ. ಇನ್ನೂ ಕಳೆದ ವಾರ 2ನೇ ಸ್ಥಾನದಲ್ಲಿದ್ದ ಭಾಗ್ಯಳ ತಂಗಿ ಲಕ್ಷ್ಮಿಯ ಸೀರಿಯಲ್ ಲಕ್ಷ್ಮಿ ಬಾರಮ್ಮ, ಈ ವಾರ 3ನೇ ಸ್ಥಾನಕ್ಕೆ ಕುಸಿದಿದ್ದು, 9 ಗಂಟೆಗೆ ಪ್ರಸಾರವಾಗೋ ರಾಮಾಚಾರಿ ಸೀರಿಯಲ್ ನಂಬರ್ 2ನೇ ಸ್ಥಾನಕ್ಕೇರಿದೆ.
5.2 GRP ಜೊತೆಗೆ ಭಾಗ್ಯಲಕ್ಷ್ಮಿ ಸೀರಿಯಲ್ ನಂಬರ್ 1 ಸ್ಥಾನದಲ್ಲಿದ್ರೆ, 5.0 ರೇಟಿಂಗ್ ನೊಂದಿಗೆ ರಾಮಾಚಾರಿ ಸೀರಿಯಲ್ ನಂಬರ್ 2 ಹಾಗೂ 4.9 ರೇಟಿಂಗ್ನ ಜೊತೆಗೆ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗೋ ಲಕ್ಷ್ಮಿಬಾರಮ್ಮ 3ನೇ ಸ್ಥಾನದಲ್ಲಿದೆ.
ಹಾಗಾದ್ರೆ ಉಳಿದ ಸೀರಿಯಲ್ಗಳ ಕಥೆ ಏನು? ಉಳಿದ ಸೀರಿಯಲ್ಗಳ ಪೈಕಿ ಕನ್ನಡದ ಟಾಪ್ 5 ಸೀರಿಯಲ್ಗಳ ಪಟ್ಟಿ ಮಾಡಿದ್ರೆ ಆ ಪಟ್ಟಿಯಲ್ಲಿ ಜೀ ಕನ್ನಡ ವಾಹಿನಿಯ ಲಕ್ಷ್ಮಿ ನಿವಾಸ 3ನೇ ಸ್ಥಾನದಲ್ಲಿದ್ರೆ, ಅಮೃತಧಾರೆ ಸೀರಿಯಲ್ 4ನೇ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್ ಇದೆ. ಜೀ ಕನ್ನಡಕ್ಕೆ ಹೊಸ ಸೀರಿಯಲ್ ನಾ ನಿನ್ನ ಬಿಡಲಾರೆ ಜಾಕ್ ಪಾಟ್ ಆಗಿದ್ರೆ, ಕಲರ್ಸ್ ಕನ್ನಡಕ್ಕೆ ಹೊಸ ಸೀರಿಯಲ್ಗಳು ಮಾಡದ ಕಮಾಲ್ ಅನ್ನ, ಹಳೆ ಸೀರಿಯಲ್ ಭಾಗ್ಯಲಕ್ಷ್ಮಿಯೇ ಮಾಡ್ತಾ ಇದೆ. ಹಾಗಾದ್ರೆ ಈ ವಾರ ಯಾವ ಸೀರಿಯಲ್ ಟಾಪ್ನಲ್ಲಿ ಬರುತ್ತೆ, ಗೆಸ್ ಮಾಡ್ತಾ ಇರಿ ಅಪ್ಡೇಟ್ ಮಾಡ್ತೀವಿ