ಇದು ದರ್ಶನ’ ಎಂದು ಹೇಳಲು ಹೊರಟಿರೋ ಕಾಂತಾರ ಚಾಪ್ಟರ್-1 ಎಲ್ಲಿಲ್ಲದ ಕ್ಯೂರಿಯಾಸಿಟಿ ಹುಟ್ಟಿಸಿದೆ. ಬಾಹುಬಲಿ, ಕೆಜಿಎಫ್ ಸೀಕ್ವೆಲ್‌ಗಳ ರೀತಿ ಕಾಂತಾರ ಪ್ರೀಕ್ವೆಲ್ ಸದ್ಯ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಟ್ ಮೂವೀಸ್ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಇಷ್ಟು ನಿರೀಕ್ಷೆ ಮೂಡಿಸೋದ್ರ ಹಿಂದಿನ ಅಸಲಿಯತ್ತೇನು..?
ದೈವ ನರ್ತಕನಾಗಿ ಬಣ್ಣ ಹಚ್ಚಿ, ದೈವಿಕ ಅಂಶಗಳಿಂದಲೇ ಪ್ರೇಕ್ಷಕರ ಮನಸ್ಸು ಗೆದ್ದು, ಡಿವೈನ್ ಸ್ಟಾರ್ ಅನಿಸಿಕೊಂಡ ರಿಷಬ್ ಶೆಟ್ಟಿಯ ಸಿನಿಮೋತ್ಸಾಹಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ಹೌದು.. ಕಾಂತಾರ ಸಿನಿಮಾದಿಂದ ಅವರು ನಮ್ಮ ಕನ್ನಡ ಚಿತ್ರರಂಗದ ಗತ್ತು, ಗಮ್ಮತ್ತನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. 16 ಕೋಟಿಯಲ್ಲಿ ತಯಾರಾದ ಕಾಂತಾರ, ಗಲ್ಲಾ ಪೆಟ್ಟಿಗೆಯಲ್ಲಿ 650 ಕೋಟಿ ಗಳಿಸೋ ಮೂಲಕ ಬಾಲಿವುಡ್ ಮಂದಿಯನ್ನ ಕೂಡ ಹುಬ್ಬೇರಿಸಿತ್ತು.
ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿ ತಯಾರಾಗ್ತಿರೋ ಕಾಂತಾರ ಚಿತ್ರದ ಪ್ರೀಕ್ವೆಲ್ ಚಾಪ್ಟರ್-1 ಮೇಲೆ, ರಾಜಮೌಳಿಯ ಬಾಹುಬಲಿ ಹಾಗೂ ಪ್ರಶಾಂತ್ ನೀಲ್‌ರ ಕೆಜಿಎಫ್ ಸೀಕ್ವೆಲ್‌ಗಳಂತೆ ನಿರೀಕ್ಷೆ ಹೆಚ್ಚಿದೆ. ಅದ್ರಂತೆ ಅದರ ಬಜೆಟ್ ಕೂಡ 100ಕೋಟಿಗೆ ಏರಿಕೆ ಆಗಿದೆ. ಈ ಬಾರಿ ಸಾಕಷ್ಟು ದೈವಿಕ ಅಂಶಗಳಿಂದ ಸಿನಿಮಾನ ನೋಡುಗರಿಗೆ ಹೊಸ ಅನುಭವ ನೀಡುವಂತೆ ಕಟ್ಟಿಕೊಡೋ ಯೋಜನೆಯಲ್ಲಿದ್ದಾರೆ ಶೆಟ್ರು.
ಇದು ದರ್ಶನ ಅನ್ನೋದನ್ನ ಜಸ್ಟ್ ಸಣ್ಣದೊಂದು ಟೀಸರ್ ಝಲಕ್‌ನಲ್ಲಿ ಹೇಳಿರೋ ರಿಷಬ್ ಶೆಟ್ಟಿ, ಈ ಬಾರಿ ತಮ್ಮ ಕೆರಾಡಿ ಊರಿನಲ್ಲಿ ಕೆರಾಡಿ ಫಿಲ್ಮ್ ಸಿಟಿ ಕಟ್ಟಿ, ಅಲ್ಲಿಯೇ ಬಹುತೇಕ ಸಿನಿಮಾನ ಚಿತ್ರಿಸುತ್ತಿದ್ದಾರೆ. ಮಹೇಶ್ವರನ ರೀತಿ ಕಾಣುವ ಅವ್ರ ಒಂದು ಲುಕ್ ಇಡೀ ಸಿನಿದುನಿಯಾಕೆ ಕಿಕ್ ಕೊಟ್ಟಿದೆ. ಅಲ್ಲದೆ, ಮಲಯಾಳಂ ಹಾಗೂ ಬಾಲಿವುಡ್ ಅಂಗಳದಿಂದ ದಿ ಬೆಸ್ಟ್ ಕಲಾವಿದರೆಲ್ಲಾ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ನಮ್ಮ ಕಿಶೋರ್, ರುಕ್ಮಿಣಿ ವಸಂತ್ ಜೊತೆಗೆ ಜಯರಾಂ, ಜಯಸೂರ್ಯ ಹಾಗೂ ಜಿಷು ಸೆಂಗುಪ್ತಾ ಕೂಡ ಕಾಂತಾರ ಚಾಪ್ಟರ್-1 ತಾರಾಗಣದಲ್ಲಿದ್ದಾರೆ.
ಈ ಸಿನಿಮಾ ಇದೇ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಪ್ರಯುಕ್ತ ವಿಶ್ವದಾದ್ಯಂತ ಒಟ್ಟಿಗೆ ತೆರೆಗಪ್ಪಳಿಸಲಿದೆ. ಅಂದಹಾಗೆ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲೂ ಕಾಂತಾರ-1 ತಯಾರಾಗ್ತಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಇನ್ನು ಮೇಕಿಂಗ್ ಹಂತದಲ್ಲೇ ಸಿನಿಮಾ ಸಖತ್ ಟ್ರೆಂಡಿಂಗ್‌ನಲ್ಲಿದೆ. ಎಲ್ಲಿಲ್ಲದ ಕ್ರೇಜ್ ಹುಟ್ಟಿಸಿದೆ. ಪ್ರತಿಷ್ಠಿತ IMDbಯಲ್ಲಿ ಈ ವರ್ಷದ ಬಹು ನಿರೀಕ್ಷಿತ ಇಂಡಿಯನ್ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಸೂರ್ಯ ನಟನೆಯ ರೆಟ್ರೋ, ಅಜಯ್ ದೇವಗನ್‌ರ ರೇಡ್ 2, ರಜನೀಕಾಂತ್‌ರ ಕೂಲಿ, ಹೃತಿಕ್- ಜೂನಿಯರ್ ಎನ್‌ಟಿಆರ್ ಅಭಿನಯದ ವಾರ್-2, ಕಮಲ್ ಹಾಸನ್ ಮುಖ್ಯಭೂಮಿಕೆಯ ಥಗ್ ಲೈಫ್, ಪ್ರಭಾಸ್‌ರ ರಾಜಾ ಸಾಬ್, ಆಮೀರ್ ಖಾನ್‌ರ ಸಿತಾರೆ ಜಮೀನ್ ಪರ್ ಹಾಗೂ ರಶ್ಮಿಕಾ ಮಂದಣ್ಣನ ಥಮ ಸಿನಿಮಾಗಳು ಟಾಪ್ 10 ಲಿಸ್ಟ್‌ನಲ್ಲಿವೆ. ಈ ಎಲ್ಲಾ ಚಿತ್ರಗಳನ್ನ ಹಿಂದಿಕ್ಕಿ, ಕಾಂತಾರ-1 ನಂಬರ್ 1 ಸ್ಥಾನಕ್ಕೇರಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡುವ ಸಂಗತಿಯಾಗಿದೆ.