ಚಿನ್ನದ ಸಾಗಾಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಿದ ನಂತರ, ಅವರ ಪತಿ ಜತಿನ್ ಹುಕ್ಕೇರಿ ಬಂಧನದ ಭೀತಿಯಿಂದ ಹೈಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹೈಕೋರ್ಟ್, “ಕಾನೂನು ಪ್ರಕ್ರಿಯೆ ಪಾಲಿಸದೆ ಜತಿನ್ ಹುಕ್ಕೇರಿ ಅವರನ್ನು ಬಂಧಿಸಬಾರದು” ಎಂದು ತೀರ್ಪು ನೀಡಿದೆ.
ಜತಿನ್ ಹುಕ್ಕೇರಿ ಪರವಾಗಿ ವಕೀಲರು ಪ್ರಭುಲಿಂಗ ನಾವದಗಿ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದು, “ರಮ್ಯಾ ರಾವ್ ಮೇಲಿನ ಆರೋಪಗಳಿಗೆ ಜತಿನ್ಗೆ ಯಾವುದೇ ಸಂಬಂಧವಿಲ್ಲ. ಡಿ.ಆರ್.ಐ. ಅಧಿಕಾರಿಗಳು ಸಮನ್ಸ್ ನೀಡಿದಾಗ ಸಹಕರಿಸಿದ್ದಾರೆ. ಇನ್ನೊಮ್ಮೆ ಕರೆದು ವಿಚಾರಣೆ ನಡೆಸಿದ್ದು ತಪ್ಪು” ಎಂದು ವಾದಿಸಲಾಯಿತು.
ಹೈಕೋರ್ಟ್ ಈ ವಾದವನ್ನು ಆಲಿಸಿ, ಜತಿನ್ ಹುಕ್ಕೇರಿಯನ್ನು ಬಂಧಿಸಿದಂತೆ ಆದೇಶ ಹೊರಡಿಸಿದೆ. ಇದರೊಂದಿಗೆ, ರಮ್ಯಾ ರಾವ್ ಪತಿಗೆ ಹೈಕೋರ್ಟ್ನಿಂದ ತಾತ್ಕಾಲಿಕ ರಿಲೀಫ್ ದೊರೆತಿದೆ.