ಸಿಸಿಎಲ್.. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೀಸನ್ 11 ಭರದಿಂದ ಸಾಗುತ್ತಿದೆ. ಒಟ್ಟು 7 ಟೀಂಗಳು 17 ಮ್ಯಾಚ್ ಗಳ ಸೀರೀಸ್ ಇದಾಗಿದ್ದು, ಉದ್ಘಾಟನಾ ಪಂದ್ಯ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದದ್ದು ಇಂಟರೆಸ್ಟಿಂಗ್. ಡಿಸಿಎಂ ಡಿಕೆ ಶಿವಕುಮಾರ್ ಅವರು ಬಂದು ಉದ್ಘಾಟನೆ ಮಾಡಿದ ಓಪನಿಂಗ್ ಪಂದ್ಯದಲ್ಲಿ ತೆಲುಗು ಟೀಂ ವಿರುದ್ದ ನಮ್ಮ ಕರ್ನಾಟಕ ಬುಲ್ಡೋಜರ್ಸ್ ಟೀಂ ಭರ್ಜರಿ ಗೆಲುವು ಸಾಧಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ನಮ್ಮ ಬಾದ್ ಷಾ ಕಿಚ್ಚ ಸುದೀಪ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದ ಟೀಂ ಸೋತ ನಿದರ್ಶನವೇ ಇಲ್ಲ.
ಬೆಂಗಳೂರಲ್ಲಿ ಮ್ಯಾಚ್ ಮುಗಿಸಿ, ಹೈದರಾಬಾದ್ ಗೆ ಹಾರಿದ ಕರ್ನಾಟಕ ಬುಲ್ಡೋಜರ್ಸ್ ಟೀಂ, ಅಲ್ಲಿ ಚೆನ್ನೈ ಹಾಗೂ ಮುಂಬೈ ತಂಡಗಳ ವಿರುದ್ಧದ ಪಂದ್ಯಗಳಲ್ಲೂ ವಿಜಯ ಸಾಧಿಸಿತು. ಈ ಮೂಲಕ ಡೈರೆಕ್ಟ್ ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ.
ಆದ್ರೀಗ ನಿನ್ನೆಯಷ್ಟೇ ಕರ್ನಾಟಕ ಬುಲ್ಡೋಜರ್ಸ್ ಟೀಂ ಸೂರತ್ ಗೆ ಫ್ಲೈಟ್ ಹತ್ತಿದೆ. ನಾಳೆ ಅಂದ್ರೆ ಫೆಬ್ರವರಿ 22ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಪಂಜಾಬ್ ಟೀಂ ವಿರುದ್ಧ ಅಖಾಡಕ್ಕೆ ಇಳಿಯಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಪಂಜಾಬ್ ಟೀಂ ಮೇಲೆ ಸೋತರೂ ಸಹ ಸೆಮೀಸ್ ಗೆ ಹೋಗೋದು ಪಕ್ಕಾ ಆಗಿದೆ. ಹಾಗಾಗಿ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯ ಅಂದ್ರೂ ತಪ್ಪಾಗಲ್ಲ.
ಇನ್ನು ಸೆಮೀಸ್ ಹಾಗೂ ಫೈನಲ್ಸ್ ಮೈಸೂರಿನಲ್ಲಿ ಇದೇ ಮಾರ್ಚ್ 1 ಹಾಗೂ 2ನೇ ತಾರೀಖು ನಡೆಯಲಿದ್ದು, ಈ ಬಾರಿಯ ಸಿಸಿಎಲ್ ಕಪ್ ನಮ್ದೇ ಅನ್ನೋ ಭರವಸೆ ಮೂಡಿಸಿದ್ದಾರೆ ಕಿಚ್ಚ ಬಾಯ್ಸ್. ಒಂದ್ಕಡೆ ಬ್ಯಾಟಿಂಗ್ ನಲ್ಲಿ ಡಾರ್ಲಿಂಗ್ ಕೃಷ್ಣ ವಿರಾಟ್ ಕೊಹ್ಲಿ ರೇಂಜ್ ಗೆ ಅಬ್ಬರದ ಆಟವಾಡ್ತಿದ್ದಾರೆ. ಮತ್ತೊಂದ್ಕಡೆ ಗೋಲ್ಡನ್ ಸ್ಟಾರ್ ವೇಗದ ಎಸೆತಗಳು ವಿಕೆಟ್ ಗಳನ್ನ ಕಬಳಿಸುವಲ್ಲಿ ಸಫಲವಾಗ್ತಿದೆ. ಕರಣ್, ಜೆಕೆ, ರಾಜೀವ್, ಕಿಚ್ಚ ಸುದೀಪ್, ಸುನಿಲ್ ರಾವ್, ಅನೂಪ್ ಭಂಡಾರಿ, ಚಂದನ್ ಗೌಡ, ಮಂಜುನಾಥ್ ಗೌಡ, ಸಾಗರ್ ಗೌಡ, ಅರ್ಜುನ್ ಯೋಗಿ, ತ್ರಿವಿಕ್ರಮ್, ಪ್ರತಾಪ್ ನಾರಾಯಣ್, ರಾಜು ಗೌಡ ಅವರ ಆಲ್ ರೌಂಡ್ ಆಟ ಕರ್ನಾಟಕ ಬುಲ್ಡೋಜರ್ಸ್ ಸೋಲಿಲ್ಲದ ಸರದಾರರು ಪಟ್ಟ ಪಡೆಯಲು ಸಾಥ್ ನೀಡಿದೆ.
ಅಂದಹಾಗೆ ಫಿನಾಲೆ ಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನು ಕರೆಸಲು ಕಿಚ್ಚ ಸುದೀಪ್ ಯೋಜನೆ ರೂಪಿಸಿದ್ದು, ಸಿಸಿಎಲ್ ಮ್ಯಾನೇಜ್ಮೆಂಟ್ ನ ಮೈಸೂರಿನಲ್ಲೇ ಫಿನಾಲೆ ನಡೆಸಲು ಒಪ್ಪಿಸಿದ್ದಾರೆ. ಇದು ಕನ್ನಡಿಗರ ಮೇಲೆ ಹಾಗೂ ನಮ್ಮ ಕನ್ನಡ ಮಣ್ಣಿನ ಮೇಲೆ ಕಿಚ್ಚನಿಗಿರೋ ಅಭಿಮಾನ, ಗೌರವದ ಪ್ರತೀಕವಾಗಿದೆ. ಏನೇ ಆಗಲಿ ಈ ಸಲ ಕಪ್ ನಮ್ದೇ. ಅಷ್ಟೇ..!