ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಹೊಸ ಧಾರಾವಾಹಿಗಳು ಬ್ಯಾಕ್ ಟು ಬ್ಯಾಕ್ ಲಾಂಚ್ ಆಗ್ತಾ ಇದಾವೆ. ಅದರ ಜೊತೆಗೆ ಇನ್ನು ಒಂದು ಹೊಸ ಧಾರಾವಾಹಿ ಒಂದಷ್ಟು ಕುತೂಹಲವನ್ನ ಹೆಚ್ಚು ಮಾಡಿದೆ. ಅದುವೆ ಮುದ್ದು ಸೊಸೆ. ಪ್ರತಿಮಾ ಹಾಗೂ ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಮ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ತಾ ಇರೋದೇ ಇದಕ್ಕೆ ಕಾರಣ. ಈಗಾಗಲೇ ಒಂದು ಪ್ರೋಮೋ ಮೊದಲೇ ರಿಲೀಸ್ ಮಾಡಿದ್ದ ಕಲರ್ಸ್ ಕನ್ನಡ, ಹೆಣ್ಣು ನೋಡುವ ಶಾಸ್ತ್ರವನ್ನ ಆ ಪ್ರೋಮೋದಲ್ಲಿ ಮುಗಿಸಿದ್ದರು. ಇದೀಗ ಹೊಸದೊಂದು ಪ್ರೋಮೋವನ್ನು ರಿಲೀಸ್ ಮಾಡಿದ್ದಾರೆ.
ರಿಲೀಸ್ ಆಗಿರೋ ಮುದ್ದು ಸೊಸೆ ಸೀರಿಯಲ್ ನ ಹೊಸ ಪ್ರೋಮೋದಲ್ಲಿ ವಿದ್ಯಾ ಹಾಗೂ ತ್ರಿವಿಕ್ರಮ್ ಮದುವೆನಡೀತಾ ಇದೆ. ಶಾಲೆಗೆ ಹೋಗಬೇಕಾದ ವಿದ್ಯಾ ಈಗ ಹಸೆಮಣೆ ಏರುವ ಪರಿಸ್ಥಿತಿಗೆ ಬಂದು ನಿಂತಿದ್ದಾಳೆ. ಮದುವೆ ಇಷ್ಟ ಇಲ್ಲ ಅಂತ ಹೇಳುವಂತೆಯೂ ಇಲ್ಲ. ಅಪ್ಪನೇ ತನ್ನ ಮಾತನ್ನು ಕೇಳುವುದಕ್ಕೆ ರೆಡಿ ಇಲ್ಲ.
ವಿದ್ಯಾಗೆ ತಾನೂ ಹೆಚ್ಚು ಓದ್ಬೇಕು, ದೊಡ್ಡ ಡಾಕ್ಟರ್ ಆಗ್ಬೇಕು ಅನ್ನೋ ಆಸೆ. ಆದ್ರೆ ಆಕೆಯ ತಂದೆ ಒಳ್ಳೆ ಸಂಬಂಧ ಬಂದಿದೆ ಅಂತ ಓದುವುದನ್ನೇ ಬಿಡಿಸಿ ಮದುವೆ ಮಾಡುವುದಕ್ಕೆ ಹೊರಟಿದ್ದಾನೆ. ಇದನ್ನ ಹೇಗಾದರೂ ತಡೆಯಬೇಕು ಎಂದುಕೊಂಡ ವಿದ್ಯಾ, ಮದುವೆ ಮಂಟಪದಲ್ಲಿ ಗಟ್ಟಿ ಧೈರ್ಯ ಮಾಡಿ ಪೊಲೀಸರಿಗೆ ಕರೆ ಮಾಡ್ತಾಳೆ, ಇನ್ನೇನು ತಾಳಿ ಕಟ್ಬೇಕು ಅನ್ನುವಷ್ಟರಲ್ಲಿ ಪೊಲೀಸರು ಬಂದು ಮದುವೆಯನ್ನು ತಡೀತಾರೆ.
ಇನ್ನೂ ಹಸೆಮಣೆ ಮೇಲೆ ಕೂತಿದ್ದ ತ್ರಿವಿಕ್ರಂಗೆ ದೇವರಿಗೆ ನಮಸ್ಕಾರ ಮಾಡಿ ಎಂದಾಗ, ನನಗೆ ಹಾಗೂ ನಮ್ಮ ನೆರೆಯವರಿಗೆ ನಮ್ಮ ಅಪ್ಪಯ್ಯನ ದೇವರು. ಅವರಿಗೆ ಆಲ್ ರೆಡಿ ನಮಸ್ಕಾರ ಮಾಡಿ ಆಗಿದೆ. ನೀವೂ ಮುಂದುವರೆಸಿ ಅಂತಾರೆ ಈ ಮೂಲಕ ಈ ಸೀರಿಯಲ್ ನಲ್ಲಿ ತಮ್ಮ ಕ್ಯಾರೆಕ್ಟರ್ ಹೇಗೆ ಇರಲಿದೆ ಅನ್ನೋದ್ರ ಹಿಂಟ್ ಕೊಟ್ಟಿದ್ದಾರೆ.
ಇದೇ ಟೈಮ್ ಗೆ ತಾಳಿ ಕಟ್ಟುವ ಸಮಯಕ್ಕೆ ಬಂದ ಪೊಲೀಸರು, ಇಷ್ಟು ಚಿಕ್ಕವಯಸ್ಸಿಗೆನೆ ಮದುವೆ ಮಾಡಿಕೊಳ್ಳುತ್ತಿರುವುದು ಅಪರಾಧ ಎಂದು ತ್ರಿವಿಕ್ರಂ ತಂದೆಯನ್ನ ಅರೆಸ್ಟ್ ಮಾಡಿಕೊಂಡು ಕರೆದುಕೊಂಡು ಹೋಗ್ತಾರೆ. ಈ ವೇಳೆ, ಈ ಮದುವೆನಾ ನಿಲ್ಲಿಸೋದಕ್ಕೆ ಪೊಲೀಸರನ್ನ ಕರೆಸಿ, ನಮ್ಮ ಅಪ್ಪಯ್ಯನ ಅರೆಸ್ಟ್ ಆಗುವಂತೆ ಮಾಡಿರೋರು ಇಲ್ಲಿನೇ ಇದ್ದೀರಾ ಅಂತ ಗೊತ್ತು. ಅದು ಯಾವನೇ ಆಗಿದ್ದರು ಸುಮ್ಮನೆ ಬಿಡಕ್ಕಿಲ್ಲ ಅಂತಾರೆ ತ್ರಿವಿಕ್ರಂ.
ತಂದೆಯನ್ನ ಪೊಲೀಸರು ಅರೆಸ್ಟ್ ಮಾಡಿದ ಕೋಪವಿದ್ರು ತಾನು ಮದುವೆಯಾಗಬೇಕಿದ್ದ ಹೈಸ್ಕೂಲ್ ಹುಡುಗಿ ಕಡೆ ತಿರುಗಿ ಏನಮ್ಮಿ ಈ ಜನ್ಮದಲ್ಲಿ ನೀನೆ ನನ್ನ ಹೆಂಡತಿ ಅಂತ ಡೈಲಾಗ್ ಹೊಡೆದಿದ್ದಾರೆ. ಮುದ್ದು ಸೊಸೆಗಾಗಿ ಕಾತರ ತ್ರಿವಿಕ್ರಮ್ ಡೈಲಾಗ್, ಪ್ರತಿಮಾ ಅವರ ಆಕ್ಟಿಂಗ್ಗೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ. ‘ಮುದ್ದು ಸೊಸೆ’ ಕೂಡ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ. ಸದ್ಯ ಪ್ರೋಮೋ ಮೂಲಕವೇ ನಿರೀಕ್ಷೆಯನ್ನ ಹುಟ್ಟು ಹಾಕಿದೆ. ಧಾರಾವಾಹಿ ಶುರುವಾಗುವುದಕ್ಕೆ ವೀಕ್ಷಕರು ಕೂಡ ಕಾಯ್ತಾ ಇದ್ದಾರೆ.
ಕಿರಣ್