ಮದುವೆ ನಂತರ ನಾಗಚೈತನ್ಯ-ಶೋಭಿತಾ ಜಾಲಿ ರೈಡ್‌

Untitled design (36)

ಟಾಲಿವುಡ್‌ ನಟ ನಾಗಚೈತನ್ಯ ಹಾಗೂ ಶೋಭಿತಾ ಅವರು ಮದುವೆಯಾಗಿ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಮದುವೆಯಾದ ನಂತರ ಈ ಜೋಡಿ ವಿದೇಶ ಪ್ರವಾಸಕ್ಕೆ ಹೋಗಿದ್ದು, ತಮ್ಮ ಟ್ರಿಪ್‌ನ ಅದ್ಭುತ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT
ADVERTISEMENT

ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲಾ ಕಾರ್ ರೇಸಿಂಗ್ ಅನ್ನು ಆನಂದಿಸುತ್ತಿರುವ ಫೋಟೋಗಳು ವೈರಲ್ ಆಗಿವೆ. ಶೋಭಿತಾ ಹೆಲ್ಮೆಟ್ ಧರಿಸಿ ಕಾರಿನಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡಿದ್ದು, ಅದು ಅಭಿಮಾನಿಗಳ ಗಮನ ಸೆಳೆದಿದೆ.

ಇನ್ನೊಂದು ಫೋಟೋದಲ್ಲಿ, ನಾಗ ಚೈತನ್ಯ ಕಾರಿನಲ್ಲಿ ಕುಳಿತಿರುವುದು, ಶೋಭಿತಾ ಅವರನ್ನು ದೂರದಿಂದ ನೋಡುತ್ತಿರುವುದು ಕಾಣಿಸಿಕೊಂಡಿದೆ. ಈ ಜೋಡಿ ಹೊಸ ಜೀವನವನ್ನು ಆನಂದಿಸುತ್ತಿದ್ದು, ಫ್ಯಾನ್ಸ್ ಫುಲ್‌ ಫಿದಾ ಆಗಿದ್ದಾರೆ.

ಆಮ್ಸ್ಟರ್‌ಡ್ಯಾಮ್ ಮತ್ತು ಮೆಕ್ಸಿಕೋದಲ್ಲಿ ಮಜಾ

ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲಾ ಅವರು ತಮ್ಮ ಟ್ರಿಪ್ ವೇಳೆ ಆಮ್ಸ್ಟರ್‌ಡ್ಯಾಮ್ ಮತ್ತು ಮೆಕ್ಸಿಕೋಕ್ಕೆ ಭೇಟಿ ನೀಡಿದ್ದಾರೆ. ಬೆಳಗಿನ ಉಪಾಹಾರದಿಂದ ಸಂಜೆಯವರೆಗೂ ತಮ್ಮ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿ ಎಂಜಾಯ್ ಮಾಡುತ್ತಿರುವ ಫೋಟೋಗಳಿಗೆ ಅಭಿಮಾನಿಗಳು ಲೈಕ್‌ಗಳ ಸುರಿಮಳೆಗೈದಿದ್ದಾರೆ.

ಮದುವೆಯಾದ ನಂತರ ನಾಗ ಚೈತನ್ಯ ಅವರ ಸಿನಿಮಾ ತಾಂಡೇಲ್‌ ಸೂಪರ್‌ ಹಿಟ್‌ ಆಗಿದೆ. ಅವರ ‘ತಾಂಡೇಲ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಿಟ್ ಆಗಿದ್ದು, ₹100 ಕೋಟಿ ಕಲೆಕ್ಷನ್ ಆಗಿದೆ. ನಾಗಾರ್ಜುನ ಅವರೇ ಮಗನ ಈ ಯಶಸ್ಸಿಗೆ ಶೋಭಿತಾ ಕಾರಣ ಎಂದು ವೇದಿಕೆಯಲ್ಲಿ ಹೇಳಿದ್ದಾರೆ.

ಈ ನವ ಜೋಡಿಯ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗುತ್ತಿವೆ. ಇವರ ಲೈಫ್‌ಸ್ಟೈಲ್, ಟ್ರಿಪ್, ಹೊಸ ಹಬ್ಬಗಳ ಸಂಭ್ರಮ ಎಲ್ಲವೂ ಅಭಿಮಾನಿಗಳಿಗೆ ಸ್ಪೆಷಲ್ ಆಗಿದೆ.

Exit mobile version