ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕನ್ನಡ ಚಿತ್ರರಂಗದ ಹೊಸ ಕಿರಿಯ ನಟಿ ನಿವೇದಿತಾ ಗೌಡ. ಇತ್ತೀಚೆಗೆ ಅವರು ತಮ್ಮ ಶ್ರೀಲಂಕಾ ಟ್ರಿಪ್ನಲ್ಲಿ ಬಿಕಿನಿ ಧರಿಸಿ ಹಂಚಿಕೊಂಡ ರೀಲ್ಸ್ಗಳು ಮತ್ತು ಸ್ಟೈಲಿಷ್ ಫೋಟೋಗಳು ವೈರಲ್ ಆಗಿ, ಸಾಮಾಜಿಕ ಮಾಧ್ಯಮದಲ್ಲಿ ಅಂಚಿಕೊಂಡಿದರು. ಆ ಫೋಟೋಗಳು ಸಾಕಷ್ಟು ವಿವಾದಗಳನ್ನು ಸೃಷ್ಟಿಸಿವೆ. ಕೆಲವು ಬಳಕೆದಾರರು ಅವರನ್ನು ‘ಸಾಧಾರಣ ಬಾರ್ ಡ್ಯಾನ್ಸರ್’ ಎಂದು ಅವಹೇಳನಕಾರಿ ಕಾಮೆಂಟ್ಗಳನ್ನು ಮಾಡಿದ್ದರೆ, ನಿವೇದಿತಾ ಇದಕ್ಕೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಚಂದನ್ ಶೆಟ್ಟಿ ಜೊತೆ ವಿಚ್ಛೇದನದ ನಂತರ, ನಿವೇದಿತಾ ತಮ್ಮ ವೃತ್ತಿಜೀವನ ಮತ್ತು ಸಾಮಾಜಿಕ ಮಾಧ್ಯಮದತ್ತ ಹೆಚ್ಚು ಗಮನ ಹರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಅವರ ರೀಲ್ಸ್‌ಗಳು, ಫ್ಯಾಷನ್ ಪೋಸ್ಟ್‌ಗಳು ಮತ್ತು ವೈಯಕ್ತಿಕ ಜೀವನದ ಸ್ನ್ಯಾಪ್‌ಗಳು ಅನೇಕ ಬಾರಿ ಟ್ರೆಂಡಿಂಗ್ ಆಗಿವೆ. ಆದರೆ, ಪ್ರತಿ ಪೋಸ್ಟ್‌ನಂತರ ಅವರನ್ನು ಗುರಿಯಾಗಿಸಿ ನೆಗೆಟಿವ್ ಕಾಮೆಂಟ್‌ಗಳು ಬರುವುದು ಸಾಮಾನ್ಯವಾಗಿದೆ. ಇದನ್ನು ನಿವೇದಿತಾ ಹಾಸ್ಯದಿಂದಲೂ, ಗಂಭೀರವಾಗಿಯೂ ಎದುರಿಸುತ್ತಿದ್ದಾರೆ.
ಶ್ರೀಲಂಕಾ ಟ್ರಿಪ್‌ನ ಸಮಯದಲ್ಲಿ ನಿವೇದಿತಾ ಹಂಚಿಕೊಂಡ ರೀಲ್ಸ್‌ಗಳಲ್ಲಿ ಅವರು ಬೀಚ್‌ನಲ್ಲಿ ನೃತ್ಯ ಮಾಡುವ ದೃಶ್ಯಗಳು ಸೇರಿದ್ದವು. ಇದನ್ನು ನೋಡಿದ ಕೆಲವು ಬಳಕೆದಾರರು “ಸಾಧಾರಣ ಬಾರ್ ಡ್ಯಾನ್ಸರ್” ಎಂದು ಅವಮಾನಿಸಿದರು. ಆದರೆ, ನಿವೇದಿತಾ ಇದನ್ನು ಸರಳವಾಗಿ ನಿರ್ಲಕ್ಷಿಸದೆ, ತಮ್ಮ ಸ್ಟೈಲ್‌ನಲ್ಲೇ ಜವಾಬ್ ನೀಡಿದರು. “ನಾವು ಸಾಧಾರಣ ಬಾರ್ ಡ್ಯಾನ್ಸರ್ ಅಲ್ಲ, ಗುಡ್ ಬಾರ್ ಡ್ಯಾನ್ಸರ್!” ಎಂದು ಹೇಳಿ, ಟ್ರೋಲ್‌ಗಳಿಗೆ ಉತ್ತರಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆ ಮತ್ತು ಚರ್ಚೆಗೆ ಕಾರಣವಾಯಿತು.
ನಿವೇದಿತಾ ಅವರ ಈ ಹಾಸ್ಯಮಯ ಪ್ರತಿಕ್ರಿಯೆಯನ್ನು ಅನೇಕ ಪ್ರಶಂಸಕರು ಮತ್ತು ಸಹ ಕಲಾವಿದರು ಬೆಂಬಲಿಸಿದ್ದಾರೆ. “ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಇದ್ದರೂ, ಅದನ್ನು ಪಾಸಿಟಿವ್ ಆಗಿ ತಿರುಗಿಸುವುದು ನಿಮ್ಮ ಗುಣ” ಎಂದು ಅಭಿಮಾನಿಗಳು ಪ್ರಶಂಸೆ ಸೂಚಿಸಿದ್ದಾರೆ. ನಿವೇದಿತಾ ತಮ್ಮ ಪೋಸ್ಟ್‌ಗಳ ಮೂಲಕ ಮಹಿಳೆಯರು ತಮ್ಮ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸವನ್ನು ಹಂಚಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತಿದ್ದಾರೆ.