ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ನಾಲ್ಕು ವರ್ಷಗಳ ದಾಂಪತ್ಯದ ನಂತರ ವಿವಾಹ ವಿಚ್ಛೇದನ ಪಡೆದಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಮುಂದೆ ಮಾತನಾಡಿದ ಈ ಜೋಡಿ, ತಮ್ಮ ಸಂಬಂಧ ಮತ್ತು ಹೊಸ ಸಿನಿಮಾ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಎಮೋಶನಲ್ ಸನ್ನಿವೇಶಗಳನ್ನು ಹಂಚಿಕೊಂಡಿದ್ದಾರೆ.
ಚಂದನ್ ಶೆಟ್ಟಿ ಹೇಳಿದ್ದೇನು?
“ಮನುಷ್ಯನಿಗೆ ಎಮೋಷನ್ಸ್ ಅನಿವಾರ್ಯ. ನಾವು ನಾಲ್ಕು ವರ್ಷ ಒಂದಾಗಿ ಜೀವನ ನಡೆಸಿದ್ದೇವೆ. ಇದೀಗ ದೂರವಾಗಿದ್ದೇವೆ. ನಮ್ಮಿಬ್ಬರಿಗೂ ಇದು ಎಮೋಶನಲ್ ಅನುಭವ. ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಬೆರೆಸಬಾರದು. ಆದರೂ ನಮ್ಮಿಬ್ಬರಿಗೂ ನಮ್ಮ ಕರಿಯರ್ ಮುಂದುವರಿಯಬೇಕು ಹೀಗಾಗಿ ದೂರವಾಗಿದ್ದೇವೆ. ಈ ಸಿನಿಮಾದಲ್ಲಿ ನಾನು ಸಂಗೀತ ಸಂಯೋಜನೆ ಮಾಡಿಲ್ಲ. ನಾನು ಅವರ ಬಾಯ್‌ಫ್ರೆಂಡ್ ಪಾತ್ರದಲ್ಲಿ ನಟಿಸಿದ್ದೇನೆ,” ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.
ಕಣ್ಣೀರಿಟ್ಟ ನಿವೇದಿತಾ ಗೌಡ
ಸುದ್ದಿಗೋಷ್ಠಿಯಲ್ಲಿ ಚಂದನ್ ಶೆಟ್ಟಿ ಅವರ ಪಕ್ಕದಲ್ಲಿ ಕುಳಿತಿರುವಾಗ ನಿವೇದಿತಾ ಗೌಡ ಕಣ್ಣೀರಿಟ್ಟ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಇವರು ಮತ್ತೆ ಒಂದಾಗಲಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಇದಕ್ಕೆ ನಿವೇದಿತಾ ಗೌಡ ಸ್ಪಷ್ಟನೆ ನೀಡಿದ್ದು, “ನಾವು ನಾಲ್ಕು ವರ್ಷ ಒಟ್ಟಿಗೆ ಜೀವನ ಹಂಚಿಕೊಂಡಿದ್ದೇವೆ. ಇದು ಎಮೋಶನಲ್ ಕ್ಷಣ. ಯಾವುದೇ ಪ್ರಾಜೆಕ್ಟ್ ಮುಗಿದಾಗ ಬೇಸರವಾಗುತ್ತದೆ. ಈ ಸಿನಿಮಾ ಶೂಟಿಂಗ್ ಮುಗಿಯುತ್ತಿರುವ ಕಾರಣ ನಾನು ಭಾವುಕಳಾದೆ ಎಂದು ತಿಳಿಸಿದ್ದಾರೆ.
ನಿರ್ದೇಶಕರು ಏನಂದ್ರು?
ಚಿತ್ರದ ನಿರ್ದೇಶಕರ ಮಾತುಗಳ ಪ್ರಕಾರ, “ಸಿನಿಮಾದಲ್ಲಿ ಇರುವ ಕೆಲವು ದೃಶ್ಯಗಳು ಚಂದನ್-ನಿವೇದಿತಾ ಅವರ ನಿಜ ಜೀವನದ ಅನುಭವಗಳಿಗೆ ಹೋಲುತ್ತವೆ. ಒಂದು ದೃಶ್ಯದಲ್ಲಿ ಹಗ್ ಮಾಡುವ ವೇಳೆ ನಿವೇದಿತಾ 20 ನಿಮಿಷ ಅತ್ತಿದ್ದರು, ಆಮೇಲೆ ಸಮಾಧಾನಪಡಿಸಿದ್ದೇವೆ ಎಂದಿದ್ದಾರೆ.