ಒಡಿಶಾದಲ್ಲಿ ಬೀಡುಬಿಟ್ಟ ರಾಜಮೌಳಿ ಗ್ಯಾಂಗ್..!

ಮೌಳಿ ಹೊಸ ಪ್ರಪಂಚದಲ್ಲಿ ಪ್ರಿನ್ಸ್, ಪೃಥ್ವಿ, ಪ್ರಿಯಾಂಕಾ ಚೋಪ್ರಾ..!

Befunky collage 2025 03 15t144257.345

SSMB 29.. ಇಂಡಿಯನ್ ಸ್ಪೀಲ್ ಬರ್ಗ್ ಅಂತಲೇ ಖ್ಯಾತಿ ಪಡೆದಿರೋ ಎಸ್ ಎಸ್ ರಾಜಮೌಳಿ ಸಿನಿ ಕರಿಯರ್‌‌‌ನ ಬಿಗ್ಗೆಸ್ಟ್ ಆ್ಯಂಡ್ ಪ್ರೆಸ್ಟೀಜಿಯಸ್ ಪ್ರಾಜೆಕ್ಟ್. ಹೌದು.. RRR ಚಿತ್ರದ ಬಳಿಕ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ, ಪ್ರಿನ್ಸ್ ಮಹೇಶ್ ಬಾಬು ನಟನೆಯ 29ನೇ ಸಿನಿಮಾ SSMB29ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದರ ಶೂಟಿಂಗ್ ಸದ್ಯ ಒಡಿಶಾದಲ್ಲಿ ಭರದಿಂದ ಸಾಗ್ತಿದೆ.

ಇತ್ತೀಚೆಗಷ್ಟೇ ಏರ್ ಪೋರ್ಟ್ ನಲ್ಲಿ ನಟ ಮಹೇಶ್ ಬಾಬು ಹಾಗೂ ಪೃಥ್ವಿರಾಜ್ ಸುಕುಮಾರನ್ ರನ್ನ ಪೊಲೀಸ್ ಆಫೀಸರ್ಸ್ ರಿಸೀವ್ ಮಾಡ್ಕೊಳ್ತಿದ್ದ ಸ್ಟಿಲ್ ಫೋಟೋಸ್ ಸಖತ್ ವೈರಲ್ ಆಗಿತ್ತು. ಒಡಿಶಾಗೆ ಹೋದ ಈ ಇಬ್ಬರೂ ಸೂಪರ್ ಸ್ಟಾರ್ ಗಳಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಒಡಿಶಾದಲ್ಲೇ ಬೃಹತ್ ಸೆಟ್ ಗಳನ್ನ ಹಾಕಿ, ಚಿತ್ರದ ಪ್ರಮುಖ ಸೀಕ್ವೆನ್ಸ್ ಗಳನ್ನ ಮೌಳಿ ಚಿತ್ರಿಸುತ್ತಿದ್ದಾರೆ ಎನ್ನಲಾಗಿತ್ತು. ಆದ್ರೀಗ ಆ ಚಿತ್ರದ ಚಿತ್ರೀಕರಣ ಅಲ್ಲೇ ಭರದಿಂದ ಸಾಗುತ್ತಿದೆ ಅನ್ನೋದಕ್ಕೆ ಮತ್ತೊಂದು ಪುರಾವೆ ದೊರಕಿದೆ. ಅದೇ ಪ್ರಿಯಾಂಕಾ ಚೋಪ್ರಾ ರಿವೀಲ್ ಮಾಡಿರೋ ಫೋಟೋಸ್.

ADVERTISEMENT
ADVERTISEMENT

ಯೆಸ್.. ಹಾಲಿವುಡ್ ವರೆಗೂ ಬೆಳೆದಂತಹ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಅಂಗಳದಲ್ಲೇ ಮದ್ವೆ ಆಗಿ, ಅಲ್ಲೇ ಸೆಟಲ್ ಕೂಡ ಆಗಿದ್ದಾರೆ. ಆದ್ರೆ ಭಾರತೀಯ ಚಿತ್ರರಂಗದಿಂದ ಈಕೆ ದೂರವಾಗಿಲ್ಲ. ಇದೀಗ ಪ್ರಿನ್ಸ್ ಮಹೇಶ್ ಬಾಬು ನಟನೆಯ 29ನೇ ಚಿತ್ರದ ಚಿತ್ರೀಕರಣಕ್ಕಾಗಿ ಇಂಡಿಯಾಗೆ ವಾಪಸ್ ಆಗಿದ್ದಾರೆ. ಅವರೂ ಸಹ ಒಡಿಶಾದ SSMB29 ಸೆಟ್ಸ್ ಗೆ ಎಂಟ್ರಿ ಕೊಟ್ಟಿದ್ದು, ಇತ್ತೀಚೆಗೆ ಹೋಳಿ ಹಬ್ಬದ ವಿಶೇಷ ಹಂಚಿಕೊಂಡಿರೋ ಫೋಟೋಸ್ ಮೂಲಕ ತಾನು ಒಡಿಶಾದಲ್ಲಿರೋದನ್ನ ಖಚಿತಪಡಿಸಿದ್ದಾರೆ.

ಅಲ್ಲಿಗೆ SSMB29 ಸಿನಿಮಾ ಹಾಲಿವುಡ್ ಸ್ಟಾಂಡರ್ಡ್ಸ್ ಇರೋ ಭಾರೀ ಬಜೆಟ್ ಸಿನಿಮಾ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಇಂಡಿಯಾನಾ ಜೋನ್ಸ್ ಸಿನಿಮಾ ಶೈಲಿಯ ಸಿನಿಮಾ ಇದಾಗಲಿದ್ದು, ಪ್ರಿನ್ಸ್ ಮಹೇಶ್, ಸರ್ವಾಂತರ್ಯಾಮಿ ಆಗಿ ಕಾಣಸಿಗಲಿದ್ದಾರಂತೆ. ಲಾರ್ಡ್ ಹನುಮನಿಂದ ಸ್ಫೂರ್ತಿಗೊಂಡು ಹೀರೋ ಪಾತ್ರವನ್ನು ಡಿಸೈನ್ ಮಾಡಿರೋ ರಾಜಮೌಳಿ, ನೋಡುಗರಿಗೆ ಈ ಬಾರಿಯೂ ಸಹ ಒಂದು ಹೊಚ್ಚ ಹೊಸ ಪ್ರಪಂಚವನ್ನೇ ಕಟ್ಟಿಕೊಡೋ ಮುನ್ಸೂಚನೆ ನೀಡಿದ್ದಾರೆ.

ವ್ಹಾವ್ ಫೀಲ್ ಕೊಡೋ ಅಂತಹ ಮಸ್ತ್ ಮನರಂಜನೆ ಕೊಡೋದ್ರಲ್ಲಿ ಮೌಳಿ ಮಾಸ್ಟರ್. ಹಾಗಾಗಿಯೇ SSMB29 ಕಥೆ, ಚಿತ್ರಕಥೆ, ಡೈಲಾಗ್ಸ್ ಹಾಗೂ ಪಾತ್ರಗಳ ಪ್ರಿಪರೇಷನ್ಸ್ ಗಾಗಿ ದೊಡ್ಡ ಮಟ್ಟದ ಸಮಯ ತೆಗೆದುಕೊಂಡು ಎಲ್ಲವನ್ನೂ ಈಗ ತೆರೆಗೆ ತರೋಕೆ ಹೊರಟಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಆಯಾಮ ಕೊಡ್ತಿರೋ ರಾಜಮೌಳಿ, ಈ ಬಾರಿ ಕೂಡ ವಿಶ್ವ ಸಿನಿದುನಿಯಾದ ಇತಿಹಾಸದಲ್ಲಿ ಹೊಸತೊಂದು ಅಧ್ಯಾಯ ಬರೆಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Exit mobile version