ಇಂಡಿಯನ್ ಸ್ಪೀಲ್‌ಬರ್ಗ್ ಅಂತಲೇ ಫೇಮಸ್ ಆಗಿರೋ ನಮ್ಮ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ, ಇತ್ತೀಚೆಗೆ ಮೌನಕ್ಕೆ ಜಾರಿದ್ದಾರೆ. ತ್ರಿಬಲ್ ಆರ್ ಬಳಿಕ ಮಹೇಶ್ ಬಾಬು ಜೊತೆಗಿನ ಪ್ರಾಜೆಕ್ಟ್ ಬಗ್ಗೆ ಸಿಂಗಲ್ ಅಪ್ಡೇಟ್ ಕೊಟ್ಟಿಲ್ಲ, ಕೊಡ್ತಿಲ್ಲ. ಇದಕ್ಕೆ ಚಿತ್ರಪ್ರೇಮಿಗಳು ಬೇಸರ ವ್ಯಕ್ತಪಡಿಸ್ತಿದ್ದು, ವಿ ವಾಂಟ್ ಅಪ್ಡೇಟ್ ಅಂತ ಪಟ್ಟು ಹಿಡಿದಿದ್ದಾರೆ. ಈ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ.
ಒಮ್ಮೆ ಬಂದರು.. ಹೋದರು.. ಆದ್ರೆ ಏನೂ ಹೇಳಲಿಲ್ಲ. ಮತ್ತೊಮ್ಮೆ ಬಂದ್ರು.. ಹೋದ್ರು.. ಈ ಬಾರಿ ಕೂಡ ಏನೂ ಹೇಳಿಲ್ಲ. ರಾಜಮೌಳಿ ಮತ್ತದೇ ಮೌನ. ಆ್ಯಕ್ಚುಲಿ ಯಾಕಿಷ್ಟು ಸೀಕ್ರೆಟ್ ಮೆಂಟೇನ್ ಮಾಡ್ತಿದ್ದಾರೆ..? ಇದು ಬಾಹುಬಲಿ ಕಟ್ಟಪ್ಪನನ್ನು ಕೊಂದಿದ್ಯಾಕೆ ಅನ್ನೋ ಪ್ರಶ್ನೆಯಂತೆ ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.
ಹೌದು.. ಸದ್ಯ ಪ್ರಿನ್ಸ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡ್ತಿರೋ ರಾಜಮೌಳಿ, ಆ ಬಗ್ಗೆ ಕಿಂಚಿತ್ತೂ ಮಾಹಿತಿ ನೀಡಿಲ್ಲ, ನೀಡ್ತಿಲ್ಲ. ತಮ್ಮ ಬಾಯಿಂದ ಆ ಪದ ಕೂಡ ಹೊರ ಬರ್ತಿಲ್ಲ. ಯಾಕಿಷ್ಟು ಸೀಕ್ರಸಿ..? ಅಟ್ ಲೀಸ್ಟ್ ಶೂಟಿಂಗ್ ನಡೀತಿದೆ. ಚೆನ್ನಾಗಿ ಮೂಡಿಬರ್ತಿದೆ ಅಂತ ಒಂದು ಮಾತು ಹೇಳಿದ್ರೆ ಎಲ್ಲರೂ ಸೈಲೆಂಟ್ ಆಗ್ತಿದ್ರಲ್ವಾ..?
ಮಹೇಶ್ ಬಾಬು ಜೊತೆ SSMB29 ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿರೋ ರಾಜಮೌಳಿ, ಮೊನ್ನೆ ರಾತ್ರಿ ಕೂಡ ಶೂಟಿಂಗ್ ಮುಗಿಸಿಕೊಂಡು ಬಂದಿದ್ದರಂತೆ. ನಿನ್ನೆ ಹೈದ್ರಾಬಾದ್‌ನಲ್ಲಿ ನಡೆದ ನಾನಿಯ ಹಿಟ್-3 ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜಮೌಳಿ, SSMB-29 ಬಗ್ಗೆ ಪ್ರಶ್ನೆ ಮಾಡಿದ ನಿರೂಪಕಿಯ ಬಾಯಿ ಮುಚ್ಚಿಸಿದರು.
ವಿಶೇಷ ಅಂದ್ರೆ ಹಿಟ್-3 ಸಿನಿಮಾ ಹಾಗೂ ಹಿಟ್ ಮ್ಯಾನ್ ಆಗಿ ಸಕ್ಸಸ್‌ಫುಲ್ ಸಿನಿಮಾಗಳಿಂದ ಮುನ್ನುಗ್ಗುತ್ತಿರೋ ನ್ಯಾಚುರಲ್ ಸ್ಟಾರ್ ನಾನಿ ಬಗ್ಗೆ ರಾಜಮೌಳಿ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಅಷ್ಟೇ ಅಲ್ಲ, ರಾಜಮೌಳಿ ನಿರ್ದೇಶಿಸಲಿರೋ ರಾಮಾಯಣ ಸಿನಿಮಾದಲ್ಲಿ ನಾನಿ ಇರೋದು ಫಿಕ್ಸ್ ಅಂತ ಗುಡ್ ನ್ಯೂಸ್ ನೀಡಿದ್ದಾರೆ. ಈ ಮೂಲಕ ರಾಜಮೌಳಿ ಸಾರಥ್ಯದಲ್ಲಿ ರಾಮಾಯಣ ತಯಾರಾಗೋದು ಗ್ಯಾರಂಟಿ ಅನ್ನೋ ಮಾಹಿತಿ ಸ್ಪಷ್ಟವಾಗಿದೆ.
ಅಂದಹಾಗೆ ಪುಷ್ಪ-2, ಗೇಮ್ ಚೇಂಜರ್ ಹಾಗೂ ಹಿಟ್-3 ಹೀಗೆ ಬ್ಯಾಕ್ ಟು ಬ್ಯಾಕ್ ಮೂರು ಇವೆಂಟ್‌ಗಳಿಗೆ ಆಗಮಿಸಿದ್ದ ರಾಜಮೌಳಿ, ಎಲ್ಲಿಯೂ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಮಾತನಾಡಿಲ್ಲ. ಸದ್ಯದಲ್ಲೇ ಮಹೇಶ್ ಬಾಬು ಹಾಗೂ ತನ್ನ ಪ್ರೊಡಕ್ಷನ್ ಟೀಂ ಜೊತೆ ಆಫ್ರಿಕಾ ಶೆಡ್ಯೂಲ್‌ಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದಿನ ತ್ರಿಬಲ್ ಆರ್ ಸಿನಿಮಾ ಬಗ್ಗೆ ಆಗಾಗ್ಗೆ ಅಪ್ಡೇಟ್ಸ್ ನೀಡ್ತಿದ್ದ ಮೌಳಿ, ಈ ಬಾರಿ ಯಾಕೆ ಇಷ್ಟು ರಹಸ್ಯ ಪಾಲಿಸ್ತಿದ್ದಾರೆ ಅನ್ನೋದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಆದಷ್ಟು ಬೇಗ SSMB ಅಪ್ಡೇಟ್ಸ್ ಹೊರಬರಲಿ ಅನ್ನೋದು ಚಿತ್ರರಸಿಕರ ಆಶಯವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್