ರಕ್ಷಿತ್ ಒಂದೂವರೆ ವರ್ಷ ನಾಪತ್ತೆ.. 4 ದೇಶ ಸುತ್ತಾಟ

ಸಪ್ತಸಾಗರ ಬಳಿಕ ರಕ್ಷಿತ್ ಎಲ್ಲಿ ಹೋದ್ರು ? ಏನ್ ಮಾಡ್ತಿದ್ದಾರೆ ?

Untitled design 2025 04 12t175031.091

ರಕ್ಷಿತ್ ಶೆಟ್ಟಿ.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಭಾರತೀಯ ಚಿತ್ರರಂಗಕ್ಕೆ ರಶ್ಮಿಕಾ ಮಂದಣ್ಣ ಅನ್ನೋ ಅತ್ಯದ್ಭುತ ಪ್ರತಿಭೆಯನ್ನ ನೀಡಿದ ಫಿಲ್ಮ್ ಮೇಕರ್. ಭಟ್ರಿಗಷ್ಟೇ ಸೀಮಿತವಾಗಿದ್ದ ಚಂದನವನದಲ್ಲಿ ಶೆಟ್ರ ಪರಂಪರೆಯನ್ನ ತಂದ ಮೊದಲಿಗ. ಈತ ಅದ್ಯಾಕೋ ಒಂದೂವರೆ ವರ್ಷದಿಂದ ನಾಪತ್ತೆ ಆಗಿದ್ದಾರೆ. ಅಷ್ಟೇ ಅಲ್ಲ, ಗ್ಯಾರಂಟಿ ಮೂಲಗಳ ಪ್ರಕಾರ 4 ದೇಶ ಕೂಡ ಸುತ್ತಿದ್ದಾರೆ.

ADVERTISEMENT
ADVERTISEMENT

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.. ನಟನೆ, ನಿರ್ದೇಶನ, ನಿರ್ಮಾಣದ ಜೊತೆಗೆ ಬರವಣಿಗೆಯಿಂದಲೂ ಗುರ್ತಿಸಿಕೊಂಡಂತಹ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಕರಾವಳಿಯಿಂದ ಬಂದು ಸ್ಯಾಂಡಲ್ ವುಡ್ ಅಂಗಳದಲ್ಲಿ ಭಿನ್ನ ಅಲೆಯ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಆಗಿ ಹೊಸ ಇತಿಹಾಸ ಬರೆದ ಸಿನಿಮೋತ್ಸಾಹಿ. ಅಂದಹಾಗೆ ಇವರ ಸಿನಿಯಾನಕ್ಕೆ 15 ವರ್ಷಗಳು. 2010ರಲ್ಲಿ ಆರಂಭಿಸಿದ ರಕ್ಷಿತ್ ಶೆಟ್ಟಿ ಜರ್ನಿಗೆ ಒಂದೂವರೆ ದಶಕವಾಗಿದೆ.

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ.. ಹೀಗೆ ಮಾಡಿದ ಬಹುತೇಕ ಸಿನಿಮಾಗಳು ತನ್ನದೇ ಆದ ಛಾಪು ಮೂಡಿಸಿವೆ. ಒಂದಕ್ಕಿಂತ ಒಂದು ಡಿಫರೆಂಟ್. ಆದ್ರೀಗ ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ತೆರೆಕಂಡು ಒಂದೂವರೆ ವರ್ಷ ಆಗ್ತಾ ಬಂತು. ಆ ಕಡೆ ರಕ್ಷಿತ್ ಜೊತೆ ಮಿಂಚಿದ್ದ ಚೈತ್ರಾ ಆಚಾರ್ ಪರಭಾಷೆಗಳಲ್ಲಿ ಮಿಂಚು ಹರಿಸಿದ್ದಾರೆ. ಈ ಕಡೆ ಪುಟ್ಟಿಯಾಗಿ ನೋಡುಗರ ಎದೆಗಿಳಿದ ರುಕ್ಮಿಣಿ ವಸಂತ್ ಕೂಡ ತೆಲುಗು, ತಮಿಳು ಚಿತ್ರರಂಗಗಳಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ. ಆದ್ರೆ ರಕ್ಷಿತ್ ಶೆಟ್ಟಿ ಮಾತ್ರ ಒಂದೂವರೆ ವರ್ಷದಿಂದ ಮೌನಕ್ಕೆ ಜಾರಿದ್ದಾರೆ.

ಯೆಸ್.. ಸಾಮಾನ್ಯವಾಗಿ ಇಂಥದ್ದೊಂದು ಪ್ರಶ್ನೆ ಮೂಡುವುದು ಸಹಜ. ಆದ್ರೆ ರಿಚರ್ಡ್‌ ಆಂಟನಿ ಸಿನಿಮಾ ರಕ್ಷಿತ್ ಶೆಟ್ಟಿ ಅವರ ಕನಸಿನ ಸಿನಿಮಾ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. 777 ಚಾರ್ಲಿ, ಕಿರಿಕ್ ಪಾರ್ಟಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳು ಪರಭಾಷೆಗಳಲ್ಲಿ ಕೂಡ ಕಮಾಲ್ ಮಾಡಿದ್ವು. ಪರಭಾಷೆಗಳಲ್ಲಷ್ಟೇ ಅಲ್ಲ, ಥಾಯ್ ಅಂತಹ ವಿದೇಶಿ ಭಾಷೆಯಲ್ಲೂ ತೆರೆ ಕಂಡಿತ್ತು. ಹಾಗಾಗಿ ನೆಕ್ಸ್ಟ್ ವೆಂಚರ್‌‌ನ ತುಂಬಾ ಜಾಗರೂಕತೆಯಿಂದ ಮಾಡೋದು ಅವರ ಆಶಯವಾಗಿದೆ. ಅದಕ್ಕಾಗಿ ಕಥೆ ಸಿದ್ಧಗೊಳಿಸಿ, ಫೈನ್ ಟ್ಯೂನ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರಂತೆ.

ಗ್ಯಾರಂಟಿ ಪಿಚ್ಚರ್ ಟೀಂಗೆ ಸಿಕ್ಕ ಅಧಿಕೃತ ಮಾಹಿತಿ ಪ್ರಕಾರ ರಕ್ಷಿತ್ ಶೆಟ್ಟಿ, ರಿಚರ್ಡ್‌ ಆಂಟನಿ ಸಿನಿಮಾ ಸಲುವಾಗಿ ಸುತ್ತ ದೇಶಗಳ ಸಂಖ್ಯೆ ಬರೋಬ್ಬರಿ ನಾಲ್ಕು. ಹೌದು.. ಭಾರತದಿಂದ ಕೆನಡಾಗೆ ತೆರಳಿ, ಅಲ್ಲೊಂದು ಕನ್ನಡ ಹಬ್ಬದಲ್ಲಿ ಭಾಗಿಯಾಗಿ, ಕೆನಡಾದಿಂದ ನೇರವಾಗಿ ಅಮೆರಿಕಾಗೆ ಫ್ಲೈಟ್ ಹತ್ತಿದಾರೆ. ಯುಎಸ್ ನಲ್ಲಿರೋ ಅಕ್ಕನ ಮನೆಯಲ್ಲಿ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ತಂಗಿದ್ದರಂತೆ ರಕ್ಷಿತ್. ಅಲ್ಲಿ ಕೂಡ ರಿಚರ್ಡ್‌ ಆಂಟನಿ ಚಿತ್ರದ ಬರವಣಿಗೆಯಲ್ಲಿದ್ರು ಅನ್ನೋ ಮಾಹಿತಿಯಿದೆ. ಅಲ್ಲಿಂದ ಇಂಡಿಯಾಗೆ ಬಂದು, ಅಗೈನ್ ದುಬೈಗೂ ಹೋಗಿ ಬಂದಿದ್ದಾರೆ. ಅಲ್ಲಿಗೆ ಈ ಸಿನಿಮಾಗಾಗಿ ರಕ್ಷಿತ್ ಒಂದೂವರೆ ವರ್ಷದಲ್ಲಿ ನಾಲ್ಕು ದೇಶ ಸುತ್ತಿರೋದು ಪಕ್ಕಾ.

ಇನ್ನು ರಿಚರ್ಡ್‌ ಆಂಟನಿ ಯಾವಾಗ ಸೆಟ್ಟೇರುತ್ತೆ ಅನ್ನೋದ್ರ ಬಗ್ಗೆ ಕ್ಲ್ಯಾರಿಟಿ ಇಲ್ಲ. ಹಾಗಂತ ಅವರು ಸುಮ್ಮನಿದ್ದಾರೆ ಅಂದ್ರೆ ಬೇರೆ ಏನೂ ಮಾಡ್ತಿಲ್ಲ ಅಂತಲ್ಲ. ತಮ್ಮದೇ ಪರಂವಃ ಸ್ಟುಡಿಯೋಸ್ ಅನ್ನೋ ಹೋಮ್ ಬ್ಯಾನರ್ ನಡಿ ಸಿನಿಮಾಗಳನ್ನ ಮಾಡೋದು ಮಾತ್ರ ನಿಲ್ಲಿಸಿಲ್ಲ. ಸದಾ ನ್ಯೂ ಟ್ಯಾಲೆಂಟ್ಸ್ ನ ಪೋಷಿಸೋ ರಕ್ಷಿತ್ ಶೆಟ್ಟಿ, ಅಬ್ರಕ ದಬ್ರ ಅನ್ನೋ ಶೂಟಿಂಗ್ ಮಾಡಿ ಮುಗಿಸಿದ್ದಾರೆ, ಅದೂ ನಿರ್ಮಾಪಕರಾಗಿ. ಮಿಥ್ಯ ಅನ್ನೋ ಮತ್ತೊಂದು ಚಿತ್ರ ರೀಸೆಂಟ್ ಆಗಿ ರಿಲೀಸ್ ಮಾಡಿದ್ರು. ಈ ಸಿನಿಮಾನ ಬರೋಬ್ಬರಿ 10 ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟ್ ಗಳಲ್ಲಿ ಸ್ಕ್ರೀನಿಂಗ್ ಮಾಡಿಸಿ, ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡರು.

ಇಷ್ಟೆಲ್ಲಾ ಮಾಡ್ತಿರೋ ರಕ್ಷಿತ್ ಶೆಟ್ಟಿ ಅನ್ನೋ ಮಾಸ್ಟರ್ ಮೈಂಡ್, ಹೀಗೆ ಒಂದೂವರೆ ಎರಡು ವರ್ಷಗಳ ಕಾಲ ಹೊಸ ಪ್ರಾಜೆಕ್ಟ್ ಗೆ ಕಾಲಾವಕಾಶ ತೆಗೆದುಕೊಳ್ಳುವುದು ಚಿತ್ರರಂಗಕ್ಕೆ ಒಳಿತಲ್ಲ. ಅವರು ಬೇಗ ಬೇಗ ಸಿನಿಮಾಗಳನ್ನ ಮಾಡ್ಬೇಕು. ನಟನೆ, ನಿರ್ದೇಶನ ಎರಡರಲ್ಲೂ ಬ್ಯುಸಿ ಆಗ್ಬೇಕು ಅನ್ನೋದು ಕನ್ನಡಿಗರ ಆಶಯ. ಬೇಗ ಸಿನಿಮಾ ಶುರು ಮಾಡಿ ರಕ್ಷಿತ್ ಸರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version