ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ಈಗ ಪೆದ್ದಿ ಆಗಿದ್ದಾರೆ. ಅದಕ್ಕೆ ಕಾರಣ ಬುಚ್ಚಿಬಾಬು. ಶ್ರೀರಾಮನವಮಿ ವಿಶೇಷ ಚಿತ್ರದ ಗ್ಲಿಂಪ್ಸ್ ರಿವೀಲ್ ಮಾಡಲಾಗಿದ್ದು, ಕಾಪಿ ಕ್ಯಾಟ್ ಆದ್ರಾ ಚರಣ್ ಅನ್ನೋ ಅಲೆ ಎದ್ದಿದೆ. ಇಷ್ಟಕ್ಕೂ ಅವ್ರು ಕಾಪಿ ಮಾಡಿದ್ದಾದ್ರು ಯಾರನ್ನ ಅಂತೀರಾ..?
ಆರ್‌ಸಿ-16..ಪುಷ್ಪ ಡೈರೆಕ್ಟರ್ ಸುಕುಮಾರ್ ಶಿಷ್ಯ ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್ ಚರಣ್ ತೇಜಾ ನಟಿಸ್ತಿರೋ ಸಿನಿಮಾ. ಈ ಚಿತ್ರಕ್ಕೆ ಇತ್ತೀಚೆಗೆ ಪೆದ್ದಿ ಅನ್ನೋ ಟೈಟಲ್ ಕೂಡ ಫೈನಲ್ ಆಗಿತ್ತು. ಆದ್ರೀಗ ರಾಮ ನವಮಿ ವಿಶೇಷ ಪೆದ್ದಿ ಫಸ್ಟ್ ಟೀಸರ್ ಝಲಕ್ ರಿವೀಲ್ ಮಾಡಿದೆ ಚಿತ್ರತಂಡ.
ರಾಮ್ ಚರಣ್ ಬ್ಯಾಟ್ ಹಿಡಿದು, ಹಳ್ಳಿಗಾಡಿನ ಕ್ರಿಕೆಟ್ ಮೈದಾನಕ್ಕೆ ಇಳಿದು ಬೌಂಡರಿ ಬಾರಿಸೋ ಸಣ್ಣ ದೃಶ್ಯವೊಂದು ನೋಡುಗರಿಗೆ ಸಖತ್ ಮಜಾ ಕೊಡಲಿದೆ. ಅದ್ರಲ್ಲೂ ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದ್ದು, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ. ಗೇಮ್ ಚೇಂಜರ್ ಬಳಿಕ ಬರ್ತಿರೋ ಚಿರು ತನಯ ಚಿತ್ರ ಇದಾಗಿದ್ದು, ಸಂಥಿಂಗ್ ಸ್ಪೆಷಲ್ ಅನಿಸಿದೆ.
ಬಾಯಲ್ಲಿ ಸಿಗಾರ್, ಚರಣ್ ಮ್ಯಾನರಿಸಂ ಖದರ್‌ಗೆ ಎಲ್ರೂ ಫಿದಾ ಆಗಿದ್ದಾರೆ. ಈ ಟೀಸರ್ ದೃಶ್ಯ ನೋಡಿದ್ರೆ ಆಮೀರ್ ಖಾನ್ ಲಗಾನ್ ಸಿನಿಮಾ ಕೂಡ ನೆನಪಾಗಲಿದೆ. ಅದ್ರಲ್ಲೂ ಇದೊಂದು ಇಂಟೆನ್ಸ್ ಆ್ಯಕ್ಷನ್ ಬ್ಲಾಕ್ಸ್ ಇರೋ ಪಕ್ಕಾ ನಾಟಿ ಸ್ಟೈಲ್ ಸಿನಿಮಾ ಅನ್ನೋದ್ರ ಹಿಂಟ್ ಸಿಕ್ಕಿದೆ. ಆದ್ರೆ ಚರಣ್ ಮಗದೊಮ್ಮೆ ಡಿ ಗ್ಲಾಮರ್ ರೋಲ್‌ನಲ್ಲಿ ರಂಗು ಚೆಲ್ಲಲ್ಲಿದ್ದಾರೆ.
ಆದ್ರೆ ಪುಷ್ಪ ಸಿನಿಮಾದ ಕಾಪಿ ಯಾಕೆ ಅಂತಿದ್ದಾರೆ ಒಂದಷ್ಟು ಮಂದಿ ನೆಟ್ಟಿಗರು. ಹೌದು.. ಪುಷ್ಪ ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಡಿ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ರು. ಹೇರ್ ಸ್ಟೈಲ್, ಗಡ್ಡ, ಬಾಯಲ್ಲಿರೋ ಸಿಗಾರ್.. ಹೀಗೆ ಎಲ್ಲವೂ ಸೇಮ್ ಟು ಸೇಮ್. ಹಾಗಾಗಿಯೇ ರಾಮ್ ಚರಣ್ ಯಾಕೆ ಪುಷ್ಪರಾಜ್ ಹಾದಿ ಹಿಡಿದ್ರು ಎನ್ನಲಾಗ್ತಿದೆ.
ಅಂದಹಾಗೆ ಮಗಧೀರ, ತ್ರಿಬಲ್ ಆರ್ ಸ್ಟಾರ್ ಚರಣ್‌ಗೆ ಡಿ ಗ್ಲಾಮರ್ ರೋಲ್ ಹೊಸತೇನಲ್ಲ. ಈ ರೀತಿ ಹಳ್ಳಿ ಹೈದನಾಗಿ ಈ ಹಿಂದೆ ಅದೇ ಪುಷ್ಪ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ರಂಗಸ್ಥಳಂನಲ್ಲಿ ಬಣ್ಣ ಹಚ್ಚಿದ್ರು. ಆ ಸಿನಿಮಾ ಎಷ್ಟು ದೊಡ್ಡ ಹಿಟ್ ಆಯ್ತು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದ್ರೂ ಸಹ, ಸಕುಮಾರ್ ಹಾಗೂ ಅವ್ರ ಗರಡಿಯಿಂದಲೇ ಬಂದಂತಹ ಬುಚ್ಚಿಬಾಬು ಅದ್ಯಾಕೋ ಹಳ್ಳಿ ಬ್ಯಾಕ್‌ಡ್ರಾಪ್ ಬಿಟ್ಟು ಹೊರಬರ್ತಿಲ್ಲ ಅನ್ನೋ ಅಪವಾದ ಕೇಳಿಬರ್ತಿದೆ.
ಅದೇನೇ ಇರಲಿ, ಎಆರ್ ರೆಹಮಾನ್ ಮ್ಯೂಸಿಕ್, ರತ್ನವೇಲು ಸಿನಿಮಾಟೋಗ್ರಫಿ ಇರೋ ಪೆದ್ದಿ ಚಿತ್ರದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಕೂಡ ನಟಿಸ್ತಿದ್ದಾರೆ ಅನ್ನೋದು ಹೆಮ್ಮೆಯ ವಿಷಯ. ಹೌದು.. ಈಗಾಗ್ಲೇ ಶಿವಣ್ಣ ಹೈದ್ರಾಬಾದ್‌ಗೆ ತೆರಳಿ ಎರಡ್ಮೂರು ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗಿಯಾಗಿ ಬಂದಿದ್ದಾರೆ. ಸೋ ಪುಸ್ತಕದ ಮುಖಪುಟ ನೋಡಿ ಪುಸ್ತಕವನ್ನು ಜಡ್ಜ್ ಮಾಡಬಾರದು ಎನ್ನುವಂತೆ ಪೆದ್ದಿ ಅಸಲಿ ಕಥೆ ಹೇಗಿರಲಿದೆ ಅಂತ ಕಾದು ನೋಡೋಣ. ಇನ್ನು 2026ರ ಮಾರ್ಚ್ 27ರಂದು ರಾಮ್ ಚರಣ್ ಬರ್ತ್ ಡೇ ವಿಶೇಷ ಈ ಚಿತ್ರ ತೆರೆಗೆ ಬರಲಿದೆ.