ಗೋಲ್ಡ್ ಕ್ವೀನ್ ರನ್ಯಾ ರಾವ್ ಕ್ಲೂ ಕೊಟ್ಟಿದ್ದು ಆಕೆಯ ಪತಿಯಾ..?

Untitled design (18)

ರನ್ಯಾ ರಾವ್ ಅವರೀಗ ಜೈಲು ಸೇರಿದ್ದಾಗಿದೆ. ನಟಿಯಾಗಿದ್ದ, ಡಿಜಿಪಿ ರಾಮಚಂದ್ರ ರಾವ್ ಅವರ ಮಗಳಾಗಿದ್ದ ರನ್ಯಾ ರಾವ್, ಜೈಲು ಸೇರಿದ್ದಕ್ಕೆ ಕಾರಣ, ಆಕೆಯ ಬೆಲ್ಟಿನಲ್ಲಿದ್ದ ಗೋಲ್ಡ್. ದುಬೈನಿಂದ ಬರುವಾಗ ಆಕೆಯ ಬೆಲ್ಟಿನಲ್ಲಿ 4.8 ಕೆಜಿ ಗೋಲ್ಡ್ ಬಿಸ್ಕೆಟ್ ಸ್ಮಗ್ಲಿಂಗ್ ಮಾಡ್ಕೊಂಡು ಬರ್ತಿದ್ದನ್ನ ರೆಡ್ ಹ್ಯಾಂಡ್ ಆಗಿ ಹಿಡಿದ ಅಧಿಕಾರಿಗಳು, ಆಕೆಯನ್ನ ಜೈಲಿಗೆ ಹಾಕಿದ್ದಾರೆ. ವಿಶೇಷ ಅಂದ್ರೆ, ಈ ಕ್ಲೂ ಡಿಆರ್‌ಐ ಆಫೀಸರ್ಸ್‌ಗೆ ಸಿಕ್ಕಿದ್ದು ಹೇಗೆ ಅನ್ನೋದು.

ADVERTISEMENT
ADVERTISEMENT

ಆರಂಭದ ಕಥೆಯ ಪ್ರಕಾರ ರನ್ಯಾ, ಈ ಹಿಂದೆ ಏರ್ ಪೋರ್ಟಿನಲ್ಲಿ ನಮ್ಮಪ್ಪ ಡಿಜಿಪಿ ಅಂತಾ ಅವಾಜ್ ಹಾಕಿ, ತಪಾಸಣೆ ತಪ್ಪಿಸಿಕೊಂಡಿದ್ದರು. ಆಗ ಆಕೆಯ ಟ್ರಾವೆಲ್ ಹಿಸ್ಟರಿ ಚೆಕ್ ಮಾಡಿದಾಗ ಡೌಟ್ ಬಂದಿತ್ತು. ಹೀಗಾಗಿ ರನ್ಯಾರನ್ನ ಸೀರಿಯಸ್ ಆಗಿ ಚೆಕ್ ಮಾಡಿದಾಗ ಆಕೆಯ ಬೆಲ್ಟಿನಲ್ಲಿ ಗೋಲ್ಡ್ ಸಿಕ್ಕಿತು ಅನ್ನೋ ಒಂದು ಸ್ಟೋರಿ ಹೊರಬಂದಿತ್ತು. ಆದರೆ ಈಗ ಬರ್ತಾ ಇರೋ ಸ್ಟೋರಿ ಹಾಗಲ್ಲ. ಆಕೆಯ ಪತಿಯೇ ರನ್ಯಾರ ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ವಿಮಾನದ ಅಧಿಕಾರಿಗಳಿಗೆ ಕ್ಲೂ ಕೊಟ್ಟಿದ್ದರು ಎನ್ನಲಾಗ್ತಿದೆ.

ರನ್ಯಾ ರಾವ್ ಅವರ ಗಂಡನ ಹೆಸರು ಜತಿನ್ ಹುಕ್ಕೇರಿ. ಬೆಳಗಾವಿಯವರು. ವೈಲ್ಡ್ ಫೋಟೋಗ್ರಫಿಗೆ ಹೋಗಿದ್ದಾಗ ರನ್ಯಾ ಕೂಡಾ ಅಕಸ್ಮಾತ್ ಆಗಿ ಸಿಕ್ಕು, ಆಮೇಲೆ ಮದುವೆಯಾಯ್ತು ಅನ್ನೋದು ಮ್ಯಾರೇಜ್ ಸ್ಟೋರಿ. ಆರ್ಕಿಟೆಕ್ಟ್ ಆಗಿರೋ ಜತಿನ್ ಅವರದ್ದು ಬೆಳಗಾವಿಯಲ್ಲಿ ದೊಡ್ಡ ಕುಟುಂಬವಂತೆ. ಯುಕೆಯ ಐಟಿ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿರೋ ಜತಿನ್ ಅವರಿಗೆ ಮದುವೆಯಾದ ಮೇಲೆ ಹೆಂಡತಿಯ ನಿಗೂಢ ನಡವಳಿಕೆ ಮೇಲೆ ಅನುಮಾನ ಬಂದಂತೆ. ಆಮೇಲೆ ರನ್ಯಾ, ಗೋಲ್ಡ್ ಸ್ಮಗ್ಲಿಂಗ್ ಮಾಡ್ತಾರೆ ಅನ್ನೋದು ಗೊತ್ತಾಗಿ, ಹೆಂಡತಿಯ ಮೇಲೆ ಎಗರಾಡಿದ್ರಂತೆ. ಆಗ ರನ್ಯಾ ರಾವ್ ಅವರ ತಂದೆ ಹೆಗ್ಡೇಶ್, ಮತ್ತು ಮಲತಂದೆ ಡಿಜಿಪಿ ರಾಮಚಂದ್ರರಾವ್ ಅವರು ಸಂಧಾನ ಮಾಡಿದ್ರಂತೆ.

ಈ ಹೆಗ್ಡೇಶ್ ಅವರು ರನ್ಯಾ ರಾವ್ ಅವರ ನಿಜವಾದ ತಂದೆಯಾದ್ರೆ, ಡಿಜಿಪಿ ರಾಮಚಂದ್ರರಾವ್ ಅವರು ಮಲತಂದೆ. ಕೊನೆಗೆ ರಾಮಚಂದ್ರರಾವ್ ಹೆದರಿಸಿ ಬೆದರಿಸಿ ಜತಿನ್ ಹುಕ್ಕೇರಿಯನ್ನ ಸುಮ್ಮನಾಗಿಸಿದ್ರು ಅನ್ನೋ ಸ್ಟೋರಿ ಬರ್ತಾ ಇದೆ.
ಇದಾದ ಮೇಲೆ ಜತಿನ್ ಹುಕ್ಕೇರಿ ಸುಮಾರು 2 ತಿಂಗಳ ಕಾಲ ದುಬೈನಲ್ಲೇ ಇದ್ದರಷ್ಟೇ ಅಲ್ಲ, ಹೆಂಡತಿಯ ಎಲ್ಲ ಆಕ್ಟಿವಿಟಿಯನ್ನೂ ಅಬ್ಸರ್ವ್ ಮಾಡಿದ್ರು. ಕೊನೆಗೆ ದೊಡ್ಡ ಮಟ್ಟದಲ್ಲಿ ಚಿನ್ನ ತಗೊಂಡು ಬರುವಾಗ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕ್ಲೂ ಕೊಟ್ರು ಅಂತಿದೆ ಇನ್ವೆಸ್ಟಿಗೇಷನ್ ಸ್ಟೋರಿ.

ಈಗ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಅವರ ಒಂದೊಂದು ಹೆಜ್ಜೆಯನ್ನೂ ಪರೀಕ್ಷೆ ಮಾಡ್ತಿದ್ದಾರೆ. ರನ್ಯಾ ರಾವ್ ಅವಳಲ್ಲಿದ್ದ 39 ಫಾರಿನ್ ವಾಚುಗಳು, ಅವು ಅವರಲ್ಲಿಗೆ ಬಂದಿದ್ದು ಹೇಗೆ ಅನ್ನೋದನ್ನೆಲ್ಲ ತನಿಖೆ ಮಾಡ್ತಿದ್ದಾರೆ.
ಒಟ್ಟಿನಲ್ಲಿ ರನ್ಯಾ ರಾವ್ ಅವರೀಗ ಜೈಲು ಸೇರಿದ್ದೂ ಆಗಿದೆ. ಆದರೆ.. ಈ ಕ್ಷಣದವರೆಗೂ ರನ್ಯಾ ರಾವ್ ಸಿಕ್ಕಿ ಬಿದ್ದಿದ್ದು ಹೇಗೆ ಅನ್ನೋದ್ರ ರಿಯಲ್ ಸ್ಟೋರಿ ಹೊರಬಂದಿಲ್ಲ.

Exit mobile version