ಮಹಿಳೆಯರಿಗೆ ಮೀಸಲಾಗಿ ಕೊಟ್ಟರೂ ಸಹ, ಸದ್ಯದ ಸಮಾಜದಲ್ಲಿ ಆಕೆಗೆ ಆಗ್ತಿರೋ ಅವಮಾನ, ಅಪಮಾನಗಳು ಮಾತ್ರ ಕಮ್ಮಿ ಆಗ್ತಿಲ್ಲ. ಪ್ರತಿನಿತ್ಯ ಆಕೆಯ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ದಾಳಿಗಳು ಆಗ್ತಾನೇ ಇವೆ. ಅದ್ರಲ್ಲೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರೋ ಸ್ಟಾರ್ ಗಳು ಕೂಡ ಅದಕ್ಕೆ ಹೊರತಾಗಿಲ್ಲ.
ಮಹಿಳಾ ಆಯೋಗದಂತಹ ಸಂಸ್ಥೆಗಳು, ಕ್ಲಿಷ್ಟ ಕಾನೂನುಗಳಿದ್ದರೂ ಸಹ ಆಗಾಗ ದೊಡ್ಡ ದೊಡ್ಡ ಎಡವಟ್ಟುಗಳು ಆಗ್ತಿರುತ್ತವೆ. ಸದ್ಯ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಲೆ ಬೋಳಿಸೋ ಅಂತಹ ಕೃತ್ಯ ನಡೆದಿದೆ. ಅದೂ ಆಕೆಯ ಭಾವಚಿತ್ರವನ್ನ ಮ್ಯಾಜಿಕ್ ಶೋನಲ್ಲಿ ಬಳಸಿ ಈ ಕೃತ್ಯ ಎಸಗಿರೋದು ದುರದೃಷ್ಠಕರ.
ಹೌದು.. ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರು ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೋಡುಗರನ್ನ ನಕ್ಕು ನಲಿಸಲು ರಶ್ಮಿಕಾ ತಲೆ ಬೋಳಿಸಿ ವಿಕೃತ ಮೆರೆದಿದ್ದಾರೆ. ರಶ್ಮಿಕಾ ನಮ್ಮ ಕನ್ನಡದವರು. ಕೊಡಗಿನ ಮೂಲದವರು. ಹೈದ್ರಾಬಾದ್ ನಲ್ಲಿ ಸೆಟಲ್ ಆಗಿದ್ರೂ, ವೇದಿಕೆಗಳ ಮೇಲೆ ಕನ್ನಡ ಮಾತನಾಡದಿದ್ರೂ ಆಕೆಗೆ ಆಕೆಯದ್ದೇ ಆದಂತಹ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ.
ಸದ್ಯ ಪುಷ್ಪ-2, ಅನಿಮಲ್, ಛಾವಾ ಅಂತಹ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಗಳನ್ನ ನೀಡಿದ ಗರಿಮೆಯಿದೆ. ಅಕೆಯನ್ನ ಟ್ರೋಲ್ ಮಾಡುವಂತವರ ಸಂಖ್ಯೆ ಹೆಚ್ಚಾಗೇ ಇದೆ. ಅಂಥದ್ರಲ್ಲಿ ಆಕೆಯನ್ನ ಈ ರೀತಿ ಟ್ರೋಲ್ ಆಗುವಂತೆ ಶೋ ಒಂದರಲ್ಲಿ ಬಿಂಬಿಸಿರೋದು ಅಕ್ಷಮ್ಯ ಅಪರಾಧ.
ಈ ಹಿಂದೆ ಡೀಪ್ ಫೇಕ್ ಅನ್ನೋ AI ಟೆಕ್ನಾಲಜಿಯಿಂದ ರಶ್ಮಿಕಾ ಮಂದಣ್ಣ ಬೇಸತ್ತಿದ್ದರು. ಅದು ಪ್ರಧಾನಿ ನರೇಂದ್ರ ಮೋದಿವರೆಗೂ ಹೋಗಿದ್ದು ಎಲ್ಲರಿಗೂ ಗೊತ್ತೇಯಿದೆ.
ಇದೀಗ ಈ ರೀತಿ ಟ್ರೋಲಿಗರಿಗೆ ಆಹಾರ ಮಾಡಿದ ಕುದ್ರೋಳಿ ಗಣೇಶ್ ನಡೆ ಎಷ್ಟರ ಮಟ್ಟಿಗೆ ಸರಿ..? ರಶ್ಮಿಕಾ ಮಂದಣ್ಣ ಈಗ ಈ ಬಗ್ಗೆ ಮಾನನಷ್ಟ ಕೇಸ್ ಹಾಕಿದ್ರೆ ಏನು ಮಾಡ್ತಾರೆ..? ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗರತ್ನ ಚೌಧರಿ ಅವರು ನೋಟಿಸ್ ಕಳಿಸಿದ್ರೆ, ಅದಕ್ಕೆ ಕುದ್ರೋಳಿ ಗಣೇಶ್ ಅವರ ಪ್ರತಿಕ್ರಿಯೆ ಹೇಗಿರುತ್ತೆ..? ಕಾದು ನೋಡೋಣ.