ಟಿವಿ ಶೋಗಳು, ವಿಶೇಷವಾಗಿ ಟಾಕ್ ಶೋಗಳು, ಪ್ರेಕ್ಷಕರ ಮನಸ್ಸಿಗೆ ನೇರವಾಗಿ ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಟಿವಿ ನಿರೂಪಕರು ತಮ್ಮ ವ್ಯಕ್ತಿತ್ವದ ಮೂಲಕ ಜನರ ಮೇಲೆ ಅಪಾರ ಪ್ರಭಾವ ಬೀರುತ್ತಾರೆ. ಇದನ್ನು ಸಾಬೀತು ಪಡಿಸಿದವರಲ್ಲಿ ಒಬ್ಬರು ಒಪ್ರಾ ವಿನ್‌ಫ್ರೇ. ಈ ಮಹಿಳೆ ಟಿವಿ ಜಗತ್ತಿನ ಇತಿಹಾಸದಲ್ಲಿಯೇ ಅತೀ ಶ್ರೀಮಂತ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹುಟ್ಟುವಾಗ ಬಡ ಕುಟುಂಬದಲ್ಲಿ ಬೆಳೆಯಲ್ಪಟ್ಟ ಒಪ್ರಾ, ಇಂದು ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನಿಜಕ್ಕೂ ಮೆಚ್ಚುವಂತಂದೆ. “ಬಡವಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವಾಗಿಯೇ ಸಾಯುವುದು ತಪ್ಪು” ಎಂಬ ಮಾತಿಗೆ ಜೀವಂತ ಉದಾಹರಣೆ ಒಪ್ರಾ. ಕಠಿಣ ಪರಿಶ್ರಮದಿಂದ, ತಮ್ಮ ಪ್ರತಿಭೆ ಅವರು ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ.
ಒಪ್ರಾ ವಿನ್‌ಫ್ರೇ ಅವರು ಶ್ರದ್ಧೆಯುಳ್ಳ ಕೆಲಸಗಾರ್ತಿ ಮಾತ್ರವಲ್ಲದೆ, ಅತ್ಯುತ್ತಮ ವ್ಯವಹಾರಶೀಲಳೂ ಹೌದು. 1970ರ ದಶಕದ ಅಂತ್ಯದಿಂದ 1980ರ ದಶಕದವರೆಗೆ ಅವರು ಟಿವಿ ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದರು. ನಂತರ, ಚಿಕಾಗೋದಲ್ಲಿ ಟಾಕ್ ಶೋ ನಡೆಸುವ ಅವಕಾಶ ದೊರೆತಾಗ, ಅವರ ಜೀವನ ಸಂಪೂರ್ಣ ಬದಲಾಗಿತ್ತು.
1985 ರಲ್ಲಿ, ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ‘ದಿ ಕಲರ್ ಪರ್ಪಲ್’ ಸಿನಿಮಾದಲ್ಲಿ ನಟನೆಯಿಂದ ಓಪ್ರಾ ಹೆಸರಾಗಿದರು. ಈ ಸಿನಿಮಾದಲ್ಲಿ ಪಾತ್ರಕ್ಕಾಗಿ ಅವರಿಗೆ ಆಸ್ಕರ್ ನಾಮನಿರ್ದೇಶನವೂ ಲಭಿಸಿತು. ಆದರೆ ಅವರ ಜೀವನದಲ್ಲಿ ಪೂರ್ತಿಯಾಗಿ ಬದಲಾವಣೆ ತಂದದ್ದು ‘ದಿ ಓಪ್ರಾ ವಿನ್‌ಫ್ರೇ ಶೋ’. ಈ ಶೋ 1986 ರಿಂದ 2011 ರವರೆಗೆ ಪ್ರಸಾರವಾಗುತ್ತಿದ್ದು, ಈ ಸಮಯದ ಒಳಗೇ ಅಮೆರಿಕದ ಪ್ರಸಿದ್ಧ ಮತ್ತು ಶ್ರೇಷ್ಠ ಟಾಕ್ ಶೋಗಳಲ್ಲಿ ಒಂದಾಗಿ ಬೆಳೆದಿತ್ತು.
ಈ ಶೋ ಮೂಲಕವೇ ಒಪ್ರಾ ತಮ್ಮದೇ ಆದ ಸಂಸ್ಥೆ ಸ್ಥಾಪಿಸಿದರು ಮತ್ತು ನಿರಂತರ ಲಾಭ ಗಳಿಸುತ್ತಾ ಬಂದರು. ಅವರು ಕೇವಲ ನಿರೂಪಕಿಯಾಗಿರದೇ, ಕಾರ್ಯನಿರ್ವಾಹಕ ನಿರ್ಮಾಪಕರಾಗಿ ತನ್ನ ಶೋವನ್ನೇ ವ್ಯವಹಾರದ ಸಾಧನವಾಗಿ ಮಾರ್ಪಡಿಸಿದರು. ಈ ಶೋದಿಂದ ಬಂದ ಲಾಭವನ್ನು ಮರುಹೂಡಿಕೆ ಮಾಡಿದ ಒಪ್ರಾ, ಸಿನಿಮಾ ನಿರ್ಮಾಣ, ಮಾಧ್ಯಮ ಹಕ್ಕುಗಳು ಮತ್ತು ಟಿವಿ ಚಾನೆಲ್ ಪ್ರಾರಂಭಿಸುವಂತೆ ಅನೇಕ ವ್ಯವಹಾರಗಳತ್ತ ದೃಷ್ಠಿ ಹರಿಸಿದರು.
ಇಂದಿನ ದಿನದಲ್ಲಿ, ಒಪ್ರಾ ಅವರ ನಿವ್ವಳ ಸಂಪತ್ತು ಸುಮಾರು $3 ಬಿಲಿಯನ್ (ಅಂದಾಜು ₹25,000 ಕೋಟಿ) ಆಗಿದ್ದು, ಫೋರ್ಬ್ಸ್ 2025ರ ವರದಿ ಪ್ರಕಾರ ಅವರು ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 1219ನೇ ಸ್ಥಾನದಲ್ಲಿದ್ದಾರೆ. ಮಾಧ್ಯಮ ಮತ್ತು ಮನರಂಜನೆ ವಿಭಾಗದಲ್ಲಿ ಅವರು 50ನೇ ಸ್ಥಾನದಲ್ಲಿದ್ದಾರೆ.
ಇವಲ್ಲಕ್ಕಿಂತಲೂ ವಿಶೇಷ ಸಂಗತಿಯೆಂದರೆ, ಹಾಲಿವುಡ್‌ನ ಮೂರು ಶ್ರೇಷ್ಠ ನಟರಾದ ಟಾಮ್ ಕ್ರೂಸ್, ಡ್ವೇನ್ ಜಾನ್ಸನ್ ಮತ್ತು ಶಾರುಖ್ ಖಾನ್ ಅವರ ಒಟ್ಟಾರೆ ನಿವ್ವಳ ಮೌಲ್ಯವೂ ($2.3 ಬಿಲಿಯನ್) ಒಪ್ರಾ ಅವರದ್ದಿಗಿಂತ ಕಡಿಮೆಯಾಗಿದೆ.
ಇಂದಿಗೂ ಒಪ್ರಾ ಟಿವಿ ಪ್ರೆಸೆನ್ಸ್ ಇಟ್ಟುಕೊಂಡಿದ್ದಾರೆ. ಸಿಂಗಲ್ ಎಪಿಸೋಡ್ ಟಾಕ್ ಶೋಗಳು, ಸ್ಪೆಷಲ್ ಇಂಟರ್ವ್ಯೂಗಳ ಮೂಲಕ ಟಿವಿ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿಯೂ ಮಹತ್ವದ ಹೂಡಿಕೆಯನ್ನು ಮಾಡಿರುವ ಒಪ್ರಾ, ಕ್ಯಾಲಿಫೋರ್ನಿಯಾ ಮತ್ತು ಹವಾಯಿಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ.