ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ‘ಸಿಖಂದರ್’ ಚಿತ್ರ ಈ ತಿಂಗಳ 30ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನೆಮಾ ಬಿಡುಗಡೆಗೆ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ, ನಟ ಸಲ್ಮಾನ್ ಖಾನ್ ತಮ್ಮ ಹೊಸ ವಾಚ್ ಧರಿಸುವ ಮೂಲಕ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಶೇರ್ ಮಾಡಿಕೊಂಡ ಪೋಸ್ಟ್ನಲ್ಲಿ, ಸಲ್ಮಾನ್ ಖಾನ್ ತಾವು ಜಾಕೋಬ್ & ಕಂಪನಿಯ ಎಪಿಕ್ ಎಕ್ಸ್ ರಾಮ್ ಜನ್ಮಭೂಮಿ ಟೈಟಾನಿಯಂ ಎಡಿಷನ್ 2 ವಾಚ್ ಧರಿಸಿರುವುದನ್ನು ಬಹಿರಂಗಪಡಿಸಿದ್ದಾರೆ. ಈ ವಾಚ್ ತನ್ನ ಅದ್ಭುತ ವಿನ್ಯಾಸ ಮತ್ತು ವಿಶೇಷ ವೈಶಿಷ್ಟ್ಯಗಳಿಂದಾಗಿ ಗಮನ ಸೆಳೆದಿದೆ.
ಸಲ್ಮಾನ್ ಖಾನ್ ತಮ್ಮ ಪೋಸ್ಟ್ನಲ್ಲಿ, “ಸಿಖಂದರ್ ಚಿತ್ರ ಮಾರ್ಚ್ 30ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಥಿಯೇಟರ್ನಲ್ಲಿ ಸಿಗೋಣ!” ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಮತ್ತು ಸಿನೆಮಾ ಪ್ರೇಮಿಗಳು ಅವರ ಹೊಸ ಸಿನಿಮಾ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.
ಬಾಲಿವುಡ್ ಮತ್ತು ಕ್ರಿಕೆಟ್ ಜಗತ್ತಿನ ಹಲವು ಗಣ್ಯರು ಈ ವಾಚ್ನನ್ನು ಬಳಸಿದ್ದು, ಈ ಹಿಂದೆ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ವೇಳೆ ನಟ ಅಭಿಷೇಕ್ ಬಚ್ಚನ್ ಕೂಡ ಈ ಕೇಸರಿ ಬಣ್ಣದ ವಾಚ್ ಧರಿಸಿದ್ದರು. ಅದೇ ವಾಚ್ ಮಾದರಿಯನ್ನು ಇದೀಗ ಸಲ್ಮಾನ್ ಖಾನ್ ಕೂಡ ಧರಿಸಿದ್ದು, ಇದರಿಂದ ಈ ವಾಚ್ ಮತ್ತಷ್ಟು ಜನಪ್ರಿಯವಾಗಿದೆ.
ಈ ವಾಚ್ ಜಾಕೋಬ್ & ಕಂಪನಿಯ ಎಪಿಕ್ ಎಕ್ಸ್ ರಾಮ್ ಜನ್ಮಭೂಮಿ ಟೈಟಾನಿಯಂ ಎಡಿಷನ್ 2 ಎಂದು ಕರೆಯಲಾಗುತ್ತದೆ. ಇದು ಅತ್ಯಂತ ದುಬಾರಿ ವಾಚ್ಗಳಲ್ಲಿ ಒಂದಾಗಿದ್ದು, ಇದರಲ್ಲಿ ಅಯೋಧ್ಯೆಯ ರಾಮ ಮಂದಿರದ ವಿನ್ಯಾಸ, ಭಗವಾನ್ ಶ್ರೀರಾಮನ ಚಿತ್ರ, ಹನುಮಾನ್ ಮೂರ್ತಿ ಹಾಗೂ ಕೆಲವು ಪವಿತ್ರ ಶಾಸನಗಳು ಮೂಡಿಬಂದಿವೆ.
ಈ ವಾಚ್ ಬೆಲೆ ಸುಮಾರು 34 ಲಕ್ಷ ರೂಪಾಯಿ ಆಗಿದ್ದು, ಇದು ಲಕ್ಷಾಂತರ ಅಭಿಮಾನಿಗಳ ಗಮನ ಸೆಳೆದಿದೆ. ಜಗತ್ತಿನಾದ್ಯಂತ ಕೇವಲ 49 ವಾಚ್ಗಳನ್ನು ಮಾತ್ರ ಉತ್ಪಾದಿಸಲಾಗಿದ್ದು, ಅದರಲ್ಲಿ ಒಂದನ್ನು ಸಲ್ಮಾನ್ ಖಾನ್ ಈಗ ಧರಿಸಿದ್ದಾರೆ. ಈ ಕಾರಣದಿಂದಾಗಿ ಈ ವಾಚ್ ಈಗ ಮತ್ತಷ್ಟು ವಿಶೇಷತೆ ಪಡೆದುಕೊಂಡಿದೆ.
ಸಲ್ಮಾನ್ ಖಾನ್ ಅವರ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ನೆಟಿಜನ್ಗಳು ಅದನ್ನು ತಮ್ಮದೇ ಶೈಲಿಯಲ್ಲಿ ಮೆಚ್ಚುತ್ತಿದ್ದಾರೆ. ಹಲವರು ಅವರ ಹೊಸ ವಾಚ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ಅದರ ದುಬಾರಿ ಬೆಲೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೇವಲ ವಾಚ್ ಮಾತ್ರವಲ್ಲ, ಸಲ್ಮಾನ್ ಅವರ ಲುಕ್ ಮತ್ತು ಫ್ಯಾಷನ್ ಸೆನ್ಸ್ ಕೂಡ ಅಷ್ಟೇ ಸಖತ್ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.