ಒಂದ್ಕಡೆ ಏನಿಲ್ಲ.. ಏನಿಲ್ಲ.. ಅವನ ನನ್ನ ನಡುವೆ ಏನಿಲ್ಲ.. ಅಂತಿರ್ತಾರೆ ಪ್ಯಾನ್ ಇಂಡಿಯಾ ಬ್ಯೂಟಿ ಸಮಂತಾ. ಮತ್ತೊಂದ್ಕಡೆ ನೀನೆಲ್ಲೋ ನಾನಲ್ಲೆ ಅಂತ ಹಚ್ ಡಾಗ್ ತರ ಸ್ಯಾಮ್ ಹಿಂದೆನೇ ಇರ್ತಾನೆ ಆತ. ಇಷ್ಟಕ್ಕೂ ಅವರಿಬ್ಬರ ನಡುವೆ ಏನು ನಡೀತಿದೆ..? ಈಗ ಮತ್ತೆ ಸುದ್ದಿ ಆಗ್ತಿರೋದ್ಯಾಕೆ..? ಮದ್ವೆ ಆಗ್ತಾರಾ ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಚೆನ್ನೈನಲ್ಲಿ ಹುಟ್ಟಿ, ಬೆಳೆದು, ಸೌತ್ ಸಿನಿದುನಿಯಾದ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ ಅನಿಸಿಕೊಂಡ ಚೆಲುವೆ ಸಮಂತಾ. ಅದ್ರಲ್ಲೂ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡ ಗರಿಮೆ ಇವರಿಗೆ ಸಲ್ಲುತ್ತದೆ. ಆದ್ರೆ 2017ರಲ್ಲಿ ನಾಗಾರ್ಜುನ್ ಮಗ ನಾಗಚೈತನ್ಯರನ್ನ ವರಿಸಿದ ಈ ಬ್ಯೂಟಿ 2021ರಲ್ಲಿ ವಿಚ್ಚೇದನ ಪಡೀತಾರೆ. ಒಂದ್ಕಡೆ ವೈಯಕ್ತಿಕ ಬದುಕಿನಲ್ಲಿ ಆದ ತಲ್ಲಣ, ಮತ್ತೊಂದ್ಕಡೆ ಕೈ ಕೊಟ್ಟ ಆರೋಗ್ಯ. ಇವೆರಡರ ನಡುವೆ ಈಕೆ ಅಕ್ಷರಶಃ ಕುಗ್ಗಿ ಹೋಗ್ತಾರೆ.
ಆಗ ಈಕೆಯ ಜರ್ನಿಗೆ ಸಾಥ್ ಕೊಟ್ಟ ವ್ಯಕ್ತಿಗಳು ರಾಜ್ & ಡಿಕೆ. ಹೌದು.. ದಿ ಫ್ಯಾಮಿಲಿಮ್ಯಾನ್ ವೆಬ್ ಸೀರೀಸ್‌ನಿಂದ ಸದ್ದು ಮಾಡಿದ ಈ ಡೈರೆಕ್ಟರ್ ಜೋಡಿ ಸಮಂತಾಗೆ ಬಹಳ ಹತ್ತಿರವಾದ್ರು. ಅದ್ರಲ್ಲೂ ಡೈರೆಕ್ಟರ್ ರಾಜ್ ಕೊಂಚ ಜಾಸ್ತಿನೇ ಸಮಂತಾನ ಹಚ್ಚಿಕೊಂಡಂತಿದೆ. ಹಾಗಾಗಿಯೇ ಸಮಂತಾಗೆ ಡಿ ಗ್ಲಾಮರ್ ಹಾಗೂ ಗ್ಲಾಮರ್ ಎರಡು ಶೇಡ್‌ಗಳುಳ್ಳ ಪಾತ್ರಗಳನ್ನ ದಿ ಫ್ಯಾಮಿಲಿಮ್ಯಾನ್‌ನಲ್ಲಿ ಕ್ರಿಯೇಟ್ ಮಾಡಿದ್ರು. ನಂತ್ರ ಆದಂತಹ ಬಾಲಿವುಡ್ ವೆಬ್ ಸೀರೀಸ್ ಸಿಟಾಡೆಲ್ ಹನಿ ಬನಿಯಲ್ಲೂ ಸಮಂತಾರನ್ನೇ ನಾಯಕನಟಿಯನ್ನಾಗಿಸಿದ್ರು.
ಇದ್ರಿಂದ ಇವರಿಬ್ಬರ ನಡುವೆ ಒಂದು ಸಲುಗೆ, ಸ್ನೇಹ, ಬಾಂಧವ್ಯ ಏರ್ಪಟ್ಟಿದೆ. ಸಾಕಷ್ಟು ವೇದಿಕೆಗಳು ಸೇರಿದಂತೆ ವೈಯಕ್ತಿಕ ಕಾರ್ಯಕ್ರಮಗಳಲ್ಲೂ ಇವರಿಬ್ಬರೂ ಒಟ್ಟೊಟ್ಟಿಗೆ ಕಾಣಿಸಿಕೊಂಡ ನಿದರ್ಶನಗಳಿವೆ. ಡೈರೆಕ್ಟರ್ ರಾಜ್ ಜೊತೆ ಸಮಂತಾ ಡೇಟಿಂಗ್ ಮಾಡ್ತಿದ್ದಾರಾ ಅನ್ನೋ ಗಾಸಿಪ್‌ಗಳು ಕೂಡ ದಟ್ಟವಾಗಿ ಹರಿದಾಡಿದ್ವು. ಆದ್ರೆ ಆ ತರಹ ಏನಿಲ್ಲ ಅಂತ ಸಮಂತಾ ಜಾರಿಕೊಂಡಿದ್ರು. ಆದ್ರೀಗ ಆಕೆ ಏನಿಲ್ಲ ಏನಿಲ್ಲ ಅಂತಿದ್ರೂ, ಈತ ಮಾತ್ರ ನೀನೆಲ್ಲೋ ನಾನಲ್ಲೇ ಅಂತಿದ್ದಾರೆ.
ಇತ್ತೀಚೆಗೆ ಸಮಂತಾ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದಾರೆ. ಅಲ್ಲಿ ಸ್ಯಾಮ್ ಜೊತೆ ಕಾಣಿಸಿಕೊಂಡು, ಎಲ್ಲರ ಕಣ್ಣು ಕುಕ್ಕುವಂತೆ ಮಾಡಿರೋದು ಒನ್ಸ್ ಅಗೈನ್ ಅದೇ ರಾಜ್. ಹೌದು.. ಮೂಲತಃ ತಿರುಪತಿ ಅವರೇ ಆಗಿರೋ ರಾಜ್, ಅಲ್ಲೇ ಅದೇ ಯೂನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಮಾಡಿ ಅಮೆರಿಕಾಗೆ ಶಿಫ್ಟ್ ಆಗಿದ್ರು. ಅಲ್ಲಿಂದ ಶಾರ್ಟ್ ಫಿಲಂಸ್ ಮಾಡ್ತಾ, ನಿಧಾನಿಕ್ಕೆ ವೆಬ್ ಸೀರೀಸ್‌ಗಳ ಮೂಲಕ ಟಾಕ್ ಆಫ್ ದಿ ಟೌನ್ ಆದರು. ಅದ್ರೆ ಸಮಂತಾ ಜೊತೆ ಪದೇ ಪದೆ ಕಾಣಿಸಿಕೊಳ್ತಿರೋ ರಾಜ್ ಬಗ್ಗೆ ಗುಸು ಗುಸು ಸುದ್ದಿಗಳು ಶುರುವಾಗಿವೆ.
ನಾಗಚೈತನ್ಯ ಜೊತೆ ಡಿವೋರ್ಸ್ ಪಡೆದ ಬಳಿಕ ಕುಗ್ಗಿದ್ದ ಸಮಂತಾಗೆ ಸ್ಟ್ರೆಂಥ್ ತುಂಬಿದ್ದೇ ಈ ರಾಜ್. ಹಾಗಾಗಿ ಸದ್ಯದಲ್ಲೇ ಇವರಿಬ್ಬರೂ ಮದ್ವೆ ಆಗ್ತಾರೆ ಅಂತಲೂ ಹೇಳಲಾಗ್ತಿದೆ. ಆದ್ರೆ ಈ ಮ್ಯಾಟರ್‌ನ ಅಧಿಕೃತವಾಗಿ ಖಾತರಿ ಪಡಿಸಬೇಕಿರೋದು ಸಮಂತಾ. ಸೋ.. ಪರ್ಸನಲ್ ಲೈಫ್‌ನಲ್ಲಿ ನೊಂದಿರೋ ಸ್ಯಾಮ್, ಆದಷ್ಟು ಬೇಗ ಗುಡ್ ನ್ಯೂಸ್ ಕೊಡಲಿ ಅನ್ನೋದು ಫ್ಯಾನ್ ಆಶಯವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್