ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಸಿನಿಮಾಗಳಿಗೆ ಎಲ್ಲಿಲ್ಲದ ಕ್ರೇಜ್. ಅದಕ್ಕೆ ಕಾರಣ ಆತನಿಗಿರೋ ಸ್ಟಾಡರ್ಮ್. ಅಲ್ಲದೆ, ಪ್ರೇಕ್ಷಕರ ಅಭಿರುಚಿಗೆ ತಕ್ಕನಾಗಿ ಕಥೆ, ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳೋ ಅವರ ಮನಸ್ಥಿತಿ. ಇತ್ತೀಚೆಗೆ ಪಠಾಣ್, ಜವಾನ್ ಅಂತಹ ಬ್ಲಾಕ್ ಬಸ್ಟರ್ ಹಿಟ್ ಮೂವೀಸ್ ನ ನೀಡಿದ ಶಾರೂಖ್, ಇದೀಗ ತಮ್ಮ ಬಿರುದಿನ ಹೆಸರಲ್ಲೇ ಸಿನಿಮಾ ಮಾಡ್ತಿದ್ದಾರೆ. ಹೌದು.. ಬಾದ್ ಷಾ ಶಾರೂಖ್ ರನ್ನ ಕಿಂಗ್ ಖಾನ್ ಅಂತಲೂ ಕರೀತಾರೆ. ಸದ್ಯ ಕಿಂಗ್ ಟೈಟಲ್ ನಲ್ಲೇ ಸಿನಿಮಾ ಮಾಡ್ತಿರೋ ಶಾರೂಖ್, ಅದು ಚಿತ್ರೀಕರಣ ಮುಗಿಯೋಕೆ ಮೊದಲೇ ಮತ್ತೊಂದು ಹೊಚ್ಚ ಹೊಸ ವೆಂಚರ್ ಗೆ ಕೈ ಹಾಕ್ತಿದ್ದಾರೆ.
ಯೆಸ್.. ಕಿಂಗ್ ಚಿತ್ರದ ಬಳಿಕ ಕಿಂಗ್ ಖಾನ್ ಮುಂದಿನ ಸಿನಿಮಾ ಯಾವುದು ಅಂತ ಪ್ರಶ್ನಿಸೋರಿಗೂ ಇದರಿಂದ ಉತ್ತರ ಸಿಕ್ಕಂತಾಗಿದೆ. ಇಷ್ಟಕ್ಕೂ ಶಾರೂಖ್ ನೆಕ್ಸ್ಟ್ ಪ್ರಾಜೆಕ್ಟ್ ಯಾರೊಟ್ಟಿಗೆ ಅಂದ್ರೆ ಪುಷ್ಪ ಖ್ಯಾತಿಯ ಸೆನ್ಸೇಷನಲ್ ಡೈರೆಕ್ಟರ್ ಸುಕುಮಾರ್ ಜೊತೆಗೆ ಎನ್ನಲಾಗ್ತಿದೆ. ಹೌದು.. ಈಗಾಗ್ಲೇ ಎರಡು ಸುತ್ತಿನ ಮಾತುಕತೆ ಕೂಡ ಮುಗಿಸಿರೋ ಸುಕ್ಕು- ಶಾರೂಖ್, ಸದ್ಯದಲ್ಲೇ ಸಿನಿಮಾನ ಅನೌನ್ಸ್ ಮಾಡಲಿದ್ದಾರಂತೆ.
ಹಾಗಾದ್ರೆ ಸುಕುಮಾರ್ ಸಾರಥ್ಯದ ಕಿಂಗ್ ಖಾನ್ ಚಿತ್ರ ಯಾವ ಜಾನರ್ ನಲ್ಲಿ ಇರಲಿದೆ ಅಂದ್ರೆ ಅದಕ್ಕೂ ಉತ್ತರ ಸಿಕ್ಕಾಗಿದೆ. ರೂರಲ್ ಪೊಲಿಟಿಕಲ್ ಡ್ರಾಮಾ ಮಾಡೋಕೆ ಸಜ್ಜಾಗಿರೋ ಸುಕುಮಾರ್, ಈ ಚಿತ್ರದಲ್ಲಿ ಶಾರೂಖ್ ರನ್ನ ದೇಸಿ ಹಾಗೂ ಆ್ಯಂಟಿ ಹೀರೋ ಆಗಿ ತೋರಿಸಲು ಹೊರಟಿದ್ದಾರೆ. ಅಂದಹಾಗೆ ಇತ್ತೀಚೆಗೆ ಹೀರೋಯಿಸಂ ಸಿನಿಮಾಗಳಿಗಿಂತ ಆ್ಯಂಟಿ ಹೀರೋಯಿಸಂ ಸಿನಿಮಾಗಳಿಗೇ ಹೆಚ್ಚು ಬೇಡಿಕೆಯಿದೆ. ಕೆಜಿಎಫ್, ಪುಷ್ಪ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಹೀರೋಗಳು ಆ್ಯಂಟಿ ಹೀರೋಸ್ ಆಗಿ ಮಿಂಚಿದ್ರು. ಹಾಗಾಗಿಯೇ ಮತ್ತೊಮ್ಮೆ ಸುಕುಮಾರ್ ತಮ್ಮ ಚಿತ್ರದ ನಾಯಕನಟ ಶಾರೂಖ್ ಗೆ ಆ್ಯಂಟಿ ಹೀರೋ ಸಬ್ಜೆಕ್ಟ್ ಇರೋ ಕಥೆಯನ್ನ ಹೆಣೆಯುತ್ತಿದ್ದಾರಂತೆ.
ವಿಶೇಷ ಅಂದ್ರೆ ಸುಕುಮಾರ್ ನಿರ್ದೇಶನದ ಈ ಬಹು ನಿರೀಕ್ಷಿತ ಸಿನಿಮಾನ ಶಾರೂಖ್ ಸ್ವತಃ ತಮ್ಮ ಹೋಮ್ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣ ಮಾಡಲು ಮುಂದಾಗ್ತಿದ್ದಾರೆ. ಜವಾನ್ ಸಿನಿಮಾ ಕೂಡ ತಮಿಳಿನ ಅಟ್ಲೀ ಜೊತೆ ಹೋಮ್ ಬ್ಯಾನರ್ ನಲ್ಲೇ ನಿರ್ಮಿಸಿದ್ದ ಕಿಂಗ್ ಖಾನ್, ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 1150 ಕೋಟಿ ದೋಚಿದ್ದರು. ಇದೀಗ ಮಗದೊಮ್ಮೆ ಸೌತ್ ನ ಸ್ಟಾರ್ ಡೈರೆಕ್ಟರ್ ಜೊತೆ ಕೈ ಜೋಡಿಸಿ, ಗಲ್ಲಾ ಪೆಟ್ಟಿಗೆಯ ಗದ್ದುಗೆ ಹಿಡಿಯಲು ಯೋಜನೆ ರೂಪಿಸಿದ್ದಾರೆ.
ಒಟ್ಟಾರೆ ಸೌತ್ ಟ್ಯಾಲೆಂಟ್ಸ್ ಜೊತೆ ಕೊಲ್ಯಾಬೊರೇಟ್ ಆಗ್ತಿರೋ ಶಾರೂಖ್ ಖಾನ್, ಈ ಬಾರಿ ಪುಷ್ಪ ಸಿನಿಮಾದ ಮೂಲಕ ವಿಶ್ವ ಸಿನಿದುನಿಯಾದ ಗಮನ ಸೆಳೆದ ಸುಕುಮಾರ್ ಗೆ ಗಾಳ ಹಾಕಿದ್ದಾರೆ. ಇವರಿಬ್ಬರೂ ಒಂದಾದ್ರೆ ದಿ ಬೆಸ್ಟ್ ಕಾಂಬೋ ಆಗಲಿದೆ ಅಂತ ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯ್ತಿದೆ. ಸದ್ಯದಲ್ಲೇ ಈ ಸುದ್ದಿ ಅಫಿಶಿಯಲಿ ಅನೌನ್ಸ್ ಆಗಲಿದ್ದು, ಇವರ ಕಾಂಬೋದಿಂದ ಒಂದೊಳ್ಳೆ ಮಾಸ್ ಮಸಾಲ ಎಂಟರ್ ಟೈನರ್ ಸಿನಿಮಾ ಹೊರಬರಲಿ ಅನ್ನೋದು ಚಿತ್ರ ಪ್ರೇಮಿಗಳ ಆಶಯ.
– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್