ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್, ವ್ಲಾಗ್‌ಗಳು ಮತ್ತು ಪ್ರಮೋಷನ್‌ಗಳ ಮೂಲಕ ಖ್ಯಾತಿ ಗಳಿಸಿರುವ ಸೋನು ಶ್ರೀನಿವಾಸ್ ಗೌಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಪೊಲೀಸ್ ವಸ್ತ್ರ ಧರಿಸಿ, ಕೈಯಲ್ಲಿ ಗನ್ ಹಿಡಿದು ಪೋಸ್ ನೀಡಿರುವ ಅವರ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹೊಸ ಲುಕ್‌ಗೆ ಅಭಿಮಾನಿಗಳು “ಪೊಲೀಸರ ವಸ್ತ್ರಕ್ಕೆ ಅವಮಾನ ಮಾಡಬೇಡಿ” ಎಂದು ಕಾಮೆಂಟ್ ಮಾಡಿದರೆ, ಕೆಲವರು “ಟ್ರೋಲ್ ಮಾಡುವವರನ್ನು ರುಬ್ಬಿ ಬಿಡುತ್ತಾಳೆ” ಎಂದು ಹಾಸ್ಯದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗುವುದು ಹೊಸದೇನಲ್ಲ. ಆದರೆ, ಟೀಕೆಗೊಳಗಾದರೂ ಅವರು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ರೀಲ್ಸ್ ಮತ್ತು ಪ್ರಮೋಷನ್‌ಗಳ ಮೂಲಕ ಸಂಪಾದನೆ ಮಾಡಿರುವ ಸೋನು, ಬೆಂಗಳೂರಿನಲ್ಲಿ ಎರಡು ಸೈಟ್‌ಗಳು, ಒಂದು ಅಪಾರ್ಟ್‌ಮೆಂಟ್, ಮತ್ತು ತವರು ಊರಿನಲ್ಲಿ ಮನೆ ಕಟ್ಟಿಸಿದ್ದಾರೆ. ಕುಟುಂಬದ ಬೆಂಬಲ ಇದ್ದರೂ, ಸೋನು ಅವರ ಕೊಡುಗೆ ಗಮನಾರ್ಹವಾಗಿದೆ ಎಂದೇ ಹೇಳಬಹುದು. ಈಗ ಮತ್ತೊಮ್ಮೆ ಅವರ ಪೊಲೀಸ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸೋನು ಗೌಡ ಪೊಲೀಸ್ ಯೂನಿಫಾರ್ಮ್‌ನಲ್ಲಿ ಖಾಕಿ ಬಟ್ಟೆ, ನೀಲಿ ಬಣ್ಣದ ಬ್ಯಾಡ್ಜ್ ಮತ್ತು ಗನ್ ಹಿಡಿದು ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. ಆದರೆ, ಈ ಲುಕ್ ಯಾಕೆ ಎಂದು ತಲೆಕೆಡಿಸಿಕೊಂಡವರಿಗೆ ಉತ್ತರ ಸಿಕ್ಕಿದೆ. ಇದು ಶೂಟಿಂಗ್ ಸಮಯದ ಫೋಟೋ. ಹೌದು, ಸೋನು ಶ್ರೀನಿವಾಸ್‌ಗೌಡ ಒಂದು ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಈ ಸೀರಿಸ್‌ನಲ್ಲಿ ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್ ಸಮಯದಲ್ಲಿ ಕ್ಲಿಕ್ ಮಾಡಿದ ಈ ಚಿತ್ರಗಳು ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿವೆ.
ಸಿನಿಮಾಗಳಲ್ಲಿ ನಟಿಸುವುದು ಸೋನು ಗೌಡರ ದೀರ್ಘಕಾಲದ ಆಸೆ. ಒಳ್ಳೆಯ ಚಿತ್ರಕಥೆಗಳಿಗಾಗಿ ಕಾಯುತ್ತಿದ್ದ ಅವರು, ಸಿನಿಮಾ ಪ್ರೀಮಿಯರ್ ಶೋಗಳಲ್ಲಿ ಪ್ರಮೋಷನ್ ನೆಪದಲ್ಲಿ ಭಾಗವಹಿಸುತ್ತಿದ್ದರು. ಇದೀಗ ವೆಬ್ ಸೀರಿಸ್‌ನಲ್ಲಿ ಅವಕಾಶ ಪಡೆದಿದ್ದು, ಅವರ ಕನಸು ನನಸಾಗುವತ್ತ ಮುನ್ನಡೆಯುತ್ತಿದೆ. ಸುಮಾರು 11 ಲಕ್ಷ ಫಾಲೋವರ್ಸ್ ಹೊಂದಿರುವ ಸೋನು, ತಮ್ಮ ವೆಬ್ ಸೀರಿಸ್ 1 ಮಿಲಿಯನ್ ವೀಕ್ಷಣೆಗಳನ್ನು ಸುಲಭವಾಗಿ ಮುಟ್ಟುವ ವಿಶ್ವಾಸದಲ್ಲಿದ್ದಾರೆ.
ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಬಳಿಕ ಸೋನು ಗೌಡರ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡು, ತಮ್ಮ ವೃತ್ತಿಜೀವನವನ್ನು ಮತ್ತಷ್ಟು ಬಲಪಡಿಸುತ್ತಿದ್ದಾರೆ. ಈ ಹೊಸ ಪೊಲೀಸ್ ಲುಕ್‌ನೊಂದಿಗೆ ಅವರು ಮತ್ತೆ ಸುದ್ದಿಯಾಗಿದ್ದು, “ನಿಜ ಜೀವನದಲ್ಲಿ ಪೊಲೀಸ್ ಆದರೆ ಟ್ರೋಲರ್‌ಗಳನ್ನು ರುಬ್ಬಿ ಬಿಡುತ್ತಾಳೆ” ಎಂದು ನೆಟ್ಟಿಗರು ಹಾಸ್ಯದಲ್ಲಿ ಕಾಮೆಂಟ್ ಮಾಡಿದ್ದಾರೆ.