ಸೂತ್ರಧಾರಿ ಟ್ರೈಲರ್ ಥ್ರಿಲ್ಲಿಂಗ್.. ನವರಸನ್ ಈಸ್ ಬ್ಯಾಕ್

ಹೇಗಿದ್ದಾನೆ ಧ್ರುವ ಆಪ್ತಮಿತ್ರ ಸೂತ್ರಧಾರಿ ಚಂದನ್ ಶೆಟ್ಟಿ..?

Untitled design 2025 04 26t210223.300

ದ್ವಾರಕೀಶ್ ಆಪ್ತಮಿತ್ರ ವಿಷ್ಣುವರ್ಧನ್ ಆದ್ರೆ, ಚಂದನ್ ಶೆಟ್ಟಿಗೆ ಪ್ರಾಣಮಿತ್ರ ಧ್ರುವ ಸರ್ಜಾ. ಸದ್ಯ ಸೂತ್ರಧಾರಿಯಾಗಿ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಬರ್ತಿರೋ ಕನ್ನಡ ಱಪರ್‌‌ಗೆ ಆ್ಯಕ್ಷನ್ ಪ್ರಿನ್ಸ್ ಸಾಥ್ ನೀಡಿದ್ದಾರೆ. ಕ್ರೈಂ ಥ್ರಿಲ್ಲರ್ ಸೂತ್ರಧಾರಿ ಟ್ರೈಲರ್ ಹೇಗಿದೆ..? ಪಾತ್ರಧಾರಿಗಳು ಹೇಳಿದ್ದೇನು..? ಅನ್ನೋದ್ರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ADVERTISEMENT
ADVERTISEMENT

ಸೂತ್ರಧಾರಿ.. ಱಪರ್ ಚಂದನ್ ಶೆಟ್ಟಿ ಲೀಡ್‌‌ನಲ್ಲಿ ನಟಿಸಿರೋ ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾ. ಕಿರಣ್ ಕುಮಾರ್ ನಿರ್ದೇಶನದ ಹಾಗೂ ನವರಸನ್ ನಿರ್ಮಾಣದ ಸೂತ್ರಧಾರಿ ಕಳ್ಳ-ಪೊಲೀಸರ ನಡುವಿನ ಥ್ರಿಲ್ಲಿಂಗ್ ಗೇಮ್ ತರ ಕಾಣ್ತಿದೆ. ಇದೇ ಮೇ 9ಕ್ಕೆ ತೆರೆಗೆ ಬರ್ತಿರೋ ಸೂತ್ರಧಾರಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ನೋಡುಗರ ಹುಬ್ಬೇರಿಸಿದೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ತಮ್ಮ ಬಾಲ್ಯದ ಗೆಳೆಯ ಱಪರ್ ಚಂದನ್ ಶೆಟ್ಟಿಗಾಗಿ ಬಂದು ಸೂತ್ರಧಾರಿ ಟ್ರೈಲರ್‌‌ನ ಲಾಂಚ್ ಮಾಡಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚಂದನ್ ಈ ಚಿತ್ರದಲ್ಲಿ ಖಡಕ್ ಪೊಲೀಸ್ ಕಾಪ್ ಆಗಿ ಮಿಂಚಿದ್ದು, ಬಹಳ ವರ್ಷಗಳ ನಂತ್ರ ನವರಸನ್ ಕ್ಯಾಮೆರಾ ಫೇಸ್ ಮಾಡೋ ಮೂಲಕ ಖಾಕಿಗೇ ಕೌಂಟರ್ ನೀಡಿದ್ದಾರೆ.

ನಾಯಕಿಯಾಗಿ ಅಪೂರ್ವ ನಟಿಸಿದ್ದು, ಸಂಜನಾ ಆನಂದ್ ಕೂಡ ಸಿನಿಮಾದ ಗ್ಲಾಮರ್ ಹೆಚ್ಚಿಸೋ ಕಾರ್ಯ ಮಾಡಿದ್ದಾರೆ. ಇನ್ನು ಮುಖ್ಯಭೂಮಿಕೆಯಲ್ಲಿ ತಬಲಾ ನಾಣಿ, ಪ್ರಶಾಂತ್ ನಟನಾ, ಗಣೇಶ್ ನಾರಾಯಣ್, ಪಲ್ಲವಿ, ವಂದನಾ, ಕಾವ್ಯ ಕೃಷ್ಣಮೂರ್ತಿ ನಟಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ನವರಸನ್ ಆಪ್ತ ಮಿತ್ರರಾದ ನಿರ್ಮಾಪಕ ಸಂಜಯ್ ಗೌಡ ಕೂಡ ಅಭಿನಯಿಸಿದ್ದಾರೆ.

ಈಗಾಗ್ಲೇ ಸೂತ್ರಧಾರಿ ಸಾಂಗ್ಸ್ ಹಿಟ್ ಆಗಿದ್ದು, ಚಂದನ್ ಶೆಟ್ಟಿ ತಮ್ಮ ಸಿನಿಮಾಗೆ ತಾವೇ ಮ್ಯೂಸಿಕ್ ಕಂಫೋಸ್ ಮಾಡಿದ್ದಾರೆ. ಡ್ಯಾಶ್ ಸಾಂಗ್ ಹಾಗೂ ಟೈಟಲ್ ಸಾಂಗ್‌ಗಳು ಎಲ್ಲರೂ ಗುನುಗುವಂತಾಗಿದ್ದು, ಟ್ಯೂನ್, ಸಾಹಿತ್ಯ, ಚಿತ್ರೀಕರಣ ಸಂಥಿಂಗ್ ಸ್ಪೆಷಲ್ ಅನಿಸಿದೆ.

ಇನ್ನು ಟ್ರೈಲರ್ ಲಾಂಚ್ ವೇಳೆ ಮಾತನಾಡಿದ ನಟ ಧ್ರುವ ಸರ್ಜಾ, ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌‌‌ನಲ್ಲಿ ನಡೆದ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸಿದರು. ಉಗ್ರರನ್ನ ಬಾಸ್ಟರ್ಡ್ಸ್ ಎಂದ ಧ್ರುವ ಸರ್ಜಾ, ಅದಕ್ಕೆ ಮೋದಿ ಹಾಗೂ ಸರ್ಕಾರ ತಕ್ಕ ಉತ್ತರ ಕೊಟ್ಟೇ ಕೊಡ್ತಾರೆ ಅಂತ ಅಭಿಪ್ರಾಯ ಪಟ್ಟರು. ಅಲ್ಲದೆ, ತಮ್ಮ ಮಾರ್ಟಿನ್ ಸಿನಿಮಾದ ಶೂಟಿಂಗ್ ಕಾಶ್ಮೀರದಲ್ಲಿ ನಡೆದ ದಿನಗಳನ್ನ ನೆನೆದರು.

ಅದೇನೇ ಇರಲಿ, ಸೂತ್ರಧಾರಿಯ ಆಟ ಜೋರಿರಲಿದ್ದು ಟ್ರೈಲರ್ ಸಖತ್ ಕಿಕ್ ಕೊಡ್ತಿದೆ. ನವರಸನ್ ನಿರ್ಮಾಪಕ, ನಟನಾಗಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಥ್ರಿಲ್ಲರ್ ಜಾನರ್‌‌ಗಳನ್ನ ಇಷ್ಟ ಪಡುವ ಪ್ರೇಕ್ಷಕರಿಗೆ ಇದು ಮಸ್ತ್ ಮನರಂಜನೆ ಕೊಡೋದು ಕನ್ಫರ್ಮ್‌.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version