ಆಲ್ ಇಂಡಿಯಾ ಕಟೌಟ್, ಬಾದ್ ಷಾ ಕಿಚ್ಚ ಸುದೀಪ್ ಅವರ ಗತ್ತು ಇಡೀ ಇಂಡಿಯಾಗೆ ಗೊತ್ತು. ಅವರಿಗೆ ರಾಜಮೌಳಿ, ದಳಪತಿ ವಿಜಯ್, ರಾಮ್ ಗೋಪಾವ್ ವರ್ಮಾ, ಸೂರ್ಯ, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಅಂತಹ ಲೆಜೆಂಡ್ಸ್ ಜೊತೆ ಕೆಲಸ ಮಾಡಿದ ಅನುಭವಗಳುಂಟು. ನಟನೆ, ನಿರ್ದೇಶನ, ನಿರ್ಮಾಣ, ಗಾಯನ, ಕ್ರಿಕೆಟ್, ಬಿಗ್ ಬಾಸ್ ನಿರೂಪಣೆ ಹೀಗೆ ಸಾಕಷ್ಟು ವಿಭಾಗಗಳಲ್ಲಿ ಸುದೀಪ್ ತಮ್ಮನ್ನ ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಆದ್ರೆ ಅವರ ಪುತ್ರಿ ಸಾನ್ವಿ ಸುದೀಪ್ ಬಗ್ಗೆ ಎಷ್ಟೋ ಮಂದಿಗೆ ಗೊತ್ತಿಲ್ಲ. ಸಾನ್ವಿ ಅದ್ಭುತ ಗಾಯಕಿ ಅನ್ನೋದು ಎಲ್ರಿಗೂ ಗೊತ್ತು. ಆದ್ರೆ ಆಕೆ ಏನು ಓದಿದ್ದಾರೆ..? ಆಕೆಯ ಕ್ರಶ್ ಯಾರು..? ಯಾವ ಸ್ಟಾರ್ ಅಂದ್ರೆ ಇಷ್ಟ..? ಡೇಟಿಂಗ್ ಬಗ್ಗೆ ಆಕೆಯ ಅಭಿಪ್ರಾಯವೇನು..? ನೆಪೋಟಿಸಂ ಕುರಿತ ಆಕೆ ಏನು ಹೇಳ್ತಾರೆ ಹೀಗೆ ನಿಮಗೆ ಸಾಕಷ್ಟು ಕ್ಯೂರಿಯಾಸಿಟಿ ಇರಲಿದೆ. ಆ ಕುತೂಹಲಕ್ಕೆ ಉತ್ತರ ಇಲ್ಲಿದೆ. ಸಾನ್ವಿ ತೆರೆದಿಟ್ಟ ಅಪರೂಪದ ಮಾತಿನ ಸರಮಾಲೆಯ ಒಳನೋಟ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.