ಜೀ ಕನ್ನಡ ವಾಹಿನಿಯಲ್ಲಿ ಹೊಸ ಸೀರಿಯಲ್ ಒಂದು ಶುರುವಾಗ್ತಾ ಇದೆ. ಕನ್ನಡ ಕಿರುತೆರೆಯ ಮೋಸ್ಟ್ ಫೇವರಿಟ್ ಹೀರೋ ಅಂತಲೆ ಕರೆಸಿಕೊಳ್ಳುವ ಕಿರಣ್ ರಾಜ್, ಜೀ ಕನ್ನಡದ ಈ ಹೊಸ ಸೀರಿಯಲ್ ಕರ್ಣ ಮೂಲಕ ಪ್ರಪಂಚಕ್ಕೆ ವಾಪಸ್ಸಾಗಿದ್ದಾರೆ. ಕಿರಣ್ ರಾಜ್ ಅಭಿಮಾನಿ ಒಬ್ಬರಿಗೆ ಹೇಳಿದರಂತೆ ಟೈಟಲ್ ರೋಲ್‌ನ ಸೀರಿಯಲ್ ಮೂಲಕ ಮತ್ತೆ ಕಿರುತೆರೆ ಇಂಡಸ್ಟ್ರಿಗೆ ವಾಪಸ್ ಆಗ್ತಿದ್ದೇನೆ.
ಕರ್ಣನಿಗೆ ನಾಯಕಿಯಾಗಲು ಹೀರೋಯಿನ್ ಪೈಪೋಟಿ
ಕಿರಣ್ ರಾಜ್ ಅಭಿನಯದ ಹೊಸ ಸೀರಿಯಲ್‌ನ ಪ್ರೋಮೋ ಒಂದು ರಿಲೀಸ್ ಆಗಿದ್ದು, ಇದರಲ್ಲಿ ಕರ್ಣನ ಮನೆಯವರನ್ನೆಲ್ಲಾ ಪರಿಚಯಿಸಿದ್ದು, ಹೀರೋಯಿನ್‌ನ ಮಾತ್ರ ರಿವೀಲ್ ಮಾಡಿಲ್ಲ.ಆದ್ರೆ ಪ್ರೋಮೋ ನೋಡಿದ ಪ್ರೇಕ್ಷಕರು ಕಿರಣ್ ರಾಜ್‌ಗೆ ಕರ್ಣ ಸೀರಿಯಲ್‌ನಲ್ಲಿ ಯಾರು ಜೋಡಿಯಾಗಬೇಕು ಅನ್ನೋ ಭರ್ಜರಿ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಪೈಪೋಟಿಯಲ್ಲಿರೋ ನಟಿಯರು ಯಾರ್ಯಾರು ಗೊತ್ತಾ..?
ಕರ್ಣನ ಕೈ ಹಿಡಿತಾಳಾ ಕನ್ನಡತಿ..?
ಕಿರಣ್ ರಾಜ್‌ಗೆ ಇಷ್ಟೊಂದು ಜನಪ್ರಿಯತೆ ತಂದು ಕೊಟ್ಟ ಸೀರಿಯಲ್ ಕನ್ನಡತಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್ ಕನ್ನಡತಿ. ಈ ಸೀರಿಯಲ್‌ನಲ್ಲಿ ಕಿರಣ್ ರಾಜ್ ಹಾಗು ಪುಟ್ಟ ಗೌರಿ ಮದುವೆ ಖ್ಯಾತಿಯ ನಟಿ, ಬರಹಗಾರ್ತಿ ರಂಜನಿ ರಾಘವನ್ ಜೋಡಿಯಾಗಿದ್ದರು. ಈ ಜೋಡಿ ಕನ್ನಡ ಟೆಲಿವಿಷನ್ ಲೋಕದ ಕೆಲವೇ ಅಪರೂಪದ ಫೇವರಿಟ್ ಜೋಡಿಗಳ ಪೈಕಿ ಟಾಪ್‌ನಲ್ಲಿದೆ. ಇದೇ ಕಾರಣಕ್ಕೆ ಈಗ ಅಭಿಮಾನಿಗಳು ಇವ್ರಿಬ್ಬರು ಮತ್ತೆ ಒಂದಾಗ್ಬೇಕು ಅಂತಿದ್ದಾರೆ. ಆದ್ರೆ ಸದ್ಯ ಪುಸ್ತಕ, ಮದುವೆ ಅಂತ ಬ್ಯುಸಿಯಾಗಿರೋ ರಂಜಿನಿ, ಯಾವುದೇ ನಟನೆಗೆ ಮರಳುವ ಸಾಧ್ಯತೆ ಇಲ್ಲ. ಜೀ ಕನ್ನಡ ಕೂಡ ರಂಜನಿ ಅವರನ್ನು ಆಯ್ಕೆ ಮಾಡೋ ಮೂಡ್‌ನಲ್ಲಿ ಇಲ್ಲ.
ಬಿಗ್ ಬಾಸ್ ಭವ್ಯ ಗೌಡ ಕರ್ಣನ ಲವರ್?
ಡಾಕ್ಟರ್ ಪಾತ್ರದ ಕರ್ಣನಾಗಿ ಕನ್ನಡಿಗರ ಮನೆ ಮಗನಾಗೋಕೆ ಹೊರಟಿರೋ, ಕಿರಣ್ ರಾಜ್‌ಗೆ ಬಿಗ್ ಬಾಸ್ ಖ್ಯಾತಿಯ ನಟಿ ಭವ್ಯ ಗೌಡ ಹೀರೋಯಿನ್ ಆಗ್ಬೇಕು ಅನ್ನೋದು ಅಭಿಮಾನಿಗಳ ಆಶಯ. ಭವ್ಯ ಗೌಡ ಬಿಗ್ ಬಾಸ್‌ಗೆ ಬರುವ ಮುನ್ನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಗೀತಾ ಸೀರಿಯಲ್ ನಾಯಕಿಯಾಗಿದ್ರು. ಈಗ ಕರ್ಣ ಸೀರಿಯಲ್‌ನಲ್ಲಿ ಕಿರಣ್ ರಾಜ್‌ಗೆ ಜೋಡಿಯಾಗಬೇಕು ಅಂತ ಫ್ಯಾನ್ಸ್ ಹೇಳ್ತಾ ಇದ್ದಾರೆ. ಆದ್ರೆ, ಜೀ ಕನ್ನಡ ಭವ್ಯ ಗೌಡರನ್ನ ಆಯ್ಕೆ ಮಾಡೋ ಯಾವುದೇ ಚಾನ್ಸ್ ಇಲ್ಲ.
ʻಪಾರುʼ ಮೋಕ್ಷಿತಾ ಪೈ ಕರ್ಣನ ನಾಯಕಿಯಾಗ್ತಾರಾ..?
ಬಿಗ್ ಬಾಸ್ ಫೇಮ್ ನ ಮತ್ತೊಬ್ಬ ಹೀರೋಯಿನ್ ಮೋಕ್ಷಿತಾ ಪೈ ಕರ್ಣನ ಜೋಡಿಯಾಗಲಿ ಅನ್ನೋದು ಅಭಿಮಾನಿಗಳ ಮತ್ತೊಂದು ಬೇಡಿಕೆ. ಈ ಹಿಂದೆ ಜೀ ಕನ್ನಡದ ಪಾಪ್ಯುಲರ್ ಸೀರಿಯಲ್ ಪಾರುನ ನಾಯಕಿಯಾಗಿದ್ದ ಮೋಕ್ಷಿತಾ ಪೈ, ಸೀರಿಯಲ್ ಮುಗಿದ ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ರು. ಆದ್ರೀಗ ಮೋಕ್ಷಿತಾ ಪೈರನ್ನ ಮತ್ತೆ ಕರ್ಣ ಸೀರಿಯಲ್‌ಗೆ ಹೀರೋಯಿನ್ ಮಾಡಿಕೊಂಡ್ರೆ ಚೆನ್ನಾಗಿರುತ್ತೆ ಅಂತ ಅಭಿಮಾನಿಗಳು ಆಸೆ ಪಡ್ತಾ ಇದ್ದಾರೆ. ಆದ್ರೆ ಈ ಆಪ್ಶನ್ ಕೂಡ ಜೀ ಕನ್ನಡದ ಬಳಿ ಇಲ್ಲ.
ಯಾರಾಗ್ತಾರೆ ಡಾಕ್ಟರ್ ಕರ್ಣನ ಹೀರೋಯಿನ್..?
ಮೇಲೆ ಹೇಳಿದ ನಟಿಮಣಿಯರ ಜೊತೆಗೆ ಇನ್ನು ಸಾಕಷ್ಟು ಹೀರೋಯಿನ್‌ಗಳ ಹೆಸರು ಕರ್ಣನಿಗೆ ಜೋಡಿಯಾಗಬೇಕು ಅನ್ನೋ ಬೇಡಿಕೆ ಅಭಿಮಾನಿಗಳದ್ದು.ಆದ್ರೆ ಜೀ ಕನ್ನಡ ಬೇರೆಯದ್ದೇ ಪ್ಲಾನ್ ಮಾಡಿದೆ. ಈಗಾಗ್ಲೆ ಕರ್ಣ ಸೀರಿಯಲ್‌ನ ನಾಯಕಿ ಆಯ್ಕೆ ಮುಗಿದ್ದಿದ್ದು. ಈ ಬಾರಿ ಕನ್ನಡಿಗರು ಮೆಚ್ಚೋ ಮುದ್ದಾದ ಹೊಸ ಪ್ರತಿಭೆಗೆ ಜೀ ಕನ್ನಡ ಮಣೆ ಹಾಕಿದೆ. ಹೀರೋಯಿನ್ ಮತ್ತವಳ ಕುಟುಂಬ ರಿವೀಲ್ ಮಾಡೋ ಪ್ರೋಮೋ ಒಂದನ್ನ ಜೀ ಕನ್ನಡ ಪ್ಲಾನ್ ಮಾಡಿಕೊಂಡಿದೆ. ಯಾರು ಆ ಹೀರೋಯಿನ್ ಅಂತ ತಿಳ್ಕೊಳ್ಳೋದಕ್ಕೆ ಕಾಯ್ತಾ ಇರಿ.