ಕಾಶ್ಮೀರದ ಕಣಿವೆಗಳಲ್ಲಿ ಆಗಾಗ ರಕ್ತ ಹರಿಯುತ್ತದೆ. ಅಲ್ಲಿ ಬೀಸೋದು ತಂಗಾಳಿಯಲ್ಲ, ಅಮಯಾಕರ ಉಸಿರಿನ ಗಾಳಿ. ಕಾಶ್ಮೀರಿ ಪಂಡಿತರ ಮಾರಣಹೋಮದಂತೆ ಮತ್ತೊಮ್ಮೆ ಉಗ್ರರ ಗನ್‌ಗಳು ಪ್ರೇಮ ಕಾಶ್ಮೀರವನ್ನು ರಕ್ತ ಕಾಶ್ಮೀರ ಆಗಿಸಿವೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ, ಕಂಡು ಕೇಳರಿಯದ ರಣಭೀಕರ ರಕ್ತದೋಕುಳಿ ಹರಿಸಿದ್ದಾರೆ. ಈ ಕುರಿತ ಭಯಾನಕ ಸತ್ಯಗಳ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ ನೋಡಿ.
ಜಮ್ಮು- ಕಾಶ್ಮೀರ.. ಸ್ವಚ್ಚವಾದ ಗಾಳಿ, ಅಮೃತದಂತಹ ನೀರು, ನಿಷ್ಕಲ್ಮಶ ಪ್ರೀತಿ-ಪ್ರೇಮಕ್ಕೆ ತವರಾದ ಕಣ್ಣು ಕೋರೈಸುವ ಸುಂದರ ತಾಣಗಳಿಂದ ಕೂಡಿರುವ ಭಾರತದ ಒಂದು ಭಾಗ. ಅದು ನೋಡೋಕೆ ಎಷ್ಟು ಸುಂದರ, ಸುಮಧುರ, ರಮಣೀಯ ತಾಣವೋ.. ಅದ್ರ ಹಿಂದೆ ಅಷ್ಟೇ ಭಯಾನಕ ಕ್ರೋಧ, ದ್ವೇಷ ಹಾಗೂ ಅಸೂಯೆಗಳು ಬೂದಿ ಮುಚ್ಚಿದ ಕೆಂಡಗಳಂತಿವೆ. ಅದಕ್ಕೆ ಕಾರಣ ಉಗ್ರಗಾಮಿಗಳು ಅನ್ನೋ ನರರಾಕ್ಷಸರು.
ಹೌದು.. 1989-90ನೇ ಇಸವಿಯಲ್ಲಿ ಕಾಶ್ಮೀರದಲ್ಲಿ ಹಿಂದೂಗಳನ್ನ ಟಾರ್ಗೆಟ್ ಮಾಡಿದ್ರು ಉಗ್ರರು. ಅದರಲ್ಲೂ ಕಾಶ್ಮೀರಿ ಪಂಡಿತರನ್ನು ಉಚ್ಚಾಟಿಸೋ ನಿಟ್ಟಿನಲ್ಲಿ ಸಿಕ್ಕ ಸಿಕ್ಕಲ್ಲಿ ಗುಂಡಿಕ್ಕಿ ಕೊಲ್ಲುವಂತಹ ನೀಚ ಕಾರ್ಯ ಮಾಡಿದ್ದರು. ಗಂಡು, ಹೆಣ್ಣು, ಮರಿ, ಮಕ್ಕಳು ಅಂತ ಕೂಡ ನೋಡದೆ ಅಕ್ಷರಶಃ ಮಾರಣಹೋಮ ಮಾಡಿಬಿಟ್ಟಿದ್ದರು. ಅಲ್ಲದೆ, ಪ್ರತಿಷ್ಠಿತ ಯೂನಿವರ್ಸಿಟಿಗಳಲ್ಲಿ ಹಿಂದೂ ಯುವಕರನ್ನ ಸರ್ಕಾರದ ವಿರುದ್ಧ ಎತ್ತಿ ಕಟ್ಟಿ, ಕಾಶ್ಮೀರಿ ಪಂಡಿತರ ಹತ್ಯೆಗೆ ಭಾರತೀಯ ಸೇನೆಯೇ ಕಾರಣ ಅಂತ ಎತ್ತಿ ಕಟ್ಟುವ ಕಾರ್ಯ ಮಾಡಿದ್ರು.
ಈ ಎಲ್ಲಾ ಬೆಳವಣಿಗೆಗಳ ಕಂಪ್ಲೀಟ್ ಚಿತ್ರಣವೇ ದಿ ಕಾಶ್ಮೀರ್ ಫೈಲ್ಸ್. ಹೌದು.. ವಿವೇಕ್ ಅಗ್ನಿಹೋತ್ರಿ ಕಾಶ್ಮೀರ ಪಂಡಿತರ ಸಾಲು ಸಾಲು ಹತ್ಯೆಗಳ ನೈಜ ಘಟನೆ ಆಧಾರಿಸಿ ಸಿನಿಮಾ ಮಾಡಿದ್ರು. ಅದನ್ನ ಇಂದಿನ ಜನರೇಷನ್‌ಗೆ ದೊಡ್ಡ ಪರದೆ ಮೇಲೆ ತೋರಿಸಬೇಕು ಅಂತ ಸಾಕಷ್ಟು ಸಂಶೋಧನೆ ಮಾಡಿ ಅಚ್ಚುಕಟ್ಟಾಗಿ ತೆರೆಗೆ ತಂದಿದ್ರು. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ ಸೇರಿದಂತೆ ಅದ್ಭುತ ಕಲಾವಿದರು ತಾರಾಗಣದಲ್ಲಿದ್ದರು.
ಈ ಸಿನಿಮಾಗೆ ಸಾಕಷ್ಟು ಪ್ರಶಂಸೆ, ಪ್ರತಿಕ್ರಿಯೆಗಳು ಬಂತಾದರೂ, ಅಷ್ಟೇ ವಿರೋಧಗಳು ಕೂಡ ವ್ಯಕ್ತವಾದವು. ಆದ್ರೆ ಕೆಲ ರಾಜ್ಯಗಳು ಈ ಸಿನಿಮಾನ ಮೆಚ್ಚಿ, ಟ್ಯಾಕ್ಸ್ ಫ್ರೀ ಮಾಡಿದವು. ಅಂದಹಾಗೆ ಈ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ರೂವಾರಿ ಬಿಟ್ಟಾ. ಹೌದು.. ಬಿಟ್ಟಾ ನೇತೃತ್ವದ ಉಗ್ರಗಾಮಿಗಳ ಗುಂಪು, ನಾಡಿಮಾರ್ಗ್‌ಗೆ ಆಗಮಿಸಿ, ಅಲ್ಲಿ ಭಾರತೀಯ ಸೇನೆಯ ಸಮವಸ್ತ್ರದಲ್ಲಿ ಹಿಂದೂ ಪಂಡಿತರನ್ನ ಮನೆಯಿಂದ ಹೊರಗೆ ಕರೆಸಿ, ಅಮಾನುಷವಾಗಿ ಕೊಲ್ಲುತ್ತಾರೆ.
ಕಾಶ್ಮೀರಿ ಪಂಡಿತರ ಹತ್ಯೆಯ ತೀವ್ರತೆಗೆ ಸಾಕಷ್ಟು ಮಂದಿ ಹಿಂದೂಗಳು ಕಾಶ್ಮೀರದಲ್ಲಿ ವಾಸಿಸೋಕೆ ಭಯ ಬಿದ್ದು ಸೌತ್‌ನತ್ತ ಓಡಿ ಬರ್ತಾರೆ. ಒಂದಷ್ಟು ಮಂದಿಗೆ ದೆಹಲಿಯಲ್ಲಿ ನಿರಾಶ್ರಿತ ಕೇಂದ್ರಗಳನ್ನ ಮಾಡಿದ ಸರ್ಕಾರ, ನಂತ್ರ ಅವರಿಗೆ ಒಂದು ಸೂರು ಮಾಡಿಕೊಡದೆ ಕೈ ಬಿಡುತ್ತೆ. ಸದ್ಯ ಕಾಶ್ಮೀರಿ ಪಂಡಿತರ ಮಾರಣಹೋಮದ ಬಳಿಕ ಮತ್ತೆ ಅಂಥದ್ದೇ ಹೃದಯ ವಿದ್ರಾವಕ ಘಟನೆಯೊಂದು ಈಗ ಸಂಭವಿಸಿದೆ. ಮತ್ತದೇ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
ಲಷ್ಕರ್ ಇ ತೊಯ್ಬಾ ಸಂಘಟನೆಯ ಅಂಗ ಸಂಘಟನೆಯಾದ TRF, ಈ ಬಾರಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂ ಟೂರಿಸ್ಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಆಸಿಫ್ ನೇತೃತ್ವದ ಐದಾರು ಮಂದಿಯ ತಂಡ ಒನ್ಸ್ ಅಗೈನ್ ಇಂಡಿಯನ್ ಮಿಲಿಟರಿ ಸಮವಸ್ತ್ರಗಳನ್ನ ಧರಿಸಿ ಬಂದು ಪ್ರವಾಸಿಗರ ಮೇಲೆ ಗುಂಡಿನ ಮಳೆ ಸುರಿದಿದೆ. ಅದರಲ್ಲಿ ಸುಮಾರು 27 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 12ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ.
ಆ ಪೈಕಿ ನಮ್ಮ ಕರ್ನಾಟದಿಂದ ತೆರಳಿದ್ದ ಮೂವರು ಅಲ್ಲಿ ಉಸಿರು ಚೆಲ್ಲಿರೋದು ನೋವಿನ ಸಂಗತಿ. ಹೌದು.. ಶಿವಮೊಗ್ಗದ ಮಂಜುನಾಥ್ ರಾವ್, ಬೆಂಗಳೂರಿನ ಭರತ್ ಭೂಷಣ್ ಹಾಗೂ ಆಂಧ್ರದಿಂದ ಬಂದು ಬೆಂಗಳೂರಿನಲ್ಲಿ ಸೆಟಲ್ ಆಗಿದ್ದ ಮಧುಸೂಧನ್ ಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ವೇಳೆ ಅವ್ರನ್ನ ಭೀಕರವಾಗಿ ಕೊಂದಿದ್ದಾರೆ ಉಗ್ರ ಕ್ರಿಮಿಗಳು.
ಮದ್ವೆ ಆಗಿ ಹನಿಮೂನ್‌ಗೆಂದು ತೆರಳಿದ್ದ ನೂತನ ವಧುವಿನ ಮೆಹಂದಿ ಬಣ್ಣ ಕಳಚುವ ಮುನ್ನವೇ ಆಕೆಯಿಂದ ಪತಿಯನ್ನ ಕಸಿದುಕೊಂಡಿದ್ದಾರೆ ರಕ್ತಬೀಜಾಸುರರು. ಕಾಶ್ಮೀರ ಅಂದ್ರೆ ಪ್ರೇಮ ಕಾಶ್ಮೀರ ಅಂತ ಭಾವಿಸಿ, ನಿರ್ಭೀತಿಯಿಂದ ಅದರ ವಿಹಂಗಮ ನೋಟ ಸವಿಯಲು ದೇಶದ ಮೂಲೆ ಮೂಲೆಯಿಂದ ತೆರಳಿದ್ದ ಪ್ರವಾಸಿಗರಿಗೆ ಅದು ರಕ್ತ ಕಾಶ್ಮೀರವಾಗಿದೆ. ಇದು ನಿಜಕ್ಕೂ ಸಹಿಸಲಾರದ, ಅಮಾನವೀಯ, ಅಮಾನುಷ ಘಟನೆ ಆಗಿದೆ.
ಅದರಲ್ಲೂ ನೀನು ಹಿಂದೂನಾ ನೀನು ಹಿಂದೂನಾ ಅಂತ ಪದೇ ಪದೆ ಕೇಳಿ, ಪ್ಯಾಂಟ್ ಹಾಗೂ ಒಳ ಉಡುಪನ್ನು ಕಳಚಿ, ಹಿಂದೂಗಳನ್ನೇ ಟಾರ್ಗೆಟ್ ಮಾಡಿಕೊಂಡು ಪಾಯಿಂಟ್ ಬ್ಲಾಂಕ್‌ನಲ್ಲಿ ಗನ್ ಇಟ್ಟು ಕೊಂದಿದ್ದಾರೆ ನರರಾಕ್ಷಸರು. ಕಾಶ್ಮೀರದಲ್ಲಿ ಹಿಂದೂಗಳಿಗೆ ನೆಲೆ ಇಲ್ಲವೇ..? ಅಟ್‌ಲೀಸ್ಟ್ ಅಲ್ಲಿ ಪ್ರವಾಸಕ್ಕೆ ಅಂತಾದ್ರೂ ಹೋಗುವುದು ತಪ್ಪೇ..? ಇಷ್ಟು ಜನರ ಉಸಿರು ಕಸಿದ ಅವ್ರು ಅದ್ಹೇಗೆ ನೆಮ್ಮದಿಯಿಂದ ಉಸಿರಾಡ್ತಾರೆ..? ಹೊಟ್ಟೆಗೆ ಅನ್ನ ತಿಂತಾರೆ..? ಕಣ್ತುಂಬ ನಿದ್ದೆ ಮಾಡ್ತಾರೆ..? ಅನ್ನೋದು ಯಕ್ಷ ಪ್ರಶ್ನೆ.
ಬಹುಶಃ ಕಾಶ್ಮೀರ್ ಫೈಲ್ಸ್ ಸಿನಿಮಾನೇ ಕೊನೆ. ಮತ್ತೆ ಅಂತಹ ಕರುಳು ಕಿವುಚುವಂತಹ ಅಮಾನವೀಯ ಘಟನೆಗಳು ಮತ್ತೆ ಮರುಕಳಿಸದಿರಲಿ ಅಂತ ಎಲ್ಲರೂ ದೇವರಲ್ಲಿ ಪ್ರಾರ್ಥಿಸಿದ್ದರು. ಆದ್ರೀಗ ಕಾಶ್ಮೀರ್ ಫೈಲ್ಸ್ 2.ಓ ಮಾಡುವ ಪ್ರಮೇಯ ಬಂದಿದೆ. ಇದು ನಿಲ್ಲುವುದು ಯಾವಾಗ..? ಇದಕ್ಕೆ ಅಂತ್ಯ ಆಡುವವರು ಯಾರು..? ಅಯ್ಯೋ ದೇವರೇ ಬೇಗ ದಾರಿ ತೋರಿಸು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್