ಸದ್ದಿಲ್ಲದೆ ಎಂಗೇಜ್ ಆದ ಕಿರುತೆರೆಯ ಖ್ಯಾತ ನಟಿ ವೈಷ್ಣವಿ

Untitled design 2025 04 15t080714.841

ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಗುಡ್‌‌ ನ್ಯೂಸ್‌ ಕೊಟ್ಟಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ಈ ಕಿರುತೆರೆಯ ನಟಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಎಂಗೇಜ್‌ಮೆಂಟ್ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT
ADVERTISEMENT

ವೈಷ್ಣವಿ ಗೌಡ ಅವರು ಎಂಗೇಜ್ ಆದ ವ್ಯಕ್ತಿಯ ಹೆಸರು ಅನುಕೂಲ್ ಮಿಶ್ರಾ ಎನ್ನಲಾಗಿದ್ದು, ಅವರು ಏರ್ ಫೋರ್ಸ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಣ್ಣದ ಲೋಕದಿಂದ ಹೊರಗಿನ ವ್ಯಕ್ತಿಯನ್ನು ಜೀವನದ ಸಂಗಾತಿಯಾಗಿ ಆಯ್ಕೆ ಮಾಡಿರುವ ವೈಷ್ಣವಿ, ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಿದ್ದಾರೆ. ಎಂಗೇಜ್‌ಮೆಂಟ್ ಕಾರ್ಯಕ್ರಮವು ಸಡಗರ ಸಂಭ್ರಮದ ನಡುವೆಯೇ ನಡೆಯಿತು. ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ವೈಷ್ಣವಿ ಗೌಡ ಅವರು ತಮ್ಮ ನಟನ ಜೀವನದಲ್ಲಿ ‘ಸೀತಾ ರಾಮ’ ಧಾರಾವಾಹಿಯ ಮೂಲಕ ಜನಮನ ಗೆದ್ದಿದ್ದಾರೆ. ಸೀತಾ ಪಾತ್ರದಲ್ಲಿ ಅವರು ತೋರಿದ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಧಾರಾವಾಹಿಯ ಮತ್ತೊಬ್ಬ ನಟಿ ಮೇಘನಾ ಶಂಕರಪ್ಪ ಅವರು ಇತ್ತೀಚೆಗಷ್ಟೆ ವಿವಾಹವಾದರು. ಇದೀಗ ವೈಷ್ಣವಿ ಕೂಡಾ ಮದುವೆ ಹಾದಿಯತ್ತ ಪಾದಾರ್ಪಣೆ ಮಾಡುತ್ತಿದ್ದಾರೆ. ವೈಷ್ಣವಿ ಅವರು ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಾಗ ತಮ್ಮ ಮದುವೆ ಬಗ್ಗೆ ತಮ್ಮ ಕನಸುಗಳ ಬಗ್ಗೆ ಹಂಚಿಕೊಂಡಿದ್ದರು.

ಇದೇ ಸಂದರ್ಭದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ‘#VaishnaviEngagement’ ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳು ಹಾರೈಕೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.  ವೈಷ್ಣವಿ ಗೌಡ ಅವರ ವಿವಾಹದ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಆದರೆ ಅವರ ನಿಶ್ಚಿತಾರ್ಥದ  ಫೋಟೋ ಶೂಟ್ ಹಾಗೂ ವೀಡಿಯೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಹೊಸ ಹಾದಿಯಲ್ಲಿ ಕಾಲಿಟ್ಟಿರುವ ವೈಷ್ಣವಿಗೆ ಅಭಿಮಾನಿಗಳಿಂದ ಶುಭ ಹಾರೈಕೆ ಸಿಗುತ್ತಿವೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version