“ಕ್ರಿಟಿಕಲ್ ಕೀರ್ತನೆಗಳು”, “ಪ್ರೆಸೆಂಟ್ ಪ್ರಪಂಚ 0% ಲವ್” ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದಿದ ಯಶಸ್ ಅಭಿ ನಾಯಕನಾಗಿ ನಟಿಸಿರುವ “ನವಮಿ 9.9.1999” ಚಿತ್ರ ಕಳೆದ ಫೆಬ್ರವರಿಯದಲ್ಲಿ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಸಮಾರಂಭವನ್ನು ಆಯೋಜಿಸಿದ್ದ ನಾಯಕ ಯಶಸ್ ಅಭಿ ಚಿತ್ರದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ವಿತರಕ ನಾಗೇಶ್ ಕುಮಾರ್ ಯು ಎಸ್, ನಿರ್ಮಾಪಕ, ನಿರ್ದೇಶಕ ಜೆ.ಜಿ.ಶ್ರೀನಿವಾಸ್ ಹಾಗು ವೈದ್ಯರಾದ ಮಹಂತೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ತಮ್ಮ ಪ್ರೋತ್ಸಾಹದ ನುಡಿಗಳ ಮೂಲಕ ಶುಭ ಕೋರಿದರು. ನಂತರ ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಯಶಸ್ ಅಭಿ ಹಾಗೂ ತಂಡದವರು ಹಂಚಿಕೊಂಡರು.
ಇಂದಿನ ಸಂದರ್ಭದಲ್ಲಿ ನಮ್ಮ “ನವಮಿ” ಚಿತ್ರ 25 ದಿನ ಪೂರೈಸಲು ವಿತರಕರಾದ ನಾಗೇಶ್ ಕುಮಾರ್ ಅವರೆ ಕಾರಣ. ಅವರು ನಮಗೆ ಉತ್ತಮ ಚಿತ್ರಮಂದಿರಗಳನ್ನು ಕೊಡಸಿದರಿಂದ ನಮ್ಮ ಚಿತ್ರ ಈಗಲೂ ಕೆಲವು ಮಲ್ಟಿಪ್ಲೆಕ್ಸ್ ಗಳಲ್ಲಿ 25 ದಿನಗಳನ್ನು ಪೂರೈಸಿ, 50 ದಿನಗಳತ್ತ ಸಾಗುತ್ತಿದೆ. ಪವನ್ ನಾರಾಯಣ್ ನಿರ್ದೇಶನದ, ಅದ್ದೂರಿ ತಾರಾಬಳಗ ಹೊಂದಿರುವ ನಮ್ಮ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ದೊರಕುತ್ತಿದೆ. ಚಿತ್ರಕ್ಕೆ ಸಹಕಾರ ನೀಡಿದ ತಂಡವನ್ನು ಗೌರವಿಸುವ ಉದ್ದೇಶದಿಂದ ಈ ಸಮಾರಂಭ ಆಯೋಜಿಸಿದ್ದೇವೆ. ಈ ಗೆಲುವು ಮುಂದಿನ ನಡೆಗೆ ಸ್ಪೂರ್ತಿ ಕೂಡ. ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಹಾಗೂ ಚಿತ್ರತಂಡದ ಸದಸ್ಯರಿಗೆ ಧನ್ಯವಾದ ಎಂದರು ನಾಯಕ ಯಶಸ್ ಅಭಿ.
ನಾಯಕಿ ನಂದಿನಿ ಗೌಡ, ಚಿತ್ರದಲ್ಲಿ ನಟಿಸಿರುವ ಕುರಿ ಸುನೀಲ, ರಾಜ್ ಉದಯ್, ಕರಾಟೆ ಶ್ರೀನಾಥ್, ಪವಿತ್ರ ಮುಂತಾದವರು ಚಿತ್ರದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.
ನಾಯಕ ಯಶಸ್ ಅಭಿ ಈ ಸಿನಿಮಾ ಮೂಲಕ ಒಂದಷ್ಟು ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿದ್ದಾರೆ. ಕೃಷ್ಣ ಗುಡೇಮಾರನಹಳ್ಳಿ ಹಾಗೂ ಯಶಸ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಹಾಗೇ ನಿರ್ದೇಶನದಲ್ಲಿಯು ಕೈ ಜೋಡಿಸಿರುವ ಯಶಸ್, ಪೂರ್ಣ ಪ್ರಮಾಣದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಎಸ್.ನಾರಾಯಣ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಶಂಕರ್ ಅಶ್ವಥ್, ಕುರಿ ಸುನೀಲ್, ಸಂದೀಪ್, ರಾಕೇಶ್ ಚಂದ್ರ(ಖಳನಟ) ಅಂತಹ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅನ್ನಪೂರ್ಣೇಶ್ವರಿ ಕ್ರಿಯೇಷನ್ಸ್ ಬ್ಯಾನರ್ ನಡಿ ಶಶಿಕುಮಾರ್ ಅವರು ನಿರ್ಮಾಣ ಮಾಡಿರುವ “ನವಮಿ” ಚಿತ್ರಕ್ಕೆ ಗಿರಿಧರ್ ದಿವಾನ್ ಸಂಗೀತ ನಿರ್ದೇಶನ, ಪ್ರದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಭಾರ್ಗವ್ ಕೆ.ಎಂ ಸಂಕಲನವಿದೆ.