ನೇಹಾ ಹಿರೇಮಠ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ನೇಹಾ ತಂದೆ ನಿರಂಜನ್ ಬಳಿ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ್ದಾರೆ. ನೇಹಾ ತಂದೆ ನಿರಂಜನ್ ಜೊತೆ ಫೋನಲ್ಲಿ ಮಾತ್ನಾಡಿದ ಸಿಎಂ ಸಿದ್ದರಾಮಯ್ಯ ಐಮ್ ವೆರಿ ಸಾರಿ ಅಂತ ಹೇಳಿದ್ದಾರೆ. ಸಚಿವ ಹೆಚ್ ಕೆ ಪಾಟೀಲ್ ಇಂದು ನಿರಂಜನ್ ಮನೆಗೆ ಭೇಟಿ ನೀಡಿದರು. ಈ ವೇಳೆ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮುಖ್ಯಮಂತ್ರಿ ಅವರಿಗೆ ಹೆಚ್.ಕೆ ಪಾಟೀಲ್ ಫೋನ್ ಮಾಡಿದರು. ನೇಹಾ ಕೊಲೆ ಪ್ರಕರಣನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದನ್ನು ಮತ್ತು ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ನಿರ್ಣಯವನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು ಅವರು ತಮ್ಮೊಂದಿಗೆ ಮಾತಾಡಿದ್ದಕ್ಕೂ ನಿರಂಜನ ಧನ್ಯವಾದ ಸಲ್ಲಿಸಿದರು. ಹಾಗೇ ಮಾತನಾಡುತ್ತ ಕೊನೆಯಲ್ಲಿ ಸಿಎಂ ಸಿದ್ದರಾಮಯ್ಯ ‘ನಿರಂಜನ್ ವೆರಿ ಸಾರಿ’ ಅಂತ ಗಟ್ಟಿಧ್ವನಿಯಲ್ಲಿ ಹೇಳಿದರು